ಮಂಗಳೂರು: ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಪಿಓಎಲ್ ಟರ್ಮಿನಲ್ ಬಾಳ, ಮಂಗಳೂರು ಸಂಸ್ಥೆಯಿಂದ ಪರಿಸರ ದಿನಾಚರಣೆಯ ಅಂಗವಾಗಿ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿಯಲ್ಲಿ HPCL ಪಿಓಎಲ್ ಸಂಸ್ಥೆಯ ಮೇಲ್ವಿಚಾಕರಾದ DGM ಮೇಜರ್ ರಾಜಶೇಖರ್ ಇವರು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ನೆರವೇರಿಸಿದರು. ಮಕ್ಕಳಿಗೆ ಸುಮಾರು ನೂರು ಸಸಿಗಳನ್ನು ಸಂಸ್ಥೆಯ ವತಿಯಿಂದ ಈ ಸಂದರ್ಭದಲ್ಲಿ ನೀಡಲಾಯಿತು.
ಸಂಸ್ಥೆಯ HR ಸಹಾಯಕರಾದ ವಾಸು ನಾಯ್ಕ್, ಶ್ರೀಮತಿ ನೂತನ್ ಶೆಟ್ಟಿ, ಪುರುಷೋತ್ತಮ್ ಎಂ, ಶ್ರೀಮತಿ ಶಕುಂತಲಾ ರೈ, ರತನ್ ಕುಮಾರ್ ಕುಳಾಯಿ, ಫೆಡ್ರಿಕ್ ಡಿಸೋಜ, ಸುದೀಪ್ತ ಮಣಯಿ, ಸ್ಥಳೀಯ ನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ವೇದಾವತಿ, ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಶ್ರೀನಿವಾಸ ಕುಳಾಯಿ, ಯೋಗೀಶ್ ಸನಿಲ್ ಕುಳಾಯಿ, ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ, ಉಪಸ್ಥಿತರಿದ್ದರು, ಸಹ ಶಿಕ್ಷಕರಾದ ಮಲ್ಲಪ್ಪರವರು ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಹಿರಿಯ ಸಹಶಿಕ್ಷಕರಾದ ಗೋಪಾಲರವರು ಧನ್ಯವಾದ ಸಮರ್ಪಿಸಿದರು. ಶಿಕ್ಷಕ ವೃಂದ ಹಾಗೂ ಶಾಲಾ ಮಕ್ಕಳು ಸಭೆಯಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ