ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜ: ಪೋಂಡಾ ಶಾಖೆ ಉದ್ಘಾಟನೆ

Upayuktha
0


ಪಣಜಿ: ಈ ವೀರಶೈವ ಲಿಂಗಾಯತ ಧರ್ಮದಲ್ಲಿ ನಾವು ಜನ್ಮವೆತ್ತಿ ಬಂದಿರುವುದೇ ಒಂದು ಸೌಭಾಗ್ಯ. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಧರ್ಮದ ತತ್ವಗಳಿಂದ ದೂರ ಸರಿಯುತ್ತಿದ್ದಾರೆ ಎಂದು ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಜುವಾರಿನಗರ ಶಾಖಾ ಸಮಿತಿಯ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಫರ್ತಾಬಾದ್ ಹೇಳಿದರು.


ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜ ಮಡಗಾಂವ ವತಿಯಿಂದ ಗೋವಾದ ಪೊಂಡಾದ ಶಾಖಾ ಸಮೀತಿಯನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಲ್ಲಿಕಾರ್ಜನ ಫರ್ತಾಬಾದ್ ಮಾತನಾಡುತ್ತಿದ್ದರು.


ಬಸವಾದಿ ಶಿವಶರಣರು ಅನೇಕ ವಚನಗಳ ಮೂಲಕ ಧರ್ಮಜಾಗೃತಿ ಮಾಡಿದ್ದಾರೆಂಬುದನ್ನು ಅರಿತು ನಾವು ನಮ್ಮ ಧರ್ಮದ ತತ್ವ ಸಿದ್ಧಾಂತಗಳನ್ನು ಮರೆಯಬಾರದು. ವೀರಶೈವ ಲಿಂಗಾಯತ ಸಮಾಜದ ವತಿಯಿಂದ ವರ್ಷಕ್ಕೆ ಒಮ್ಮೆಯಾದರೂ ಜಗಧ್ಗುರುಗಣ್ಯರನ್ನು ಬರಮಾಡಿಕೊಂಡು ಜನರಲ್ಲಿ ಧರ್ಮಜಾಗೃತಿ ಮಾಡುವುದು ಅತ್ಯಂತ ಅವಶ್ಯಕವಾಗಿದೆ ಎಂದರು.


ಈ ಸಂದರ್ಭದಲ್ಲಿ ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಪೊಂಡಾ ಶಾಖಾ ಸಮೀತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸ್ಮೀತಾ ಸಿರಗಣ್ಣವರ್ ಮಾತನಾಡಿ- ಕಳೆದ ಅನೇಕ ವರ್ಷಗಳಿಂದ ನಾವು ಗೋವಾದಲ್ಲಿದ್ದು ವೀರಶೈವ ಲಿಂಗಾಯತ ಧರ್ಮದಲ್ಲಿ ನಾವು ಧರ್ಮಸೇವೆ ಮಾಡಲು ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. ಜನರಲ್ಲಿ ವೀರಶೈವ ಲಿಂಗಾಯತ  ಧರ್ಮದ ಸಂಸ್ಕಾರಗಳನ್ನು ಮನೆ ಮನೆಗಳಿಗೆ ಮುಟ್ಟಿಸುವ ಕೆಲಸ ಮಾಡುತ್ತೇನೆ. ಗೋವಾದಲ್ಲಿ ಎಲ್ಲ ವೀರಶೈವ ಲಿಂಗಾಯತರನ್ನು ಒಗ್ಗೂಡಿಸಿ ಧರ್ಮದ ಸಂಸ್ಕಾರಗಳನ್ನು ಆಚರಿಸುತ್ತ ತಮ್ಮ ಮಕ್ಕಳಿಗೆ ಧಾರೆ ಎರೆಯುವಂತೆ ಮಾಡಲು ನಾನು ಪ್ರಯತ್ನಿಸುತ್ತೇನೆ ಎಂದರು.


ಮಹೇಶ ಆಲೂರು ರವರು ಮಾತನಾಡಿ-ಗೋವಾದಲ್ಲಿ ವೀರಶೈವ ಧರ್ಮ ಬೆಳೆಯಬೇಕು. ಜನರು ಸಿದ್ಧಾಂತಗಳನ್ನು ಪಾಲಿಸುತ್ತ ಸಂಸ್ಕಾರವಂತರಾಗಬೇಕು ಎಂದರು.


ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜ ಪಣಜಿ ಶಾಖೆಯ ಸಿದ್ಧಾರ್ಥ ಗಾಡವಿ, ದೀಪಕರಾಜ್ ಕುಡಚಿಮಠ, ಜುವಾರಿನಗರದ ಮಲ್ಲಿಕಾರ್ಜುನ ಫರ್ತಾಬಾದ್, ಮಹೇಶ್ ಆಲೂರ್, ಮಡಗಾಂವನ ಚೆನ್ನು ಹಡಪದ, ಮುತ್ತಪ್ಪ ಹಲಗತ್ತಿ ಮತ್ತಿತರರು ಉಪಸ್ಥಿತರಿದ್ದರು.


ಜಯಶ್ರೀ ಶಂಕರ ಹೊಸ್ಮನಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು, ಸಂಗೀತಾ ಚಪರೆ ಪ್ರರ್ಥಿಸಿದರು.


ವೀರಶೈವಲಿಂಗಾತಯ ಸಮಾಜದ ಪೋಂಡಾ ಶಾಖೆಯ ಅಧ್ಯಕ್ಷರಾಗಿ ಸ್ಮೀತಾ ಸಿರಗಣ್ಣವರ್, ಉಪಾಧ್ಯಕ್ಷರಾಗಿ ಮಹಾಂತೇಶ್ ಬಡಿಗೇರ,ಕಾರ್ಯದರ್ಶಿಯಾಗಿ ರೇವಣಸಿದ್ಧಯ್ಯ ಹಿರೇಮಠ, ಸಹಕಾರ್ಯದರ್ಶಿಯಾಗಿ ಮೀನಾಕ್ಷಿ ಕಮ್ಮಾರ, ಕೋಶಾಧಿಕಾರಿಯಾಗಿ ವಿರೂಪಾಕ್ಷ, ಸಹಕೋಶಾಧಿಕಾರಿಯಾಗಿ ಸುರೇಶ ಹಡಪದ, ಆಯ್ಕೆಯಾದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top