ಜಿಲ್ಲಾ ಮಟ್ಟದ ‘ಮಕ್ಕಳ ಹಬ್ಬ'ದಲ್ಲಿ ಸುದಾನ ಶಾಲೆಯ ನಾಟಕ ತಂಡಕ್ಕೆ ಪ್ರಥಮ ಬಹುಮಾನ

Upayuktha
0


ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆಗಳು ಜೊತೆಗೂಡಿ, ಜೂನ್ 7ರಂದು ಮಂಗಳೂರಿನ ಉರ್ವ ಸ್ಟೋರ್ ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು  ಹಮ್ಮಿಕೊಂಡಿದ್ದವು.


ಇದರಲ್ಲಿ ನಾಟಕ ವಿಭಾಗದಲ್ಲಿ ಪುತ್ತೂರಿನ ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ‘ರೋಗಗಳ ಮಾಯದಾಟ’ ಎಂಬ ನಾಟಕವು ಪ್ರಥಮ ಬಹುಮಾನ ಪಡೆದುಕೊಂಡಿದೆ. ಈ ನಾಟಕವನ್ನು ರಂಗ ನಿರ್ದೇಶಕರು, ಪತ್ರಕರ್ತ ಮೌನೇಶ್ ವಿಶ್ವಕರ್ಮ ಅವರು ರಚಿಸಿ ನಿರ್ದೇಶಿಸಿದ್ದು, ವಿದ್ಯಾರ್ಥಿಗಳಾದ ವಿಘ್ನೇಶ್ ಸಿ ರೈ (10 ನೇ), ಆರ್ಣವ್ ಅನಂತ್ ಅರಿಗ (10ನೇ), ಮನ್ವಿತ್ ಎನ್(9ನೇ), ಖದೀಜತ್ ಅಫ್ನ (9ನೇ), ಭೂಮಿಕಾ ಎಚ್ (10ನೆ) ಅನೀಶಾ ಜಿ ಎ (10ನೇ), ರಚನಾ ಯು ಎ (9ನೇ), ಸಮೃದ್ಧಿ (9ನೇ), ವಿನ್ಯಾಸ್ ಡಿ ವಿ (8 ನೇ) ಪಾತ್ರ ವಹಿಸಿದ್ದರು.


ಶಾಲೆಯ ಸಹ ಶಿಕ್ಷಕರಾದ ಶ್ರೀಮತಿ ಪೂಜಾ, ಶ್ರೀಮತಿ ಪುಷ್ಪಶ್ರೀ ಮತ್ತು ಶಿವಗಿರಿ ಕಲ್ಲಡ್ಕ ಅವರು ಸಹಕರಿಸಿದರು. ಲಘು ಸಂಗೀತ ವಿಭಾಗದಲ್ಲಿ ಶ್ರೀವಿಭಾ (9ನೇ) ತೃತೀಯ ಸ್ಥಾನವನ್ನು ಪಡೆದಿದ್ದು ವಿಜೇತರನ್ನು ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್, ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್ ರವರು ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top