ಎಬಿವಿಪಿ ಆಗ್ರಹಕ್ಕೆ ಮೊದಲ ಹಂತದ ಸ್ಪಂದನೆ: ಆಜ್ರಿಯಿಂದ ಕುಂದಾಪುರಕ್ಕೆ ಹೊಸ ಬಸ್

Upayuktha
0


ಕುಂದಾಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ವತಿಯಿಂದ ಸಲ್ಲಿಸಲಾದ ಬೇಡಿಕೆಯಂತೆ ಆಜ್ರಿಯಿಂದ ಕುಂದಾಪುರಕ್ಕೆ ಕೆಎಸ್ಸಾರ್ಟಿಸಿ ನೂತನ ಬಸ್ ಸಂಚಾರ ಪ್ರಾರಂಭಿಸಿದೆ.


ಗ್ರಾಮಾಂತರ ಭಾಗಗಳಿಂದ ಕುಂದಾಪುರ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಐದು ದಿನಗಳ ಹಿಂದೆ (ಜೂ.8) ಶಾಸ್ತ್ರಿ ಸರ್ಕಲ್‌ನಿಂದ ತಾಲೂಕು ಆಫೀಸಿನ ವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸಲಾಗಿತ್ತು. ಕುಂದಾಪುರ ತಹಶೀಲ್ದಾರ, ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಸೇರಿದಂತೆ, ಕುಂದಾಪುರ ಮತ್ತು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ ಬೇಡಿಕೆ ಇರಿಸಿ ಆಗ್ರಹಿಸಲಾಗಿತ್ತು. ಇದರ ಪರಿಣಾಮವಾಗಿ ಮೊದಲ ಹಂತದಲ್ಲಿ ಆಜ್ರಿಯಿಂದ ಕುಂದಾಪುರಕ್ಕೆ ಬಸ್ ಬಿಟ್ಟಿರುವುದನ್ನು ಎಬಿವಿಪಿ ಸ್ವಾಗತಿಸಿದೆ.


ಈಗಾಗಲೇ ಆಜ್ರಿಯಿಂದ ನೇರಳಕಟ್ಟೆ ತಲ್ಲೂರು ಮಾರ್ಗವಾಗಿ ಕುಂದಾಪುರಕ್ಕೆ ಮಾಡಿದ ಬಸ್ ವ್ಯವಸ್ಥೆಯಿಂದಾಗಿ ಕೇವಲ ವಿದ್ಯಾರ್ಥಿಗಳಿಗಲ್ಲದೆ ಸಾರ್ವಜನಿಕರಿಗೂ ಸಹಾಯಕವಾಗಿದೆ. ಅನೇಕ ಸಮಯದಿಂದ ಈ ಮಾರ್ಗಕ್ಕೆ ಬಸ್‌ನ ಬೇಡಿಕೆ ಇದ್ದರೂ ಅಧಿಕಾರಿಗಳಿಗೆ ವಿವಿಧ ರೀತಿಯಲ್ಲಿ ಮನವಿ ಸಲ್ಲಿಸಿದರೂ ಸಮರ್ಪಕ ಬಸ್ ವ್ಯವಸ್ಥೆ ಮಾಡದ ಅಧಿಕಾರಿಗಳು ಹೋರಾಟ ನಡೆಸಿದ ಐದು ದಿನಗಳ ಒಳಗೆ ಬಸ್ ಬಿಟ್ಟಿರುವುದು ವಿದ್ಯಾರ್ಥಿಗಳ ಬೇಡಿಕೆಗೆ ಮಣಿದಿದ್ದಾರೆ.


ಇನ್ನು ಸುಮಾರು 15ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಸ್ ಸಂಚಾರ ಪ್ರಾರಂಭಿಸುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಎಬಿವಿಪಿ ಪದಾಧಿಕಾರಿಗಳು ಚರ್ಚಿಸಿದ್ದಾರೆ. ಬೇಡಿಕೆ ಇರಿಸಿದ ಎಲ್ಲ ಮಾರ್ಗಗಳಲ್ಲಿ ಮುಂದಿನ 15 ದಿನಗಳೊಳಗೆ ನೂತನ ಬಸ್‌ಗಳ ಸಂಚಾರ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಎಬಿವಿಪಿ ಮುಖಂಡರು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top