ಮಂಗಳೂರು: ಜೂ.18, 19 ರಂದು ವಿವಿಧೆಡೆ ವಿದ್ಯುತ್‌ ನಿಲುಗಡೆ

Upayuktha
0


ಮ೦ಗಳೂರು: ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಕುಡುಪಾಡಿ ಫೀಡರ್‌ನಲ್ಲಿ ಜೂ. 18ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಇಂಟಾಗಲಿದೆ. 


ಫೀಡರ್ ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ನಂದಿಗುಡ್ಡ, ಬಪ್ಪಾಲ್‌, ಮಜಿಲ, ಯೆನಪೋಯ ಕ್ಲಸ್ಟರ್ಸ್‌, ರೋಶನಿ ನಿಲಯ, ವೆಲೆನ್ಸಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.


ಮರೋಳಿ

ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಮರೋಳಿ ಫೀಡರ್‌ನಲ್ಲಿ ಜೂ. 18 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿಯನ್ನುಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮರೋಳಿ, ಜಯನಗರ, ವಸಂತನಗರ, ಎಂಜಲೋರ್‌ ಚರ್ಚ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ. 



ಜೂ.19 ರಂದು ವಿವಿಧೆಡೆ ವಿದ್ಯುತ್‌ ನಿಲುಗಡೆ

ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಕುಡುಪು ಫೀಡರ್‌ನಲ್ಲಿ ಜೂ.19 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಕುಡುಪು, ಸರಿಪಲ್ಲ, ನೂಜಿ, ಸಿಲ್ವರ್‌ಗೇಟ್‌, ಡೈರಿ, ಬೈತುರ್ಲಿ, ಜೆ.ಎಚ್.ಬಿ ಲೇಔಟ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.


ತಾರೆತೋಟ

ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ತಾರೆತೋಟ (ಪದವು) ಫೀಡರ್‌ನಲ್ಲಿ ಜೂ. 19 ರಂದು ಬೆಳಗ್ಗೆ 10 ರಿಂದ ಸಂಜೆ 5  ಗಂಟೆಯವರೆಗೆ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಅದುದರಿ೦ದ ಬಿಕರ್ನಕಟ್ಟೆ, ಜಯಶ್ರೀ ಗೇಟ್‌, ತಾತಾವು, ತಾರೆತೋಟ, ಜಯನಗರ, ಬಜ್ಜೋಡಿ, ಸಂದೇಶ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.


ಬಿಜೈ/ವಿವೇಕನಗರ

ಬಿಜೈ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ವಿವೇಕನಗರ ಫೀಡರ್‌ನಲ್ಲಿ ಜೂ. 19 ರಂದು ಬೆಳಗ್ಗೆ 10 ರಿಂದ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನುಹಮ್ಮಿಕೊಳ್ಳಲಾಗಿದೆ. ಹಾಗಾಗಿ ಶ್ರೀದೇವಿ ಕಾಲೇಜು ರಸ್ತೆ, ಕೆ.ಎಸ್.ಆರ್.ಟಿ.ಸಿ, ಸಿ.ಜಿ ಕಾಮತ್‌ ರಸ್ತೆ, ಜೈಲ್‌ ರೋಡ್‌, ಎಂ.ಜಿ ರೋಡ್‌, ಲಾಲ್‌ಭಾಗ್‌ ರಸ್ತೆ, ಬಳ್ಳಾಲ್‌ಬಾಗ್‌, ಮಾನಸ ಟವರ್‌ ಎದುರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top