ಯೋಗಗುರು ರಾಜೇಂದ್ರ ಎಂಕಮೂಲೆ ನೇತೃತ್ವ
ಕ್ಯಾನ್‌ಬೆರಾ: 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ರಸಿದ್ಧ ಯೋಗ ಗುರು ರಾಜೇಂದ್ರ ಎಂಕಮೂಲೆ ನೇತೃತ್ವದಲ್ಲಿ ಆಸ್ಟ್ರೇಲಿಯಾ ಸಂಸತ್ತಿನಲ್ಲಿ ವಾಸುದೇವ ಕ್ರಿಯಾಯೋಗ ಪರ್ವವು ಮಂಗಳವಾರ ನಡೆಯಿತು.
ಆಸ್ಟ್ರೇಲಿಯಾದ ಭಾರತೀಯ ರಾಯಭಾರ ಕಚೇರಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಿನ ಸಚಿವರುಗಳಾದ ನಟಾಲಿ ಹುಚಿನ್ಸ್, ಎನ್ವರ್ ಎರ್ಡೋಗನ್, ಪ್ರತಿಪಕ್ಷ ನಾಯಕ ಜಾನ್ ಪೆಸ್ಸುಟೊ, ಸಂಸದರುಗಳಾದ ಬ್ರಾಡ್ ರೂಸ್ವೆಲ್, ಜಾನ್ ಮುಲ್ಲೈ, ಕ್ರಿಸ್ ಕ್ರೂತರ್, ಡೇವಿಡ್ ಸೌತ್ವಿಕ್, ಸಿಂಡಿ ಎಂಕ್ಲಿಶ್, ಭಾರತೀಯ ರಾಯಭಾರ ಕಚೇರಿಯ ಮುಖ್ಯಸ್ಥರಾದ ಡಾ ಸುಶೀಲ್ ಕುಮಾರ್, ರಾಮ್ ಪಾಲ್ ಮುತ್ಯಾಳ, ರಾಜ್ ಸೈನಿ ಮತ್ತು ಅನೇಕ ಅಧಿಕಾರಿಗಳು, ನೂರಾರು ಯೋಗಾಸಕ್ತರು ಉತ್ಸಾಹದಿಂದ ಪಾಲ್ಗೊಂಡರು.
2015ರಿಂದ ನಿರಂತರವಾಗಿ ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದ ಕೊನೆಯಲ್ಲಿ ಸಂಸತ್ತಿನ ವತಿಯಿಂದ ಯೋಗ ಗುರು ರಾಜೇಂದ್ರ ಎಂಕಮೂಲೆಯವರನ್ನು ಸಂಮಾನಿಸಲಾಯಿತು.
ದ.ಕ ಜಿಲ್ಲೆ ಪುತ್ತೂರು ಮೂಲದವರಾದ ರಾಜೇಂದ್ರ ಅವರು ಕಳೆದ 30 ವರ್ಷಗಳಿಂದ ಮೆಲ್ಬೋರ್ನ್ ನಲ್ಲಿ ನೆಲೆಸಿದ್ದು ಸಹಸ್ರಾರು ಮಂದಿಗೆ ಯೋಗ ತರಬೇತಿ ನೀಡುತ್ತಾ ಪ್ರಸಿದ್ಧರಾಗಿದ್ದಾರೆ. ಅದರ ಜೊತೆಗೆ ಅನೇಕ ಅನಿವಾಸಿ ಭಾರತೀಯರನ್ನೂ ಒಳಗೊಂಡಂತೆ ಸಮಾನಮನಸ್ಕರ ತಂಡವನ್ನು ಕಟ್ಟಿಕೊಂಡು ಆಸ್ಟ್ರೇಲಿಯಾ ಮತ್ತು ಭಾರತದಲ್ಲಿ ನಡೆಯುವ ಯೋಗ ವೇದ ಶಿಕ್ಷಣ, ಅನಾಥಾಶ್ರಮ ಗೋಶಾಲೆ, ವೃದ್ಧಾಶ್ರಮ ಆಸ್ಪತ್ರೆ ಹೀಗೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸಿ ಸಹಕರಿಸುತ್ತಿದ್ಧಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


