ಮರ್ಯಾದಾ ಪುರುಷ ಶ್ರೀರಾಮ ಮತ್ತು ವಾಲಿ

Upayuktha
0



ದು ಶ್ರೀರಾಮಚಂದ್ರ ಸೀತೆಯನ್ನು ಹುಡುಕಿ ಕಿಷ್ಕಿಂದೆಗೆ ಬಂದು, ಸುಗ್ರೀವನ ಸ್ನೇಹವಾಗಿ ಆತನ ಸಹೋದರ ವಾಲಿಯನ್ನು ಮರೆಯಲ್ಲಿ ಅಡಗಿ ನಿಂತು ಬಾಣ ಹೂಡಿ ಕೊಂದ ಸಮಯ.


ಅಣ್ಣ ವಾಲಿ ಕೊನೆಯುಸಿರೆಳೆಯುವಾಗ ಆತನ ಸುತ್ತಲೂ ಸುಗ್ರೀವನಾದಿಯಾಗಿ ಎಲ್ಲ ವಾನರರು ಸೇರಿದರು. ಪ್ರಭು ಶ್ರೀ ರಾಮನು ಕೂಡ ವಾಲಿಗೆ ತನ್ನ ಕೊನೆಯ ನಮನಗಳನ್ನು ಸಲ್ಲಿಸಲು ಆತನ ಮುಂದೆ ಬಂದು ನಿಂತ.


ಇನ್ನೇನು ಸಾಯುವ ಗಳಿಗೆ ಹತ್ತಿರದಲ್ಲಿದ್ದಾಗಲೂ ಕೂಡ ತನ್ನೆದುರು ಬಂದು ನಿಂತ ಪ್ರಭು ಶ್ರೀ ರಾಮನನ್ನು ಕುರಿತು ವಾಲಿಯು ರೋಷದಿಂದ... "ಇಡೀ ಜಗತ್ತು ನಿನ್ನನ್ನು ಮರ್ಯಾದಾ ಪುರುಷ ಎಂದು ಕೊಂಡಾಡುತ್ತದೆ. ನೀನೆಂಥ ಮರ್ಯಾದಾ ಪುರುಷ? ಮರೆಯಲ್ಲಿ ನಿಂತು ಶತ್ರುವನ್ನು ವಧಿಸುವುದು ಮರ್ಯಾದೆಯೇ?" ಎಂದು ಕೇಳಿದನು.


ಅದಕ್ಕೆ ಉತ್ತರವಾಗಿ ಶ್ರೀರಾಮಚಂದ್ರನು "ಮಹಾವೀರ.... ಮರ್ಯಾದ ಪುರುಷ ತನ್ನ ಕಣ್ಣ ಮುಂದೆ ನಡೆಯುವ ಅನ್ಯಾಯವನ್ನು ನೋಡಿ ಸುಮ್ಮನೆ ಕೂಡುವುದಲ್ಲ. ಯಾವುದೇ ವ್ಯಕ್ತಿ ಇರಲಿ ತನ್ನ ಸೋದರಿ,ಪುತ್ರಿ, ಸೋದರನ ಹೆಂಡತಿ ಮತ್ತು ಪುತ್ರನ ಹೆಂಡತಿಯನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು. ಅದು ಅಪಚಾರ. ಆದರೆ ನೀನು ಸುಗ್ರೀವನ ಪತ್ನಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ನಿನ್ನವಳನ್ನಾಗಿಸಿಕೊಳ್ಳುವ ಪ್ರಯತ್ನ ಮಾಡಿದೆ. ಇದು ಮರ್ಯಾದೆಯೇ? ನಿನ್ನ ಪುತ್ರನಾದರೂ ಈ ಮಾತನ್ನು ಒಪ್ಪುತ್ತಾನೆಯೇ? ಎಂದು ಯೋಚಿಸು. ನೀನು ಮಾಡಿದ ತಪ್ಪು ನಿನ್ನನ್ನು ಈ ಸ್ಥಿತಿಗೆ ತಂದಿದೆ. ಮರಣ ಸನ್ನಿಹಿತವಾಗಿರುವ ಈ ಸಮಯದಲ್ಲಿಯೂ ನೀನು ಹೀಗೆ ಯೋಚಿಸುತ್ತಿರುವುದು ತಪ್ಪು ಎಂದು ಹೇಳಿದಾಗ ವಾಲಿ ತನ್ನ ತಪ್ಪಿನ ಅರಿವು ಮೂಡಿಸಿದ ಪ್ರಭು ಶ್ರೀರಾಮನಿಗೆ ಕೈಮುಗಿದು ಅಸು ನೀಗಿದನು.


ಸ್ನೇಹಿತರೇ, ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳ ಒಂದೊಂದು ಸನ್ನಿವೇಶವು ನಮಗೆ ಬದುಕಿನ ಮಹತ್ತರ ಪಾಠಗಳನ್ನು ಕಲಿಸುತ್ತವೆ.

ಎಲ್ಲರಿಗೂ ಎಲ್ಲಾ ಅನುಭವಗಳು ದಕ್ಕುವುದಿಲ್ಲ. ಎಲ್ಲಾ ಅಹಿತಕರ ಘಟನೆಗಳು ನಮಗೆ ಆಗಬೇಕೆಂದಿಲ್ಲ... ಆದರೆ ಬೇರೆಯವರ ಬದುಕಿನಲ್ಲಿ ನಡೆಯುವ ಘಟನೆಗಳು ನಮಗೆ ಕಲಿಸುವ ಪಾಠಗಳ ಮೂಲಕ ಹೊಸ ಬೆಳಕನ್ನು ಕಂಡುಕೊಳ್ಳೋಣ.


-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top