ಪುತ್ತೂರು: ಪುತ್ತೂರಿನ ನರಿಮೊಗರಿನಲ್ಲಿ ಇರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯು ಆಹಾರ ಮತ್ತು ಆರೋಗ್ಯ ಎಂಬ ಶೀರ್ಷಿಕೆಯ ಅಡಿಯಲ್ಲಿ, ನಾವು ದಿನ ನಿತ್ಯ ಬಳಸುವ ಆಹಾರಗಳಲ್ಲಿ ಆರೋಗ್ಯಕ್ಕೆ ಪೂರಕವಾದವುಗಳು ಮತ್ತು ಮಾರಕವಾದವುಗಳು ಯಾವುವು ಮತ್ತು ಆರೋಗ್ಯ ರಕ್ಷಣೆಗೆ ನಮ್ಮ ದಿನ ನಿತ್ಯದ ಆಹಾರ ಕ್ರಮ ಹೇಗಿರಬೇಕು ಎಂಬ ವಿಚಾರವಾಗಿ ಉಚಿತ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಅರೋಗ್ಯ ಪ್ರಸಾದಿನೀ ಸರಣಿ ಅರೋಗ್ಯ ಮಾಹಿತಿ ಕಾರ್ಯಾಗಾರದ ಪ್ರಥಮ ಕಾರ್ಯಕ್ರಮ ಜೂನ್ 9ರ ಭಾನುವಾರದಂದು ನರಿಮೊಗರು ಗ್ರಾಮ ಪಂಚಾಯತ್ ಸಮೀಪ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಪ್ರಸಾದಿನೀ ಅಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಸಭಾಂಗಣದಲ್ಲಿ ಅಪರಾಹ್ನ 3 ಗಂಟೆಗೆ ನಡೆಯಲಿರುವುದು. ಸಂಸ್ಕರಿಸಿದ ಆಹಾರ ಮತ್ತು ನಮ್ಮ ಅರೋಗ್ಯ ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ಖ್ಯಾತ ಆಯುರ್ವೇದ ತಜ್ಞ ವೈದ್ಯ ಹಾಗೂ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಪುತ್ತೂರಿನ ನಿವೃತ್ತ ಪ್ರಾಂಶುಪಾಲ ಎನ್ ದುಗ್ಗಪ್ಪ ವಹಿಸಲಿದ್ದಾರೆ.
ಆಹಾರ ಸೇವನೆಯಲ್ಲಿ ನಾವು ಮಾಡುವ ಎಡವಟ್ಟು ಇಂದಿನ ಜ್ವಲಂತ ಸಮಸ್ಯೆ. ಬದಲಾದ ಆಹಾರ ಸಂಸ್ಕೃತಿ ಹಾಗೂ ಜೀವನ ಶೈಲಿಯಿಂದಾಗಿ ಈಗಿನ ಕಾಲಘಟ್ಟದಲ್ಲಿ, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಹಲವಾರು ಹೇಳಹೆಸರಿಲ್ಲದ ಮಾರಕ ರೋಗಗಳಿಗೆ ಬಲಿಯಾಗುತ್ತಾ ಇರುವುದು ತಿಳಿದಿರುವ ವಿಚಾರ. ಅತಿಯಾಗಿ ಸಂಸ್ಕರಿಸಿದ ಆಹಾರಗಳ ಸೇವನೆಗೆ ನಾವೆಲ್ಲ ನಮ್ಮ ಅರಿವಿಗೆ ಬಾರದೆಯೇ ಒಗ್ಗಿಕೊಳ್ಳುತ್ತಾ ಇದ್ದೇವೆ ಮತ್ತು ಅದು ನಮ್ಮ ಮತ್ತು ನಮ್ಮ ಮಕ್ಕಳ ಬೌದ್ಧಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಧಾಳಿ ಮಾಡುತ್ತಾ ಇದೆ ಎನ್ನುವುದು ಒಂದು ಭಯಾನಕ ಸತ್ಯ. ಇದೇ ಆತಂಕವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಕೂಡಾ ವ್ಯಕ್ತಪಡಿಸ್ತಾ ಇದೆ ಮತ್ತು ಆಹಾರಕ್ಕೆ ಸಂಬಂಧಿಸಿದ ನಿರ್ದಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಈ ನಿಟ್ಟಿನಲ್ಲಿ ಆಹಾರ ಹೇಗೆ ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು ಮತ್ತು ಎಂತಹ ಆಹಾರ ಆರೋಗ್ಯಕ್ಕೆ ಪೂರಕ ಎಂಬುವುದರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಅಗತ್ಯ ಈಗ ಖಂಡಿತಾ ಇದೆ.
ಇದನ್ನು ಅರಿತುಕೊಂಡು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ನಾವು ಆಹಾರಗಳಲ್ಲಿ ಆರೋಗ್ಯಕ್ಕೆ ಪೂರಕವಾದವುಗಳು ಮತ್ತು ಮಾರಕವಾದವುಗಳು ಯಾವುವು ಉಚಿತ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈ ಗೂಗಲ್ ಫಾರ್ಮ್ ತುಂಬಿ ನೋಂದಾಯಿಸಿ
https://docs.google.com/forms/d/e/1FAIpQLSf6jvh8Y7Drh38b1OTJbBwEUCwVjk08gz9VCFCMXGDCiOd3og/viewform?usp=sf_link
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ