ಬೆಂಗಳೂರು: ಪ್ರಕಾಶನಗರದ ರಾಯರ ಮಠದಲ್ಲಿ 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಮೃತ್ತಿಕಾ ಬೃಂದಾವನದ 66ನೇ ವಾರ್ಷಿಕೋತ್ಸವದ ಪ್ರಯುಕ್ತ ಜೂನ್ 10 ಮತ್ತು 11 ಎರಡು ದಿನಗಳು ಆಯೋಜಿಸಿದ್ದ ಸಮಾರಂಭದಲ್ಲಿ, 10ರ ಸಂಜೆಯ ಕಾರ್ಯಕ್ರಮದಲ್ಲಿ ಸುಮಾರು 12 ವರ್ಷಗಳಿಂದ ನಾಡಿನ ಪ್ರಸಿದ್ಧ ವಿದ್ವಾಂಸರಿಂದ ನಡೆಸುತ್ತಿದ್ದ "ಮಹಾಭಾರತ" ಪ್ರವಚನದ ಮಹಾಮಂಗಳೋತ್ಸವ ಪ್ರಯುಕ್ತ ವೇದಘೋಷ, ವಾದ್ಯಘೋಷ ಮತ್ತು ವಿವಿಧ ಭಜನಾ ಮಂಡಳಿಯ ಸದಸ್ಯರುಗಳ ಗಾಯನದೊಂದಿಗೆ ಪ್ರಕಾಶನಗರದ ರಾಯರ ಮಠದ ಪ್ರದಕ್ಷಿಣಾಕಾರದಲ್ಲಿ "ಶ್ರೀಮನ್ಮಹಾಭಾರತ ಗ್ರಂಥದ" ಉತ್ಸವ (ಮೆರವಣಿಗೆ) ಜರುಗಿತು. ನಂತರ ಪಂ|| ವಿದ್ಯಾಧೀಶಾಚಾರ್ಯ ಗುತ್ತಲ್ ಮತ್ತು ಪಂ|| ಕರಣಂ ವಾದಿರಾಜಾಚಾರ್ಯರಿಂದ ಮಹಾಭಾರತ ಉಪನ್ಯಾಸದ ಕುರಿತು ವ್ಯಾಖ್ಯಾನ ನಡೆಯಿತು.
ಜೂನ್ 11ರಂದು ಬೆಳಗ್ಗೆ ಫಲ-ಪಂಚಾಮೃತ ಅಭಿಷೇಕ, ಮಧು ಅಭಿಷೇಕ, ಗುರುಗಳ ಬೃಂದಾವನಕ್ಕೆ ಸುವರ್ಣ ಕವಚ ಧಾರಣೆಯೊಂದಿಗೆ ವಿಶೇಷ ಅಲಂಕಾರ, ಶ್ರೀಮದುತ್ತರಾಧಿಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ತಪ್ತ ಮುದ್ರಾಧಾರಣೆ, ಸಂಸ್ಥಾನ ಪೂಜೆ, ಕನಕಾಭಿಷೇಕ, ಅನುಗ್ರಹ ಸಂದೇಶ, ಮಹಾಮಂಗಳಾರತಿ, ತೀರ್ಥಪ್ರಸಾದ ಮತ್ತು ಫಲ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮಗಳು ಜರುಗಿದವು. ಸಂಜೆಯ ಕಾರ್ಯಕ್ರಮದಲ್ಲಿ ಈ ಮಹತ್ಕಾರ್ಯದಲ್ಲಿ ಶ್ರಮಿಸಿದ ಮಹನೀಯರಿಗೆ ಶ್ರೀಪಾದಂಗಳವರಿಂದ ಆಶೀರ್ವಾದ, ಪಂಡಿತರಿಂದ ಪ್ರವಚನ, ಸ್ವಾಮಿಗಳಿಂದ ಅನುಗ್ರಹ ಸಂದೇಶ ಮತ್ತು ಫಲ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗೆ ಹಾಗೂ ವೈದ್ಯಕೀಯ ಅಶಕ್ತರಿಗೆ ಧನ ಸಹಾಯ ಮಾಡಲಾಯಿತು ಎಂದು ಶ್ರೀ ಮಠದ ಗೌರವ ಅಧ್ಯಕ್ಷರಾದ ಎನ್.ಜಿ. ವೆಂಕಟೇಶಮೂರ್ತಿಗಳು ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ