ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಡಾ. ಪೆರ್ಲ ಅಭಿನಂದನೆ

Upayuktha
0


ಕಲ್ಬುರ್ಗಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ನೂತನ ಸಂಸದರಾಗಿ ಆಯ್ಕೆ ಹೊಂದಿದ ವಿಧಾನ ಪರಿಷತ್ತಿನ ಮಾಜಿ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕಲಬುರ್ಗಿ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅಭಿನಂದನೆ ಸಲ್ಲಿಸಿದ್ದಾರೆ.


ಬೆಂಗಳೂರು ವಿಧಾನಸೌಧದಲ್ಲಿ ಶನಿವಾರ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ ತನ್ನ ಇತ್ತೀಚೆಗಿನ "ಮಧ್ಯಮ ಮಾರ್ಗ" ಕೃತಿಯನ್ನು ನೀಡಿ ಶುಭ ಹಾರೈಸಿದರು. ರಾಜಕಾರಣದಲ್ಲಿ ಅತ್ಯಂತ ಪ್ರಾಮಾಣಿಕ ಮತ್ತು ಸತ್ಯ ಶುದ್ಧ ನಡೆಯ ರಾಜಕಾರಣಿಯಾಗಿ ಹೆಸರು ಪಡೆದ ಕೋಟ ಕರಾವಳಿಯ ಮತ್ತು ನಾಡಿನ ಅಭಿವೃದ್ಧಿಗೆ ಎಂದು ಶುಭ ಕೋರಿದರು.


ತಮ್ಮಂತಹ ಹಿತೈಷಿಗಳ ಮತ್ತು ಮತದಾರರ ಹಾಗೂ ನಾಡಿನ ಜನತೆಯ ವಿಶ್ವಾಸವನ್ನು ಉಳಿಸಿ ಬೆಳೆಸುವ ಕೆಲಸ ಕಾರ್ಯಗಳಲ್ಲಿ ಮುಂದುವರಿಯುತ್ತೇನೆ ಎಂದು ಈ ಸಂದರ್ಭದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ತಿಳಿಸಿದರು. ಲೋಕಸಭಾ ಸದಸ್ಯರ ಜೊತೆ ಸಂಸದರ ಆಪ್ತರಾದ ವಿವೇಕ್ ಕೋಟ ಮತ್ತು ಗಣೇಶ್ ಶೆಣೈ ಜೊತೆಗಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top