ಮಂಗಳೂರು: ಪ್ರಧಾನಿ ನರೇಂದ್ರ ಮೋದಿರವರು ವಿಶ್ವ ಪರಿಸರ ದಿನದ ಅಂಗವಾಗಿ ದೇಶದಾದ್ಯಂತ ʻಏಕ್ ಪೇಡ್ ಮಾಂ ಕೆ ನಾಮ್ʼ, ತಾಯಂದಿರ ಹೆಸರಿನಲ್ಲಿ ಗಿಡನೆಡುವ ಅಭಿಯಾನಕ್ಕೆ ನೀಡಿದ ಕರೆಯ ಮೇರೆಗೆ ದಕ್ಷಿಣ ಕನ್ನಡದ ನೂತನ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ವೃದ್ದಾಶ್ರಮದ ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಡಾ.ಗಿರಿಧರ್ ರಾವ್ ಸಂಜೀವಿ ಭಾಯಿ ವೃದ್ದಾಶ್ರಮದಲ್ಲಿರುವ ತಾಯಂದಿರ ಹೆಸರಿನಲ್ಲಿ ಗಿಡನೆಟ್ಟ ಗಳಿಗೆ ಅವಿಸ್ಮರಣೀಯ, ಪ್ರಧಾನಿ ನರೇಂದ್ರ ಮೋದಿಯವರು ಅಪಾರವಾಗಿ ಗೌರವಿಸುವ ನಾರೀಶಕ್ತಿ ನನ್ನ ಚುನಾವಣಾ ಸಮಯದಲ್ಲಿ ಮಹತ್ವದ ಪಾತ್ರವಹಿಸಿದೆ ಹಾಗೂ ತಾಯಂದಿರು ನೀಡಿದ ಠೇವಣಿ ಹಣ ನನಗೆ ಅಮೂಲ್ಯವಾದದ್ದು ಎಂದು ಸ್ಮರಿಸಿದರು.
ದೇಶದಾದ್ಯಂತ ತಾಯಂದಿರ ಹೆಸರಿನಲ್ಲಿ ಗಿಡನೆಡುವ ಅಭಿಯಾನ ಯಶಸ್ವಿಯಾಗಬೇಕು, ಮಂಗಳೂರು ಕೂಡ ಹಸಿರು ಕುಡ್ಲ-ಸ್ವಚ್ಛ ಕುಡ್ಲ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂಬ ಮನವಿ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ