ಮಂತ್ರಾಲಯ ಕ್ಷೇತ್ರದಲ್ಲಿ ಬೆಂಗಳೂರಿನ ಸಹೋದರಿಯರ ಗಾಯನ

Upayuktha
0


ಆಂಧ್ರಪ್ರದೇಶ: ಆಂಧ್ರಪ್ರದೇಶದ ಪ್ರಸಿದ್ಧ ಪುಣ್ಯಕ್ಷೇತ್ರವಾದ 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಸನ್ನಿಧಾನವಾದ ಮಂತ್ರಾಲಯದಲ್ಲಿ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಜೂನ್ 2, ಭಾನುವಾರದಂದು ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪುಟ್ಟ ಸಹೋದರಿಯರಾದ  ಅನುಷಾ ಸಾವಿತ್ರಿ ಭಟ್ ಮತ್ತು ಅನ್ವಿತಾ ಸಾವಿತ್ರಿ ಭಟ್ ಇವರುಗಳು ಹರಿದಾಸರ ಕೃತಿಗಳನ್ನೂ ಹಾಗೂ ಶ್ರೀ ಅನ್ನಮಾಚಾರ್ಯರ ಕೀರ್ತನೆಗಳನ್ನೂ ಪ್ರಸ್ತುತಪಡಿಸಿದರು. 


ಇವರ ಗಾಯನಕ್ಕೆ ವಿದ್ವಾನ್ ಗೋಪಾಲ ಗುಡಿಬಂಡೆ ತಬಲಾ ವಾದನದಲ್ಲಿ ಮತ್ತು ವಿದ್ವಾನ್ ಶ್ರೀಪಾದದಾಸ್ ಕೀ-ಬೋರ್ಡ್ ವಾದನದಲ್ಲಿ ಸಾಥ್ ನೀಡಿದರು. ಕಾರ್ಯಕ್ರಮದ ನಂತರ ಶ್ರೀ ಮಠದ ವತಿಯಿಂದ ಮಕ್ಕಳಿಗೆ ಗುರುಗಳ ಮಹಾಪ್ರಸಾದ ಮತ್ತು ಅನುಗ್ರಹ ಪತ್ರ ನೀಡಿ ಆಶೀರ್ವದಿಸಿದರು.




 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top