ರಮ್ಯಾ ಕೆ.ಆರ್ ಗೆ ಡಾಕ್ಟರೇಟ್ ಪದವಿ

Upayuktha
0


ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ರಮ್ಯಾ ಕೆ ಆರ್ ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿ ಎಚ್ ಡಿ ಪದವಿ ನೀಡಿ ಗೌರವಿಸಿದೆ.


ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಪ್ರೊ. ಸುಭಾಷಿಣಿ ಶ್ರೀವತ್ಸ ಅವರ ಮಾರ್ಗದರ್ಶನದಲ್ಲಿ ಇವರು "Role of Financial Inclusion in Women Empowerment of Kudubi Community in Karnataka" ಎಂಬ ಪ್ರೌಢ ಪ್ರಬಂಧ ಸಿದ್ಧಪಡಿಸಿದ್ದರು. 


ಸೌಭಾಗ್ಯ ನಿಲಯ, ಮಾರುತಿ ನಗರ ಬಡಾವಣೆ, ಹೊಸಬೆಟ್ಟು, ಸುರತ್ಕಲ್ ನ ನಿವಾಸಿಯಾಗಿರುವ  ರಮ್ಯಾ ಕೆ.ಆರ್, ದಕ್ಷಿಣ ರೈಲ್ವೇಯ ನಿವೃತ್ತ ಸ್ಟೇಷನ್ ಮ್ಯಾನೇಜರ್ ಕೆ ರಾಮಯ್ಯ ಹಾಗೂ ಶಾರದಾ ದಂಪತಿಯ ಪುತ್ರಿ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪೊಳಲಿ ಶಾಖೆಯ ಉದ್ಯೋಗಿ ಸಂತೋಷ್ ನಾಯ್ಕ್ ರವರ ಪತ್ನಿ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top