ತೋಟದ ನೀರಿನ ಮೋಟರ್ ಪಂಪ್‌ಸಟ್‌ಗಳ ಕೇಬಲ್ ಕಳ್ಳತನ, ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ

Upayuktha
0


ಕೊಪ್ಪ: ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕು ನರಸಿಪುರಗ್ರಾಮದ ಬಾಳೇಗದ್ದೆ ಮತ್ತು ಬಡಿನಹಳ್ಳ ಗ್ರಾಮಗಳ ನಡುವೆ ಇರುವ ಸೋಷಿಯಲ್ ಫಾರೆಸ್ಟ್ ನರ್ಸರಿ ಅಕ್ಕ ಪಕ್ಕದಲ್ಲಿ  ತಮ್ಮ ಜಮೀನುಗಳಿಗೆ ನೀರು ಪೂರೈಸಲು ಅಳವಡಿಸಿಕೊಂಡಿದ್ದ ಸುಮಾರು 11 ರೈತರ ವಿದ್ಯುತ್ ಮೋಟರ್‌ಗಳ ಕೇಬಲ್‌ಗಳನ್ನು ನಿನ್ನೆ ರಾತ್ರಿ (ಜೂ.17) ಕಿಡಿಗೇಡಿ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.


ಕಳುವಾದ ಪಂಪ್‌ಸೆಟ್ ಕೇಬಲ್‌ನ ಒಟ್ಟು ತೂಕ ಸುಮಾರು 200 ಕೆಜಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಈ ಕಳ್ಳತನದ ಬಗ್ಗೆ ಕೊಪ್ಪ ತಾಲೂಕು ಪೋಲೀಸ್ ಠಾಣೆಗೆ ರೈತರು ದೂರು ನೀಡಿದ್ದು, ಪೋಲೀಸರಿಂದ ಸ್ಥಳ ಪರಿಶೀಲನೆ ಆಗಿದ್ದು, ತನಿಖೆ ನೆಡೆಯುತ್ತಿದೆ.


ತೋಟಗಳಲ್ಲಿ, ಜಮೀನುಗಳಲ್ಲಿ ಆಗಾಗ ಸಣ್ಣ ಪುಟ್ಟ ಕೇಬಲ್, ಪೈಪು ಹಾಗೂ ಸ್ಟಾರ್ಟರ್ ಕಳ್ಳತನಗಳು ನಡೆಯುತ್ತಿದ್ದು, ಈಗ  ಪಂಪ್‌ಸಟ್‌ ಕೇಬಲ್‌ಗಳ ದೊಡ್ಡ ಮಟ್ಟದ ಸರಣಿ ಕಳ್ಳತನ ಸುದ್ದಿಯಾಗಿದೆ. ಕಳ್ಳತನದ ಸುದ್ದಿ ರೈತ ಬಾಂಧವರಲ್ಲಿ ಆತಂಕ ಹುಟ್ಟಿಸುತ್ತಿದೆ.  


ಕಳೆದೆರಡು ವರ್ಷಗಳ ಬರದ ಪರಿಣಾಮಕ್ಕೆ ಹೇಗಾದರೂ ಮಾಡಿ ತೋಟ ಉಳಿಸಿಕೊಳ್ಳಬೇಕೆಂದು ಹರ ಸಾಹಸ ಮಾಡಿದ ರೈತರು, ಇರುವ ನೀರಿನ ಮೂಲಗಳಿಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ, ಪಂಪ್‌ಸೆಟ್ ಹಾಕಿಸಿಕೊಂಡರೆ, ಈಗ ಅದರ ಕೇಬಲ್‌ಗಳು ಕಳ್ಳತನವಾಗಿರುವುದು ರೈತರು ಆತಂಕದಿಂದ ಪರಿತಪಿಸುವಂತೆ ಮಾಡಿದೆ.  


ಕೇಬಲ್ ಸರಣಿ ಕಳ್ಳತನದ ಹಿನ್ನಲೆಯಲ್ಲಿ ರೈತರು ತಮ್ಮ ಮೋಟರ್ ಪಂಪ್‌ಸೆಟ್, ಕೇಬಲ್, ಪೈಪ್, ಸ್ಟಾರ್ಟರ್‌ಗಳ ಬಗ್ಗೆ ಇನ್ನಷ್ಟು ಎಚ್ಚರಿಕೆ ವಹಿಸಬೇಕಾಗಿದೆ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top