ಲೇಖಾ ಲೋಕ-4: ಸಮನ್ವಯ ಕವಿ ಚನ್ನವೀರ ಕಣವಿ

Upayuktha
0


ಹೊಸಗನ್ನಡ ಕನ್ನಡ ಸಾಹಿತ್ಯದಲ್ಲಿ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್ ಎಂದೇ ಪ್ರಸಿದ್ಧರಾಗಿದ್ದ, ಚನ್ನವೀರ ಕಣವಿಯವರು, ಬರಹಗಾರರಲ್ಲಿ  ಒಬ್ಬ ಪ್ರಖ್ಯಾತ ಕವಿ ಎಂದೇ ಗುರುತಿಸಲ್ಪಟ್ಟಿದ್ದರು.


ಕವಿತೆಗಳನ್ನು ಬರೆದು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ವಿಶಿಷ್ಟ ಕವಿ! ಸಮನ್ವಯ ಕವಿ, ಸಮಾಧಾನದ ಕವಿ, ಸುಂದರವಾದ ಬೆಳಕಿನ ಕವಿ,  ಸೌಜನ್ಯದ ಕವಿ ಎಂದೇ ಕನ್ನಡ ನಾಡಿನಲ್ಲಿ ಪ್ರಖ್ಯಾತರಾಗಿದ್ದರು. 


ಭಾರತೀಯ ಕನ್ನಡ ಭಾಷೆಯ ಕವಿಯೆನಿಸಿ, ಸುಮಾರು ಏಳು ದಶಕಗಳ ಕಾಲ, ತಮ್ಮ ವೃತ್ತಿ ಜೀವನದಲ್ಲಿ, 25ಕ್ಕೂ ಹೆಚ್ಚು ಕವನ ಸಂಕಲನಗಳನ್ನು,  ಮತ್ತು ಇತರ ಪ್ರಕಾರಗಳಲ್ಲಿ, 28ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಇವರು 1981ರಲ್ಲಿ ರಚಿಸಿದ ಜೀವಧ್ವನಿ ಕವಿತೆಗೆ (ಲಿಟ್ ದಿ ಸೌಂಡ್ ಆಫ್ ಲೈಫ್) ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು ವಿಶೇಷ.   


ಕರ್ನಾಟಕದ ಗದಗ ಜಿಲ್ಲೆಯ, ಹೊಂಬಳ ಗ್ರಾಮದಲ್ಲಿ, ಸಕ್ಕೆರೆಪ್ಪ ಮತ್ತು ಪಾರ್ವತವ್ವ ಅವರ ಪುತ್ರನಾಗಿ 28-6-1928 ಜನಿಸಿದರು. ಇವರ ತಂದೆ  ಪ್ರಾಥಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಚನ್ನವೀರ ಕಣವಿಯವರು, ಮಾಧ್ಯಮಿಕ, ಕಾಲೇಜು ಶಿಕ್ಷಣ, ಧಾರವಾಡದಲ್ಲಿ ಪೂರೈಸಿದರು. 1952ರಲ್ಲಿ, ಎಂ.ಎ ಪದವಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದು, ಅದೇ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 

ತದನಂತರ, ಪ್ರಸಾರಾಂಗ ವಿಭಾಗದಲ್ಲಿ, 1956ರಿಂದ 1983ರವರೆಗೆ, ನಿದೇ೯ಶಕರಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀ ಕಣವಿಯವರು ಸಾಹಿತ್ಯ ಸಂಸ್ಕೃತಿಯಲ್ಲಿ,   ಆಸಕ್ತಿವುಳ್ಳ, ಶಾಂತಾದೇವಿಯವರನ್ನು ವಿವಾಹವಾದರು. ಚನ್ನವೀರ ಕಣವಿಯವರು ವಿಮರ್ಶೆಗಳನ್ನು ಬರೆದರೂ, ಕವಿಯಾಗಿ ಗುರುತಿಸಿಕೊಂಡಿರುವ   ನಾಡಿನ ಹೆಸರಾಂತ ಬರಹಗಾರರು. ನವೋದಯದ ನಡುಹಗಲ ಕಾಲದಲ್ಲಿ, ಬೇಂದ್ರೆ, ಕುವೆಂಪು, ಪು.ತಿ.ನ, ಮಧುರಚೆನ್ನ ಮೊದಲಾದವರ ಕಾವ್ಯ ಗಳು, ಹೊಸದಾಗಿ ರಚನೆಗೊಂಡ ಸಮಯದಲ್ಲಿ, ಕಾವ್ಯ ರಚನೆಕಾರರಿಗೆ ಅತ್ಯಂತ ಪ್ರಭಾವ ಬೀರುವ ಕಾಲವಾಗಿತ್ತು.


ಕಣವಿಯವರ ಪ್ರಾರಂಭದ ಇವರ ಇಂಥ ರಚನೆಗಳು, ಆ ಕಾಲಘಟ್ಟದ ನೆಲೆಯೆಂದು ಗುರುತಿಸಬಹುದು. ಕಣವಿಯವರ ಕಾವ್ಯಗಳಲ್ಲಿ ರಮ್ಯ ಮನೋಧರ್ಮ, ಆದಶ೯ಪ್ರಿಯತೆ,  ಸಮನ್ವಯತೆ, ವ್ಯಕ್ತಿತ್ವ ನಿರ್ಮಾಣದ ಆಸೆ ಆಕಾಂಕ್ಷೆ, ಅವಲೋಕಿಸಬಹುದು. ಇವರ  ಕವನ ಸಂಕಲನಗಳಾದ, ಕಾವ್ಯಾಕ್ಷಿ, ಭಾವಜೀವಿ ಸಂಗ್ರಹಗಳಲ್ಲಿ, ಇಂಥ ಎಲ್ಲಾ ಅಂಶಗಳನ್ನು ಗಮನಿಸಬಹುದು. ಆಕಾಶಬುಟ್ಟಿ, ಭಾವಜೀವಿ, ಮಧುಚಂದ್ರ, ದೀಪಧಾರಿ, ಜೀವಧ್ವನಿ, ಸಮಗ್ರ ಕಾವ್ಯ, ಚಿರಂತನ ದಾಹ, ನನ್ನ ದೇಶ ನನ್ನ ಜನ, ನಗರದಲ್ಲಿ ನೆರಳು, ಹಕ್ಕಿಪುಚ್ಛ, ಕಾರ್ತಿಕದ ಮೋಡ, ಮುಂತಾದ ಪ್ರಸಿದ್ಧ ಕವನ ಸಂಕಲನಗಳನ್ನು ಬಿಡುಗಡೆ ಮಾಡಿ, ನಾಡಿಗೆ   ನೀಡಿದ   ಕಣವಿಯವರು, ಕನ್ನಡ ನಾಡಿನ ಸುಪ್ರಸಿದ್ಧ  ಕವಿಗಳು. 11 ಗದ್ಯ ಕೃತಿಗಳನ್ನು ಸಹ ರಚಿಸಿ ನಾಡಿಗೆ ನೀಡಿದ್ದಾರೆ. ಹೆಸರಾಯಿತು   ಕರ್ನಾಟಕ, ಉಸಿರಾಗಲಿ ಕನ್ನಡ, ಹಸಿಗೋಡೆಯ ಹರಳಿನಂತೆ, ಹುಸಿಹೋಗದ ಕನ್ನಡ. ನಾಡು ನುಡಿ ಗೀತೆಯಾಗಿ, ಚೆನ್ನವೀರ ಕಣವಿಯವರು ರಚಿಸಿ ಕನ್ನಡ ನಾಡಿಗೆ ನೀಡಿದ ಮಹನೀಯರು.


ಶ್ರೀ ಚೆನ್ನವೀರ ಕಣವಿಯವರಿಗೆ, ಅನೇಕ ಅತ್ಯುನ್ನತ ಪ್ರಶಸ್ತಿಗಳು ಲಭಿಸಿವೆ. ಕನಾ೯ಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನೃಪತುಂಗ  ಪ್ರಶಸ್ತಿ, ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಅಂಬಿಕಾತನಯ ರಾಷ್ಟ್ರೀಯ ಪ್ರಶಸ್ತಿ ಲಭಿಸಿವೆ.


ಕನ್ನಡ ನಾಡಿಗೆ ಅನೇಕ ಮೌಲ್ಯಯುತ ಕವಿತೆಗಳನ್ನು ನೀಡಿ ಧಾರವಾಡದಲ್ಲಿ ತಮ್ಮ 93ನೇ ವಯಸ್ಸಿನಲ್ಲಿ 16-2-2022 ರಂದು ನಿಧನರಾದರು.  


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top