ಜನ ಮನ ಸೂರೆಗೊಂಡ 'ವರ್ಷ ವೈಭವ'

Upayuktha
0


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ , ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಸಹಯೋಗದೊಂದಿಗೆ ಸುರತ್ಕಲ್ ಅಮರಾಲ್ಡ್ ಬೇ ಬೀಚ್ ರೆಸಾರ್ಟ್ ನ 'ಕನಸು' ಮನೆಯಂಗಳದಲ್ಲಿ ಆಯೋಜಿಸಿದ  'ವರ್ಷ ವೈಭವ' ಕವಿ ಗೋಷ್ಠಿ ಹಾಗೂ ಕನ್ನಡ ಹಾಡು ಕಾರ್ಯಕ್ರಮ ಸಾಹಿತ್ಯಾಸಕ್ತರಿಗೆ ಹರ್ಷ ನೀಡುವಲ್ಲಿ ಯಶಸ್ವಿಯಾಯಿತು. 


ಮುಖ್ಯ ಅತಿಥಿಯಾಗಿ ಮಾತನಾಡಿದ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಅವರು ಮಾತನಾಡಿ ಇಂತಹ ತಳಮಟ್ಟದ ಕಾರ್ಯಕ್ರಮಗಳು  ಕನ್ನಡದ ಕಂಪು ಹರಡುವಲ್ಲಿ ಹೆಚ್ಚು ಪರಿಣಾಮಕಾರಿ ಎಂದು ವಿವರಿಸಿದರು. ಈ ನಿಟ್ಟಿನಲ್ಲಿ ತಾಲೂಕು ಘಟಕ ಶ್ಲಾಘನೀಯ   ಸೇವೆ ಸಲ್ಲಿಸುತ್ತಿದೆ ಎಂದರು.


ಎಸ್. ಕೆ. ಗೋಪಾಲಕೃಷ್ಣ ಭಟ್ , ಗೋಪಾಲಕೃಷ್ಣ ಬೊಳುಂಬು , ಡಾ| ಶೈಲಜಾ ಏತಡ್ಕ , ಅಕ್ಷತಾ ಶೆಟ್ಟಿ ,   ಗಣೇಶ್ ಪ್ರಸಾದ್ ಜೀ , ಎನ್. ಸುಬ್ರಾಯ ಭಟ್ ವರ್ಷದ ಸ್ಪರ್ಶದ ಕವನಗಳ ಮೂಲಕ ಸಾಹಿತ್ಯಾಸಕ್ತರಿಗೆ ಹರ್ಷ ತಂದರೆ ಮುರಳೀಧರ ಭಾರದ್ವಾಜ್ , ಪ್ರತೀಕ್ಷಾ ಭಟ್ ಕೋಂಬ್ರಾಜೆ , ಪುಟಾಣಿ ಸಹಸ್ರ ಕೋಂಬ್ರಾಜೆ , ಮತ್ತು ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವುಡ ಅವರ ಮಳೆ ಸಂಬಂಧಿತ ಮತ್ತು ಇತರ  ಕನ್ನಡ ಹಾಡುಗಳ ಗಾಯನ ಕೇಳುಗರು ತಲೆದೂಗುವಂತೆ ಮಾಡಿದವು.


ಘಟಕದ ಅಧ್ಯಕ್ಷ ಡಾ | ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಯೋಧ ಕಾಂತಿಲ ಶಿವರಾಮ ಭಟ್ ಉಪಸ್ಥಿತರಿದ್ದರು. ಆಗಮಿಸಿದ್ದ ಸಾಹಿತ್ಯಾಸಕ್ತರು ಕಾರ್ಯಕ್ರಮದ ಬಗೆಗೆ ಮೆಚ್ಚುಗೆಯ ಮಾತುಗಳನ್ನಾಡಿದರು.


ಕ ಸಾ ಪ ಕೇಂದ್ರ ಮಾರ್ಗದರ್ಶಕ ಸಮಿತಿಯ ಸದಸ್ಯರೂ , ಪ್ರತಿಷ್ಠಾನದ ಮುಖ್ಯಸ್ಥರೂ ಆಗಿರುವ ಡಾ. ಮುರಲೀಮೋಹನ್ ಚೂಂತಾರು ಸ್ವಾಗತಿಸಿದರು. ಎನ್. ಸುಬ್ರಾಯ ಭಟ್ ನಿರೂಪಿಸಿದರು. ಗಣೇಶ್ ಪ್ರಸಾದ್ ಜೀ ವಂದಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top