ಮಂಗಳೂರು ವಿವಿ 42ನೇ ಘಟಿಕೋತ್ಸವ: ಬೆಳ್ತಂಗಡಿಯ ಪದ್ಮರೇಖಾಗೆ ಯೋಗ ವಿಜ್ಞಾನ MSc ಯಲ್ಲಿ ಚಿನ್ನದ ಪದಕ

Upayuktha
0


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವ ಇಂದು (ಜೂನ್ 15, ಶನಿವಾರ) ನಡೆದಿದ್ದು, ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ತಾವರ್ ಚಂದ್ ಗೆಹ್ಲೋಟ್ ಅವರು ವಿವಿಧ ವಿಷಯಗಳ ಪದವೀಧರರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಿದರು.


ಮಾಸ್ಟರ್ ಆಫ್ ಹ್ಯೂಮನ್ ಕಾನ್ಷಿಯಸ್‌ನೆಸ್ ಅಂಡ್ ಯೋಗಿಕ್ ಸೈನ್ಸ್ ವಿಭಾಗದಲ್ಲಿ ಪದ್ಮರೇಖಾ ಕಮಲಾಕರ ಭಟ್ಟ ಅವರು ಅತ್ಯಧಿಕ ಸಿಜಿಪಿಎ ಮಾನದಂಡದೊಂದಿಗೆ ಚಿನ್ನದ ಪದಕ ಸಹಿತ ರ್‍ಯಾಂಕ್ ಗಳಿಸಿದ್ದಾರೆ.


ದಿವಂಗತ ಸರಸ್ವತಿ ಅಲಿಯಾಸ್ ಉಮಾ ಬಾಯಿ ಕಿಣಿ ಸ್ಮಾರಕ ಚಿನ್ನದ ಪದಕ ಇದಾಗಿದ್ದು, ಯೋಗ ವಿಜ್ಞಾನದ ಸ್ನಾತಕೋತ್ತರ ಪದವಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿಗೆ ನೀಡಲಾಗುತ್ತಿದೆ. ಈ ಬಾರಿ ಈ ರ್‍ಯಾಂಕ್‌ಗೆ ಪದ್ಮರೇಖಾ ಅವರು ಪಾತ್ರರಾಗಿದ್ದಾರೆ.


ಪದ್ಮರೇಖಾ ಅವರು ಪದವಿ ಶಿಕ್ಷಣವನ್ನು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪಡೆದಿದ್ದರು. ಬಳಿಕ ಅದೇ ಕಾಲೇಜಿನಲ್ಲಿ ಕ್ಲಿನಿಕಲ್ ಸೈಕಾಲಜಿ ವಿಷಯದಲ್ಲಿ ಎಂಎಸ್‌ಸಿ ಪದವಿ ಪಡೆದಿದ್ದರು. ಈಕೆ ಬೆಳ್ತಂಗಡಿಯ ನಿವಾಸಿ ಹಾಗೂ ಹಾಸನದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‌ನ ಉದ್ಯೋಗಿಯಾಗಿರುವ ಸ್ವಸ್ತಿಕ ಕುಳಮರ್ವ ಅವರ ಪತ್ನಿ.


Post a Comment

0 Comments
Post a Comment (0)
To Top