ಖಾರ ಮಸಾಲೆ: 'ಬಂಡೆ ಸ್ಕೆಚ್ಗೆ ಕುಮ್ಮಿ ಡ್ಯಾಶಿಂಗ್'

Upayuktha
0


'ಅರೇ ಎಕ್ಷ್ ಸಿಎಂಗ ಅರೆಸ್ಟ ಮಾಡಾಕ ಅವಸರ ಮಾಡಿದ್ರಂತಲಾ?' ಕೇಳ್ದ ಕಾಳ್ಯಾ.

'ಹಂ ಹೌಂದು, ಟಕಾಟಕ್ಗ ಮತ್ತ ತಮಗೆ ಕೋರ್ಟಿಗಿ ಬರಂಗ ಮಾಡಿದ್ದಕ್ಕ ಯಡ್ಡಿಗೆ ವಾರಂಟ ಬರಂಗ ಮಾಡಿದ್ರಂತ' ಎಂದಳು ರಾಣಿ.

'ಏನು ಇದು ಬರೇ ವಾರಂಟು, ಅರೆಸ್ಟ್, ಬೇಲ್, ಮರ್ಡರ್.....ಏನು ಗಂಧದ ಗುಡಿ ಬಿಹಾರ ಆಗಕತೈಕೇನ?' ಬೇಸರಿಸಿದ ಗುಡುಮ್ಯಾ.

'ಈ ಟಿವಿ ನ್ಯೂಸ್ ತುಂಬಾ ಬರೇ ಕ್ರಿಮಿನಲ್ಸ್ ಸುದ್ದಿನೇ ತುಂಬ್ಯಾವಪಾ' ಅಂತ ಅಂದ ಲಗಾಟಿ.

'ಎಂಥಾ ಚಂದದ ಸ್ಯಾಂಡಲ್ವುಡ್ ಹೋಗಿ ಹೊಡಿ ಬಡಿ ಕಡಿ ಆಗೇತಿ' ಎಂದ ಕಾಳ್ಯಾ.

'ಮತ್ತ ಪೋಲೀಸ ಟೇಶನಕ್ಕ ಶಾಮಿಯಾನ ಹ್ಯಾಕ್ಯಾರಂತಲಾ ಲಗ್ನ ಐತಿ ಹ್ಯಾಂಗಲ್ಲಿ?' ನಕ್ಕ ಲಗಾಟಿ.

'ಅಲ್ಲಿ ತಾಳಿ ಕಟ್ಯಾರ ಇನ್ನ ಮೆರವಣಿಗೆ ಒಂದs ಬಾಕಿ ಐತಿ ನೋಡು' ಎಂದಳು ರಾಣಿ.

'ಅದು ಬಾಸ್ಂದು ಐದು ಕೋಟಿ ಮೆರವಣಿಗಿ ಅಂತ ಹೋಯಿಂದೇನು?' ಎಂದ ಗುಡುಮ್ಯಾ.

'ಎಲ್ಲಾ ಕಡೆ ಬರೇ ಗೌಡರ ಗದ್ಲ ನಡದೈತಿ' ಎಂದ ಕಾಳ್ಯಾ.




'ಕುಮ್ಮಿ ಹೃದಯವಂತನ್ನ ಗೆಲ್ಲಿಸಿ, ದಿಲ್ಲಿಗಿ ಕರ್ಕೋಂಡ ಹೋಗಿ, ತಾನೂ ದೊಡ್ಡ ಖಾತೆನೇ ತಂದಾನು' ಎಂದ ಲಗಾಟಿ.

'ಇದು ಬಂಡೆ ಸ್ಕೆಚ್ಗೆ ಕುಮ್ಮಿ ಡ್ಯಾಶಿಂಗ್ ಕೊಟ್ಟಂಗಾತು ಹಂಗಾರ' ಎಂದ ಗುಡುಮ್ಯಾ.

'ಹಂಗೆ ಸಿದ್ದು ಗೌರ್ಮೆಂಟ್ ಜನರಿಗೆ ಗಿಫ್ಟ್ ಕೊಟ್ಟೈತಿ ಈಗ ಗೊತೈತಿಲ್ಲೋ?' ಕೇಳ್ದ ಲಗಾಟಿ.

'ಏನು ಗಿಫ್ಟ್ ಮರ್ಡರ್ ಆ್ಯಂಡ್ ಶಾಮಿಯಾನ ಬಿರ್ಯಾನಿನಾ?' ನಕ್ಕ ಗುಡುಮ್ಯಾ.

'ನೋ ನೋ ಪೆಟ್ರೋಲ ಡಿಸೈಲ್ ರೇಟ್ ಏರಿಸ್ಯಾರು' ಎಂದಳು ರಾಣಿ.

'ಗ್ಯಾರಂಟಿ ಖಾತ್ರಿ ಯೋಜನೆ ಸಲಾಗಿ ಎಲ್ಲಾ ರೇಟ್ ಏರಿಸಿ, ತಲಿ ಮ್ಯಾಲ ಟೊಪ್ಪಿಗಿ ಹಾಕಿ ಕಳಸಾಕತ್ತಾರು' ಎಂದ ಲಗಾಟಿ.

'ಬಂಡೆ ಸಿಎಂ ಆದಾಗ ಇವೆಲ್ಲಾ ಸರಿ ಹೊಕ್ಕಾವಂತ ಡಂಗರಾ ಹೊಡಸ್ರಿ ಅಂತ ಹೇಳಿದ್ರಾತು ತಗೋ' ಅಂತ ಕಾಳ್ಯಾ ಹೇಳಿದ್ದು ಕೇಳಿ ಎಲ್ಲ ದಂಗ ಬಡದು ಹೋದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top