ವಿವೇಕಾನಂದ ಪದವಿಪೂರ್ವ ಕಾಲೇಜಿನ ‌ನೀಟ್ ಸಾಧಕರಿಗೆ ಸನ್ಮಾನ

Upayuktha
0

• ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮೆರೆದ ವಿವೇಕಾನಂದದ ವಿದ್ಯಾರ್ಥಿನಿ

• ಯುಕ್ತಾ ವಿ.ಜಿ. ತಾಲೂಕಿಗೆ ಪ್ರಥಮ ಹಾಗೂ ಅಖಿಲ ಭಾರತ ಮಟ್ಟದಲ್ಲಿ 604ನೇ ರಾಂಕ್‌




ಪುತ್ತೂರು: ವ್ಯೆದ್ಯಕೀಯ ಶಿಕ್ಷಣಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2024ರ ನೀಟ್‌ ಪ್ರವೇಶ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಸಾಧಕ  ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. 720ಕ್ಕೆ 651 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ ಕೆಟಗರಿ ವಿಭಾಗದಲ್ಲಿ 604ನೇ ರಾಂಕ್‌ ಗಳಿಸಿದ ಯುಕ್ತಾ ವಿ.ಜಿ, 563 ಅಂಕಗಳನ್ನು ಪಡೆದ ಇಂದುಶ್ರೀ ಹಾಗೂ 557 ಅಂಕಗಳನ್ನು ಪಡೆದ ಶ್ರೇಯಾ ಕೆ. ಹಾಗೂ ಅವರ ಪಾಲಕರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಡಾ. ಕೆ.ಎನ್. ಸುಬ್ರಹ್ಮಣ್ಯ ಹಾಗೂ ವತ್ಸಲಾ ರಾಜ್ಞಿ ಇವರು ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಡಾ. ಕೆ.ಎನ್. ಸುಬ್ರಹ್ಮಣ್ಯ ಅವರು ಮಾತನಾಡಿ, "ವಿದ್ಯಾರ್ಥಿಗಳ ಅವಿರತ ಪರಿಶ್ರಮದ ಫಲಶ್ರುತಿಯು ಈ ಉತ್ತಮ ಫಲಿತಾಂಶವಾಗಿರುತ್ತದೆ. ಸುಸಂಸ್ಕೃತ ಪ್ರಜೆಯನ್ನು ವ್ಯೆದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಹೆಮ್ಮೆ ವಿವೇಕಾನಂದ ಪದವಿಪೂರ್ವ ಕಾಲೇಜಿನದ್ದಾಗಿರುತ್ತದೆ. ಓದಿದ ಸಂಸ್ಥೆಗೆ, ಹೆತ್ತವರಿಗೆ ಮಾದರಿಯಾದ ಈ ವಿದ್ಯಾರ್ಥಿಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ” ಎಂದು ಶುಭನುಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ದೇವಿಚರಣ್‌ ರೈ, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಸಾಧಕರಿಗೆ ಶುಭಹಾರೈಸಿದರು. ಉಪನ್ಯಾಸಕಿ ದಯಾಮಣಿ ಟಿ.ಕೆ ನೆರೆದವರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top