ಪುಟ್ಟದೊಂದು ನರಿಯ ಮರಿಯು
ದಾರಿ ತಪ್ಪಿ ಬಂದಿದೆ|
ಬಿಟ್ಟ ಕಣ್ಣು ಬಿಟ್ಟುಕೊಂಡು
ಪಾಪುವೊಂದು ಕುಳಿತಿದೆ||
ಕಂದನನ್ನು ಒಂಟಿಯಾಗಿ
ಅಮ್ಮ ಬಿಟ್ಟು ಹೋದಳೆ|
ಚೆಂದವಾದ ಮಗುವಿಗೆಂದು
ತಿಂಡಿಯನ್ನು ತರುವಳೆ||
ಮುಗ್ಧವಾದ ಮನದ ಮಗುವು
ನರಿಯ ಮರಿಯ ಜೊತೆಗಿದೆ|
ಸ್ನಿಗ್ಧಭಾವ ತೋರಿಕೊಂಡು
ನರಿಯ ಮುಖವ ನೋಡಿದೆ||
ಬೆಚ್ಚಗಿರುವ ಬಟ್ಟೆಯನ್ನು
ಮಗುವು ತೊಟ್ಟುಕೊಂಡಿದೆ|
ಪಚ್ಚೆಹಸುರು ಗಿಡದ ನೆರಳು
ನೆಲದ ಮೇಲೆ ಹರಡಿದೆ||
ಭಯವ ಪಡದೆ ನರಿಯ ಮರಿಯು
ಮಗುವ ನೇಹ ಬಯಸಿದೆ|
ನಯನವನ್ನು ತೆರೆದುಕೊಂಡು
ಅಶನಕಾಗಿ ಕಾದಿದೆ||
- ಅಶ್ವತ್ಥನಾರಾಯಣ, ಮೈಸೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ