ಹಳ್ಳಿಗಾಡಿನ ಮಣ್ಣ ಒಲೆಯಲಿ
ಅಡುಗೆ ಮಾಡಲು ರುಚಿಕರ|
ಪುಳ್ಳೆ ಸೌದೆಯ ಉರಿಸಿ ತಿಂಡಿಯ
ಮಾಡಿ ತಿಂದರೆ ಹಿತಕರ||
ಮಡಕೆಯೊಳಗಡೆ ಹುರುಳಿ ಸಾರಿನ
ಚೆಂದ ವಾಸನೆ ಘಮಘಮ|
ತಡವ ಮಾಡದೆ ಮುದ್ದೆ ಮಾಡಲು
ಸ್ವಾದ ತುಂಬಿದ ಸಂಗಮ||
ಹಸಿಯ ಸೌದೆಯ ಒಟ್ಟಲಂತೂ
ಬಹಳ ಹೊಗೆಯೇ ಮನೆಯಲಿ|
ಮಸಿಯು ಆಗುತ ಪಾತ್ರೆಯೆಲ್ಲವು
ಮೆತ್ತಿ ಬಿಡುವುದು ಕೈಯಲಿ||
ಊದು ಕೊಳವೆಯ ಬಾಯಲೂದುತ
ಒಲೆಯ ಉರಿಯನು ಮಾಳ್ಪರು|
ಸ್ವಾದ ತುಂಬಿದ ಅಡುಗೆ ಮಾಡುತ
ಮನೆಯ ಮಂದಿಗೆ ಕೊಡುವರು||
ಈಗ ಕಾಣದು ಮಣ್ಣ ಒಲೆಗಳು
ಮಾಯವಾಗುತ ಬಂದಿವೆ|
ಬೇಗ ಬೇಗನೆ ಅನಿಲ ಒಲೆಗಳು
ಅಡುಗೆ ಮನೆಯನು ಸೇರಿವೆ||
- ಅಶ್ವತ್ಥನಾರಾಯಣ, ಮೈಸೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

