ಹಾಸನ: ಹಾಸನದ ಮನೆ ಮನೆ ಕವಿಗೋಷ್ಠಿ ಯ 319ನೇ ತಿಂಗಳ ಕಾರ್ಯಕ್ರಮವು ಗಾಯಕಿ ಶ್ರೀಮತಿ ಜಯಶ್ರೀ ಬಾಲಕೃಷ್ಣರವರ ಪ್ರಾಯೋಜನೆಯಲ್ಲಿ 7-7-2024ರ ಭಾನುವಾರ ಸಂಜೆ ಇಳಿಹೊತ್ತು 4.30ಕ್ಕೆ ಹಾಸನದ ಹೇಮಾವತಿ ನಗರದ ಬಾಲಕೃಷ್ಣ ಹೆಚ್.ವಿ. ವಿಶ್ರಾಂತ ಉಪನ್ಯಾಸಕರು, 529 ಸವಿತೃ, ಅಂಚೆ ಕಚೇರಿ ರಸ್ತೆ ಇವರ ನಿವಾಸದಲ್ಲಿ ಏರ್ಪಡಿಸಲಾಗಿದೆ.
ಯುವ ಉದಯೋನ್ಮುಖ ಕಾದಂಬರಿಕಾರ ದಯಾನಂದ ಎಸ್. ರವರ ಕಾಣದ ದಾರಿ ಕಾದಂಬರಿ ಕುರಿತು ಲೇಖಕಿ ಪ್ರತಿಮಾ ಹಾಸನ್‌ರವರು ವಿಮರ್ಶೆ ಮಾಡುವರು. ನಂತರ ಆಗಮಿತ ಕವಿಗಳಿಂದ ಕವಿಗೋಷ್ಠಿ ಇರುವುದು. ಕಾರ್ಯಕ್ರಮದಲ್ಲಿ ಗಾಯಕ ಗಾಯಕಿಯರು ರಂಗಭೂಮಿ ಕಲಾವಿದರಿಗೆ ಬಾವಗೀತೆ, ಜನಪದ ಗೀತೆ, ರಂಗಗೀತೆ ಹಾಡಲು ಅವಕಾಶ ಇರುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು, ಕವಿ ಕವಯತ್ರಿಯರು, ಗಾಯಕ ಗಾಯಕಿಯರು ರಂಗಗೀತೆ ಕಲಾವಿದರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರು ಸಾಹಿತಿ ಗೊರೂರು ಅನಂತರಾಜು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ