ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ ಸ್ಥಾಪನಾ ದಿವಸ, ವಿಶ್ವ ಪರಿಸರ ದಿನ, ಹೆಲೆನ್ ಕೆಲರ್ ದಿನಾಚರಣೆ

Upayuktha
0


ಮಂಗಳೂರು: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ಮತ್ತು ಶ್ರೀ ಭಾರತಿ ಸಮೂಹ ಸಂಸ್ಥೆಗಳು ನಂತೂರು ಮಂಗಳೂರು ಇವರ ಸಹಯೋಗದಲ್ಲಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸಕ್ಷಮ ಸ್ಥಾಪನಾ ದಿವಸ್, ವಿಶ್ವ ಪರಿಸರ ದಿನಾಚರಣೆ, ಹೆಲೆನ್ ಕೆಲರ್ ದಿನಾಚರಣೆ ಗುರುವಾರ (ಜೂ.27) ನಡೆಯಿತು.


ಸಕ್ಷಮ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆಯವರ ಅಧ್ಯಕ್ಷತೆಯಲ್ಲಿ ಕುಮಾರಿ ಅನುಷಾ ಭಟ್ ಕಾಕುಂಜೆಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. 


ಸಕ್ಷಮ ಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷ ಚೇತನರ ಕಲ್ಯಾಣಕ್ಕಾಗಿ ಸಮರ್ಪಿತ ರಾಷ್ಟ್ರೀಯ ಸಂಘಟನೆಯಾದ ಸಕ್ಷಮದ ಧ್ಯೇಯ ಮತ್ತು ಉದ್ದೇಶಗಳ ಬಗ್ಗೆ ಪ್ರಸ್ತಾಪಿಸುತ್ತಾ ದಿವ್ಯಾಂಗ ಮಕ್ಕಳ ಭವಿಷ್ಯ ರೂಪಿಸುವುದಕ್ಕಾಗಿ ಮಾಧ್ಯಮವಾಗಿ ಅವರ ಅವಶ್ಯಕತೆಗಳನ್ನು ಪೂರೈಸುವುದರ ಮೂಲಕ ಸಮಾಜದಲ್ಲಿ ತನ್ನ ಸ್ಥಾನವನ್ನು ಎಲ್ಲರಿಗೂ ಗುರುತಿಸುವಂತಹ ಸಾಧನೆಗೆ ಧೈರ್ಯ ತುಂಬುವ ಕಾರ್ಯವನ್ನು 2008 ರಿಂದ ನಡೆಸಿಕೊಂಡು ಬಂದಿರುವುದನ್ನು ವಿವರಿಸುತ್ತಾ ಸಕ್ಷಮ ಸ್ಥಾಪನ ದಿನಾಚರಣೆಯ ಮಹತ್ವವನ್ನು ತಿಳಿಸಿದರು.


ಇಂದು ನಡೆದ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಶ್ರೀ ಭಾರತಿ ಸಮೂಹ ಸಂಸ್ಥೆಯ ಸೇವಾ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಗಣೇಶಮೋಹನ ಕಾಶಿಮಠ ಇವರು ದಿವ್ಯಾಂಗ ಸಮಾಜದಲ್ಲಿ ಕೀಳು ಭಾವವನ್ನು ಹೊಡೆದೋಡಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳುತ್ತಾ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯಕ್ಕೆ ಶುಭ ಹಾರೈಸಿದರು.


ಮಂಗಳೂರಿನ ಕೋಟೆಕಣಿಯಲ್ಲಿ 2009 ರಲ್ಲಿ ಸ್ಥಾಪಿಸಿದ ರೋಮನ್ ಮತ್ತು ಕ್ಯಾತರಿನ್ ಲೋಬೊ ದೃಷ್ಟಿ ಭಾದಿತ ಮಕ್ಕಳ ಅನುದಾನ ರಹಿತ ಆಂಗ್ಲ ಮಾಧ್ಯಮ ವಸತಿ ಶಾಲೆಯ ಪ್ರಾಂಶುಪಾಲರು ಆಗಿರುವ ಕ್ಯಾಲಿಸ್ಟಸ್ ಡೇಸಾರವರು ದಿನದ ಮುಖ್ಯ ಅತಿಥಿಗಳಾಗಿದ್ದು ಹೆಲನ್ ಕೆಲರ್ ಜನ್ಮ ದಿನಾಚರಣೆಯನ್ನು ಇಂದು ಆಚರಿಸುತ್ತಿರುವುದು ಸಂತೋಷದ ವಿಷಯ ಹುಟ್ಟಿನಿಂದಲೣದೆ, ಬಳಿಕ ದಿವ್ಯಾಂಗರಾದ ಹೆಲೆನ್ ಕೆಲರ್ ರವರ ಜೀವನದ ವಿಚಾರಗಳನ್ನು ತಿಳಿಸುತ್ತಾ ಅನುದಾನ ರಹಿತ ದಿವ್ಯಾಂಗ ವಸತಿ ಶಾಲೆಯ ದಿವ್ಯಾಂಗ ಪ್ರಾಂಶುಪಾಲರಾಗಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯದಲ್ಲಿ ತಾನು ಸಮಾಜದ ಹೀಯಾಳಿಕೆಯನ್ನು ಲೆಕ್ಕಿಸದೆ ಆತ್ಮವಿಶ್ವಾಸದಿಂದ ಮುನ್ನಡೆದ ಕಾರಣ ಇಂದು ತಮ್ಮ ವಿದ್ಯಾಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕಂಪನಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತೋಷ ತಂದಿದೆ ದಿವ್ಯಾಂಗರನ್ನು ಕೀಳಾಗಿ ಕಾಣುವುದನ್ನು ಸಮಾಜ ನಿಲ್ಲಿಸಬೇಕು, ದಿವ್ಯಾಂಗರ ಮೇಲೆ ಅನುಕಂಪ ಬೇಡ ಅವರಿಗೆ ಅವಕಾಶವನ್ನು ಕಲ್ಪಿಸಿಕೊಡಿ ಎಂದರು.


ಇದೇ ಸಂದರ್ಭದಲ್ಲಿ ಪ್ರಾಂಶುಪಾಲರಾದ ಕ್ಯಾಲಿಸ್ಟಸ್ ಡೇಸಾ ಅವರಿಗೆ ಸಮಾಜದಲ್ಲಿ ನಡೆಸಿದ ಉತ್ತಮ ಕಾರ್ಯಕ್ಕಾಗಿ ಅವರನ್ನು ಸನ್ಮಾನಿಸಲಾಯಿತು.


ಪರಿಸರ ದಿನಾಚರಣೆಯ ಮಹತ್ವವನ್ನು ವಿವರಿಸುತ್ತಾ ಈ ಸಂದರ್ಭದಲ್ಲಿ ವನಮಹೋತ್ಸವ ಕಾರ್ಯವನ್ನು ಯೋಜಿಸಿರುವ ಸಕ್ಷಮದ ಕಾರ್ಯಕ್ಕೆ ಶ್ರೀ ಭಾರತಿ ಕಾಲೇಜು ಹೇಗೆ ಸಹಕರಿಸುತ್ತಿದೆ ಎಂಬುದನ್ನು ತಿಳಿಸುತ್ತಾ ಶ್ರೀ ಭಾರತಿ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಗಿರೀಶ ಎಂ ರವರು ಅವಶ್ಯಕತೆ ಇರುವ ದಿವ್ಯಾಂಗ ಮಕ್ಕಳಿಗೆ ತಾನು ಸಂದರ್ಭದಲ್ಲಿ ನೀಡಿದ ಸಹಕಾರದಿಂದ ಅವರು ಗಳಿಸಿದ ಏಳಿಗೆಯ ಬಗ್ಗೆ ಉದಾಹರಣೆ ಮೂಲಕ ತಿಳಿಸುತ್ತಾ ಸೂಕ್ತ ವ್ಯವಸ್ಥೆಯನ್ನು ನಾವು ಕಲ್ಪಿಸಿದಲ್ಲಿ ಅವರು ಶ್ರೇಯಸ್ಸನ್ನು ಗಳಿಸುವುದರಲ್ಲಿ ನಿಸ್ಸಂಶಯ ಎಂದು ಹೇಳಿದರು.


ಶ್ರೀ ಭಾರತಿ ಕಾಲೇಜಿನ ಪ್ರಾಂಶುಪಾಲರಾದ ಗಂಗಾರತ್ನರವರು ಸಮಾಜದಲ್ಲಿ ದಿವ್ಯಾಂಗರ ಬಗ್ಗೆ ಅರಿವನ್ನು ಮೂಡಿಸುವ ಆರಂಭವನ್ನು ಇಲ್ಲಿ ಆರಂಭಿಸಿರುವುದಕ್ಕೆ ಸಂತೋಷವನ್ನು ವ್ಯಕ್ತಪಡಿಸುತ್ತಾ ಅಸಹಾಯಕರ ಅಸಹಾಯಕತೆಯನ್ನು ಗೇಲಿ ಮಾಡುವವರ ಮನಸ್ಥಿತಿ ಬದಲಾಗುವಂತೆ ನಾವೆಲ್ಲರೂ ಶ್ರಮಿಸೋಣ ಎಂದು ಶುಭ ನುಡಿದರು.


ಕೊನೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾಲೇಜು ವಠಾರದಲ್ಲಿ ವಿವಿಧ ರೀತಿಯ ಹಣ್ಣುಗಳ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಜಾಗೃತಿಯ ಕಾರ್ಯವನ್ನು ನಡೆಸಲಾಯಿತು. 


ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಭಾಸ್ಕರ್ ಹೊಸಮನೆ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಹರೀಶ್ ಪ್ರಭು ವಂದನಾರ್ಪಣೆಗೈದರು.


ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಗಣೇಶ್ ಭಟ್ ವಾರಣಾಸಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.


ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಖಜಾಂಚಿಗಳಾದ ಸತೀಶ್ ರಾವ್ ಮತ್ತು ಸಮಿತಿಯ ಪದಾಧಿಕಾರಿಗಳಾದ ಲೆಸ್ಲಿ ನೊರೋನ್ನ, ಶ್ರೀಮತಿ ಗೀತಾ ಲಕ್ಷ್ಮೀಶ್, ಶ್ರೀಮತಿ ಶ್ಯಾಮಲಾ ಭಟ್ ಕಾಕುಂಜೆ, ಶ್ರೀ ಭಾರತಿ ಕಾಲೇಜಿನ ಶಿಕ್ಷಕ, ಶಿಕ್ಷಕೇತರ ವರ್ಗದವರು ಸಮಿತಿಯ ಸದಸ್ಯರು ವಿದ್ಯಾರ್ಥಿಗಳು, ಸಮಾಜದ ಹತ್ತು ಹಲವು ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top