ತಿರುಗಾಡೋಣ
ಬಾರೇ ಗೆಳತಿ
ಹಕ್ಕಿಗಳ ಸುಂದರ
ನಿನಾದವ ಕೇಳೋಣ ಬಾ
ಅಲ್ಲಿ ನೋಡು
ಉದ್ದ ಬಾಲದ ಹಕ್ಕಿ
ಕಾಳುಗಳ ತಿನ್ನುತಿದೆ
ಕುಕ್ಕಿ ಕುಕ್ಕಿ
ಗರಿ ಬಿಚ್ಚಿದ ಮಯೂರ
ನೋಡಲದೆಷ್ಟು ಸುಂದರ
ನಾಟ್ಯವಾಡಿದರೆ ಅದು
ಸುಂದರ ನೀರೇ
ಕತ್ತನು ಕೊಂಕಿಸಿ
ಅದೋ ನೋಡು
ಮಾತಾಡುತಿದೆ
ನೋಡಲ್ಲಿ ಗಿಳಿವಿಂಡು
ಮೆತ್ತನೆ ಸುಂದರ
ಹಾಸನು ಹಾಸಿದೆ ನೋಡು
ಸುಂದರ ಗುಲಾಬಿ
ಎನ್ನುತಿದೆ ಅವೋ ಅಭಿ
ಸುಂದರ ಈ ಪರಿಸರ
ಆನಂದದ ಮಹಾಪೂರ
ಬಣ್ಣ ಬಣ್ಣದ ಈ ಸೃಷ್ಟಿ
ಆನಂದದ ಪರಮೇಷ್ಟಿ
ಸೃಷ್ಟಿಸಿದ ಅದ್ಭುತ ಕಲಾವಿದ
ಎಲ್ಲೆಯೇ ಇಲ್ಲದ ಅಮೋದ
ಆ ಅದ್ಭುತ ಕಲಾವಿದನಿಗೊಂದು
ನುಡಿ ನಮನ ನಮ್ಮದೊಂದು
-ರೇಖಾ. ಮುತಾಲಿಕ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ