ಹೆತ್ತವರ ಆಶಿರ್ವಾದದೊಂದಿಗೆ ದಿನವನ್ನು ಆರಂಭಿಸಬೇಕು : ರಾಜಶ್ರೀ ಎಸ್ ನಟ್ಟೋಜ

Upayuktha
0

ಬಪ್ಪಳಿಗೆಯ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಶೈಕ್ಷಣಿಕ ಪ್ರಾರಂಭೋತ್ಸವ



ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಬುಧವಾರದಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳನ್ನ ಹೊದಳು ಬೀರಿ, ಆರತಿ ಬೆಳಗಿ, ತಿಲಕವಿಟ್ಟು, ಹೂ ಮುಡಿಸಿ ಬಹು ಸಂಭ್ರಮದಿಂದ ಸಾಂಪ್ರದಾಯಿಕ ರೀತಿಯಲ್ಲಿ ಶಾಲೆಗೆ ಬರ ಮಾಡಿಕೊಳ್ಳಲಾಯಿತು.  


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಮಕ್ಕಳು ಹೆತ್ತವರ ಆಶೀರ್ವಾದ ಪಡೆದು ದಿನವನ್ನ ಆರಂಬಿಸಬೇಕು.  ಗುರಿಯ ಕಡೆ ಲಕ್ಷ್ಯವಿಟ್ಟು ಹಂತ ಹಂತವಾಗಿ ಮುನ್ನಡೆದರೆ ಸಫಲತೆ ನಮ್ಮದಾಗುವುದು ಎಂದರು.


ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಹಾಗೂ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದು, ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಶಿಕ್ಷಕಿ ರಮ್ಯ ಕಾರ್ಯಕ್ರಮ ನಿರೂಪಿಸಿದರು.

إرسال تعليق

0 تعليقات
إرسال تعليق (0)
To Top