ಮುಜುಂಗಾವು ವಿದ್ಯಾಪೀಠದ ಪ್ರವೇಶೋತ್ಸವ -ಸ್ವಾಗತ ಭಾರತೀ

Upayuktha
0


ಮುಜುಂಗಾವು: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ 2024-25. ನೇ ಸಾಲಿನ ಪ್ರವೇಶೋತ್ಸವ  ಸ್ವಾಗತ ಭಾರತೀ ಕಾರ್ಯಕ್ರಮ ದಿನಾಂಕ 3-6-24 ರಂದು ಪೂರ್ವಾಹ್ನ. 10 ಗಂಟೆಗೆ ಶಂಖನಾದ,ಧ್ವಜಾರೋಹಣ ಹಾಗೂ ದೀಪಪ್ರಜ್ವಲನೆ ಯೊಂದಿಗೆ ನಡೆಯಿತು.


ಮುಖ್ಯ ಅತಿಥಿಗಳಾಗಿ ಆಗಮಿಸಿದ; ಕ್ಯಾಂಮ್ಕೋ ಸಂಸ್ಥೆಯ ಉಪಾಧ್ಯಕ್ಷರಾದ ಶಂ.ನಾ.ಖಂಡಿಗೆ ಮಾತನಾಡುತ್ತಾ "ಈ ವಿದ್ಯಾಪೀಠದ ವಿದ್ಯಾರ್ಥಿಗಳು ದೇಶವನ್ನು ಬೆಳಗುವ ದೀಪಗಳಾಗಲಿ" ಎಂದು ಶುಭವನ್ನು ಹಾರೈಸಿ, ಬದಲಾಗುತ್ತಿರುವ ಭಾರತದ ದೀಪಗಳು ನೀವಾಗಬೇಕೆಂದು ಕರೆ ನೀಡಿದರು. 


ಶಾಲಾ ಆಡಳಿತ ಸಮಿತಿ ಅಧ್ಯಕ್ಷರಾದ  ಎಸ್.ಎನ್ ರಾವ್ ಮುನ್ನಿಪ್ಪಾಡಿ  ಹಾಗೂ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಚೆಕ್ಕಣಿಕೆ ಶ್ರೀಯುತ ಬಾಲಕೃಷ್ಣ ಭಟ್ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಆಡಳಿತ ಸಮಿತಿ ಕಾರ್ಯದರ್ಶಿ ಶ್ರೀಯುತ ಶ್ಯಾಮರಾಜ ದೊಡ್ಡಮಾಣಿ  ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ವಿದ್ಯಾಲಯ ಮುಂದಿನ ವರ್ಷ ಬೆಳ್ಳಿ ಹಬ್ಬ ವನ್ನಾಚರಿಸಲಿದೆ, ಈ ಶುಭಸಂದರ್ಭದಲ್ಲಿ ಎಲ್ಲರ ಸಹಕಾರ ಅತ್ಯಂತ ಅವಶ್ಯವೆಂದರಲ್ಲದೆ, ವಿದ್ಯಾಲಯದ ಸಾಧನೆಗಳನ್ನು ತೆರೆದಿಟ್ಟರು . ಮುಖ್ಯ ಅಧ್ಯಾಪಕರಾದ  ಶ್ಯಾಂಭಟ್ ದರ್ಭೆಮಾರ್ಗ 24 ನೇ ವರ್ಷಕ್ಕೆ ಕಾಲಿಟ್ಟ ಈ ವಿದ್ಯಾಸಂಸ್ಥೆಯ ಹಾಗೂ ವಿದ್ಯಾರ್ಥಿಗಳ  ಶ್ರೇಯೋಭಿವೃದ್ಧಿಯ ಬಗ್ಗೆ ಮಾತನಾಡಿದರು. ಸಹ ಮುಖ್ಯೋಪಾಧ್ಯಾಯಿನಿ  ಚಿತ್ರಾಸರಸ್ವತಿ ಉಪಸ್ಥಿತರಿದ್ದು ಶುಭಕೋರಿದರು. ನೂತನ ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳನ್ನು ನೀಡಿ ಸ್ವಾಗತಿಸಲಾಯಿತು.

 

ಹತ್ತನೇತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಹಾಡಿ, ಶಿಕ್ಷಕಿಯರಾದ  ವಿದ್ಯಾಲಕ್ಷ್ಮಿ ಸ್ವಾಗತಿಸಿ,  ಶ್ರೀದೇವಿ ಮಾತಾಶ್ರೀ ಧನ್ಯವಾದವಿತ್ತ

 

ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ  ಸೌಮ್ಯಾ.ಪಿ  ನಡೆಸಿಕೊಟ್ಟರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top