ಅಂಗವೈಕಲ್ಯದಿಂದ ಕೂಡಿದ ಬಡವರಿಗೆ ನೆರವು ಶ್ಲಾಘನೀಯ: ಡಾ. ಎಂ.ಬಿ. ಬೋರಲಿಂಗಯ್ಯ

Upayuktha
0

ವೆನ್ಲಾಕ್‌ನಲ್ಲಿ ಸುಧಾರಿತ ಎಂಡೊ ಪ್ರೊಸ್ಥೆಟಿಕ್ ಸೆಂಟರ್‌ಗೆ ಚಾಲನೆ 



ಮಂಗಳೂರು: ದೇಶದಲ್ಲಿ ವಿವಿಧ ಕಾರಣದಿಂದ ಪ್ರತಿ ವರ್ಷ ಲಕ್ಷಾಂತರ ಮಂದಿ ಶಾಶ್ವತ ಅಂಗವಿಕಲರಾಗುತ್ತಾರೆ.ಈ ಅಂಗವಿಕಲತೆ ಆರ್ಥಿಕವಾಗಿ ಬಡವರಾಗಿರುವವರನ್ನು ಇನ್ನಷ್ಟು ಕಾಡುತ್ತದೆ ಇಂತಹ ಜನರಿಗೆ ಕೃತಕ ಅಂಗಗಳ ವಿತರಣೆಯನ್ನು ದೀರ್ಘ ಕಾಲದಿಂದ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಅರ್ಹರಿಗೆ  ಉಚಿತವಾಗಿ ನೀಡುತ್ತಿರುವುದು ಮಹತ್ವದ ಶ್ಲಾಘನೀಯ ಕಾರ್ಯವೆಂದು ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ|ಎಂ.ಬಿ. ಬೋರ ಲಿಂಗಯ್ಯ ತಿಳಿಸಿದರು.


ಅವರು ಲಯನ್ಸ್ ಸಂಸ್ಥೆಯ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆಯ ಲಿಂಬ್ ಸೆಂಟರ್‌ನಲ್ಲಿ ಶುಕ್ರವಾರ ಕೃತಕ ಅಂಗಾಂಗ ತಯಾರಿಯ ಸುಧಾರಿತ ಎಂಡೊ ಪ್ರೊಸ್ಥೆಟಿಕ್ ಸೆಂಟರನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಈ ಕೆಲಸದಲ್ಲಿ ತೊಡಗಿರುವ ಡಾ. ಶಾಂತರಾಮ ಶೆಟ್ಟಿಯವರ ನೇತೃತ್ವದ ತಂಡ ಹಾಗೂ ವೆನ್ಲಾಕ್ ನ ಲಯನ್ಸ್ ಲಿಂಬ್ ಸೆಂಟರ್ ನ ಕಾರ್ಯವನ್ನು ಅಭಿನಂದಿಸುವುದಾಗಿ ತಿಳಿಸಿ ನೂತನ ಕೇಂದ್ರಕ್ಕೆ ಶುಭ ಹಾರೈಸಿದರು.


ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್ ಕೇಂದ್ರದ ಅಧ್ಯಕ್ಷ ಡಾ| ಎಂ. ಶಾಂತಾರಾಮ ಶೆಟ್ಟಿ ಮಾತನಾಡುತ್ತಾ, ದೇಶದಲ್ಲಿ ಮುಂಬಯಿ, ಡೆಲ್ಲಿ, ಕೊಲ್ಕತ್ತಾ, ಬಿಟ್ಟರೆ ಮಂಗಳೂರಿನಲ್ಲಿ ಕೃತಕ ಅವಯವಗಳನ್ನು ನೀಡುವ ಲಿಂಬ್ ಸೆಂಟರ್ ನ್ನು ಲಯನ್ಸ್ ಸಂಸ್ಥೆಯ ಸಹಕಾರದೊಂದಿಗೆ 49 ವರ್ಷಗಳ ಹಿಂದೆ ಆರಂಭಿಸಲಾಗಿದೆ. ಇದುವರೆಗೆ ಸುಮಾರು 80ಸಾವಿರ ಜನರಿಗೆ ಕೃತಕ ಅಂಗಾಂಗಳನ್ನು ನೀಡಲಾಗಿದೆ. ಈಗ ಈ ಕೇಂದ್ರ ಮೇಲ್ದರ್ಜೆಗೆ ಏರಿಸುವ ಮೂಲಕ ಇನ್ನಷ್ಟು ಜನರಿಗೆ ನೆರವಾಗಲಿದೆ ಈ ಯೋಜನೆಗೆ ನೆರವು ನೀಡಿದ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳೆಗೆ ಕೃತಜ್ಞತೆ ಸಲ್ಲಿಸುವುದಾಗಿ ಶಾಂತರಾ ಶೆಟ್ಟಿ ತಿಳಿಸಿದರು.


ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ  ಡಾ| ಜೆಸಿಂತಾ ಡಿ'ಸೋಜಾ ಮಾತನಾಡುತ್ತಾ, ಡಾ.ಶಾಂತಾ ರಾಮ ಶೆಟ್ಟಿಯವರ ನೇತೃತ್ವದಲ್ಲಿನ ಈ ಲಿಂಬ್ ಸೆಂಟರ್ ಮೂಲಕ ವೆನ್ಲಾಕ್ ನ ಬಹುತೇಕ ಅಂಗಾಂಗ ಕಳೆದು ಕೊಂಡ ಬಡವರು ತಮ್ಮ ಬದುಕಿನಲ್ಲಿ ನವಚೇತನ ಪಡೆಯುವಂತಾಗಿದೆ ಎಂದರು.


ಲಯನ್ಸ್ ಗವರ್ನರ್ ಮೆಲ್ವಿನ್ ಡಿ'ಸೋಜಾ, ಮಾಜಿ ಲಯನ್ಸ್ ಗವರ್ನರ್ ಗಳಾದ ವಸಂತ ಶೆಟ್ಟಿ, ಸಂಜಿತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಸಮಾರಂಭದ ವೇದಿಕೆಯಲ್ಲಿ ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಶೀನ ಪೂಜಾರಿ, ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್ ನ ಸಂಚಾಲಕ ಡಾ.ಕೆ.ಆರ್. ಕಾಮತ್,ವೆನ್ಲಾಕ್ ಲಿಂಬ್ ಸೆಂಟರ್ ನ ವ್ಯವಸ್ಥಾಪಕ ಸುರೇಶ್  ಶೆಟ್ಟಿ ಮೊದಲಾದವರು  ಉಪಸ್ಥಿತರಿದ್ದರು. ವೆನ್ಲಾಕ್‌ನ ಲಯನ್ಸ್ ಲಿಂಬ್ ಸೆಂಟರ್ ನ  ಕಾರ್ಯದರ್ಶಿ ಮುರಳೀಧರ ಲಮಾಣಿ ವಂದಿಸಿದರು.


ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್ ವತಿಯಿಂದ ಕೃತಕ ಅಂಗಾಂಗಗಳನ್ನು ಅತಿಥಿಗಳು ವಿತರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top