ಕು. ಸೌಜನ್ಯ ಬಿ. ಎಂ. ರವರಿಗೆ ಕನ್ನಡ ಎಂ. ಎ. ಪ್ರಥಮ ರ್‍ಯಾಂಕ್‌

Upayuktha
0


ಪುತ್ತೂರು: ಕುಮಾರಿ ಸೌಜನ್ಯ ಬಿ.ಎಂ ರವರು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಹೆಮ್ಮೆಯ ವಿದ್ಯಾರ್ಥಿನಿಯಾಗಿದ್ದು ಕನ್ನಡ ಎಂ. ಎ. ಯಲ್ಲಿ ಪ್ರಥಮ ರ್‍ಯಾಂಕ್‌ ಜಿಲ್ಲೆಗೆ ತಂದು ಅಪೂರ್ವ ಸಾಧನೆಯನ್ನು  ಮಾಡಿದ ಹೆಗ್ಗಳಿಕೆ ಪಡೆದಿದ್ದಾರೆ.

2023-24ನೇ ಶೈಕ್ಷಣಿಕ ಸಾಲಿನಲ್ಲಿ ಈ ವಿಶೇಷ ಸಾಧನೆ ಮಾಡಿದ  ಹೆಮ್ಮೆಯ ಸೌಜನ್ಯ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಬಾಬು ಎಂ ಮತ್ತು ಸುಂದರಿ ಬಿ ಎಂ ಇವರ ಪುತ್ರಿ. ಪಠ್ಯದ ಜೊತೆಗೆ ಸಾಹಿತ್ಯ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ.

"ಸೌಜನ್ಯ ಹೆಸರಿಗೆ ತಕ್ಕಂತೆ ಸೌಜನ್ಯ ಭರಿತ ಮೃದು ಸ್ವಭಾವದ ಹುಡುಗಿ. ನಮ್ಮ ಸರ್ಕಾರಿ ಕಾಲೇಜಿಗೆ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಎರಡನೆಯ ಬಾರಿಗೆ ಪ್ರಥಮ ರ‌್ಯಾಂಕ್  ಗಳಿಸಿಕೊಟ್ಟ ಸೌಜನ್ಯ ರ ಸಾಧನೆ  ಕಾಲೇಜಿಗೆ ಮೆರುಗನ್ನು ತಂದಿದೆ" ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುಬ್ಬಪ್ಪ ಕೈಕಂಬ ತಿಳಿಸಿದರು.

ಇವರು ಚಿಗುರೆಲೆ ಸಾಹಿತ್ಯ ಬಳಗದ ಸಕ್ರೀಯ ಸದಸ್ಯರಾಗಿದ್ದು, ನಿರೂಪಣೆ, ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ನಡೆಸಿದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ ಅನನ್ಯ ಪ್ರತಿಭೆ.

ಈಗಾಗಲೇ ಯು ಜಿ ಸಿ ನೆಟ್ ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿದ್ದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ಪ್ರಸ್ತುತ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ, ಪುತ್ತೂರು ಇಲ್ಲಿ ಪ್ರಥಮ ವರ್ಷದ ಬಿ.ಎಡ್ ವ್ಯಾಸಂಗ ಮಾಡುತ್ತಿದ್ದಾರೆ.

ಹಾಗೆಯೇ ಸೌಜನ್ಯರ ಸಾಧನೆಯ ಹಿಂದೆ ಶ್ರಮಿಸಿದ  ಪ್ರೋತ್ಸಾಹಿಸಿದ  ಹೆಮ್ಮೆಯ ಪ್ರಾಧ್ಯಾಪಕ  ವೃಂದ  ಅಭಿನಂದನೆಗಳಿಗೆ ಪಾತ್ರರಾಗಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top