ಬ್ರಹ್ಮಾವರ: ಗಿಡ ನೆಡುವ ಬೃಹತ್ ಅಭಿಯಾನ

Upayuktha
0


ಬ್ರಹ್ಮಾವರ: ವಿಶ್ವ ಪರಿಸರ ದಿನದ ಅಂಗವಾಗಿ ಮಿಷನ್ ಆಸ್ಪತ್ರೆ ಆವರಣದಲ್ಲಿ ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಮಲಬಾರ್ ಗೋಲ್ಡ್, ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ, ವೈದ್ಯಕೀಯ ಪ್ರತಿನಿಧಿಗಳ ಸಂಘಹಾಗೂ ಜನ ಔಷಧಿ ಕೇಂದ್ರ ಇದರ ವತಿಯಿಂದ ಗಿಡ ನೆಡುವ ಬೃಹತ್ ಅಭಿಯಾನ ನಡೆಯಿತು.


ವಲಯ ಅರಣ್ಯಾಧಿಕಾರಿ ಸುರೇಶ ಗಾಣಿಗ ಮಾತನಾಡಿ, ಗಿಡಗಳನ್ನು ನೆಟ್ಟು ಬೆಳೆಸಬೇಕು ಅರಣ್ಯಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ವಾತಾವರಣದಲ್ಲಿ ಬದಲಾವಣೆಯಾಗುತ್ತಿದೆ ಹೀಗಾಗಿ ಕಾಡು ಬೆಳೆಸಬೇಕಾದ ಅನಿವಾಯ೯ತೆ ಇದೆ ಎಂದರು.


ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಅರಣ್ಯ ಇಲಾಖೆ ಸಹಕಾರದಿಂದ ಸುಮಾರು 5 ಸಾವಿರ ಗಿಡ ನೆಡುವ ಅಭಿಯಾನ ನಡೆಯುತ್ತಿದೆ ಎಂದರು.


ಈ ಸಂದಭ೯ದಲ್ಲಿ ಮಲಬಾರ್ ಗೋಲ್ಡ್ ನ ರಾಘವೇಂದ್ರ ಅಜೆಕಾರು, ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ, ರಾಘವೇಂದ್ರ ಕವಾ೯ಲು, ಕಾರ್ಯದರ್ಶಿ ಮಿಲ್ಟನ್ ಒಲಿವರ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ| ಸುಜಾ ಕರ್ಕಡ, ವೀಣಾ ಮಿನೇಜಸ್, ಎಚ್.ಆರ್ ಲಿಯೋನ, ಅಶೋಕ್, ಸದಾನಂದ  ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top