"ಯಕ್ಷಮಾನಸಿ" - ಯಕ್ಷಗಾನ ಕಲಾವಿದೆ

Upayuktha
0


ನೃತ್ಯ, ಸಂಗೀತ, ಸಂಭಾಷಣೆ, ವೇಷಭೂಷಣ, ಪ್ರಸಾಧನ ಮತ್ತು ರಂಗ ತಂತ್ರಗಳನ್ನು ಒಂದು ವಿಶಿಷ್ಟ ಶೈಲಿ ಮತ್ತು ರೂಪದೊಂದಿಗೆ ಸಂಯೋಜಿಸುವ ಯಕ್ಷಗಾನದ ಕಲಾ ಪ್ರಕಾರವು ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಯ ಶ್ರೀಮಂತ ಕಲೆ. ಇಂತಹ ಶ್ರೀಮಂತ ಕಲೆಯಲ್ಲಿ ಮಿಂಚುತ್ತಿರುವವರು ರೇವತಿ ನವೀನ್.


ಏಪ್ರಿಲ್ 09ರಂದು ಪೂವಪ್ಪ ಪೂಜಾರಿ ಹಾಗೂ ಕಮಲಾ ಪೂಜಾರಿ ಇವರ ಮಗಳಾಗಿ ರೇವತಿ ನವೀನ್ ಅವರ ಜನನ. SSLC ಇವರ ವಿದ್ಯಾಭ್ಯಾಸ. ಶಾಲಾ ದಿನಗಳಲ್ಲಿ ತಾಯಿಯ ಜೊತೆಗೆ ಯಕ್ಷಗಾನ ನೋಡಲು ಹೋಗುತ್ತಿದ್ದ ಕಾರಣ ನಾನು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ರೇವತಿ ನವೀನ್.


ಯಕ್ಷಗಾನ ಗುರುಗಳು:-

ಶಂಕರನಾರಾಯಣ ಮೈರ್ಪಾಡಿ, ಗಿರೀಶ್ ನಾವಡ ಕಾಟಿಪಳ್ಳ, ಪೂರ್ಣಿಮಾ ಯತೀಶ್ ರೈ, ವಾಸುದೇವ ರಾವ್ ತಡಂಬೈಲ್ ತಾಳಮದ್ದಳೆ ಗುರುಗಳು.


ಮಾಲಿನಿ ದೂತ, ಪಾತ್ರಿ, ದ್ವಾರಪಾಲಕ, ಚಿತ್ರಗುಪ್ತ, ವನಪಾಲಕ, ದೇವೇಂದ್ರ ದೂತ, ಬ್ರಾಹ್ಮಣ, ಶುಕ್ರಾಚಾರ್ಯ, ಧರ್ಮರಾಯ ಇತ್ಯಾದಿ ಪಾತ್ರವನ್ನು ರಂಗದಲ್ಲಿ ನಿರ್ವಹಿಸಿದ್ದಾರೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ:-

ಇಂದಿನ ದಿನಗಳಲ್ಲಿ ಈ ಕಲೆಗೆ ಉತ್ತಮ ಸ್ಪಂದನೆ ದೊರೆಯುತ್ತಿರುವುದು ಸಂತೋಷದ ಸಂಗತಿ. ಮಹಿಳಾ ಯಕ್ಷಗಾನ ವಿಸ್ತೃತ ರೂಪದಲ್ಲಿ ಸ್ವೀಕರಿಸಲ್ಪಟ್ಟಿದೆ.


ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-

ಅಭಿಮಾನ ಆಗಲಿ, ವಿಮರ್ಶೆ ಆಗಲಿ ಅತಿರೇಕ ಆಗಬಾರದು. ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಕಲಾವಿದರಷ್ಟೇ ಜವಾಬ್ದಾರಿ ಪ್ರೇಕ್ಷಕರಿಗೂ ಇದೆ.


ಸನ್ಮಾನ ಹಾಗೂ ಪ್ರಶಸ್ತಿಗಳು:-

♦️ನೆಹರು ಯುವ ಕೇಂದ್ರ ವತಿಯಿಂದ ಜಿಲ್ಲಾ ಯುವ ಪ್ರಶಸ್ತಿ .

♦️ JCI ಸುರತ್ಕಲ್ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಸಂಘ ಕುಳಾಯಿ ವತಿಯಿಂದ "ಕಲಾ ರತ್ನ" ಬಿರುದು.

♦️ ಅಜೆಕಾರು ಅಭಿಮಾನಿ ಬಳಗ ಮುಂಬೈ ವತಿಯಿಂದ ಸನ್ಮಾನ.

♦️ಶ್ರೀ ಕೃಷ್ಣ ಅಯ್ಯಪ್ಪ ಭಕ್ತ ವೃಂದ ಕುಳಾಯಿ ವತಿಯಿಂದ ಸನ್ಮಾನ.

♦️ ಹೊನ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಕುಳಾಯಿ ವತಿಯಿಂದ ಸನ್ಮಾನ.

♦️ ಮಹಿಳಾ ಮಂಡಲ ಕುಳಾಯಿ ವತಿಯಿಂದ ಸನ್ಮಾನ.

♦️ ಯುವ ವಾಹಿನಿ ಸುರತ್ಕಲ್ ವತಿಯಿಂದ ಸನ್ಮಾನ.

♦️ ಯಕ್ಷ ನೂಪುರ ಕುಳಾಯಿ ವತಿಯಿಂದ ಸನ್ಮಾನ.

♦️ ಯಕ್ಷಾರಾಧನಾ ಕಲಾ ಕೇಂದ್ರ (ರಿ) ಉರ್ವ ಮಂಗಳೂರು ವತಿಯಿಂದ ಸನ್ಮಾನ.

♦️ ಯಕ್ಷ ಧ್ರುವ ಪಟ್ಲ ಫೌಂಡೇಶನ್ (ರಿ) ಕೇಂದ್ರ ಮಹಿಳಾ ಘಟಕ ಮಂಗಳೂರು ವತಿಯಿಂದ ಸನ್ಮಾನ.


ಪಣಂಬೂರು ಶ್ರೀ ಪದ್ಮನಾಭಯ್ಯ ಶಾನುಭಾಗ್ ಯಕ್ಷಗಾನ ಕೇಂದ್ರ, ಶ್ರೀ ಸಿದ್ಧಿ ವಿನಾಯಕ ಯಕ್ಷಗಾನ ಕಾಟಿಪಳ್ಳ, ಮಹಾಗಣಪತಿ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತಂಡ ಕಾಟಿಪಳ್ಳ, ಯಕ್ಷಾರಾಧನ ಕಲಾ ಕೇಂದ್ರ ಮಂಗಳೂರು ಮತ್ತು ಯಕ್ಷ ಕೂಟ ಕದ್ರಿ ಮಂಗಳೂರು ತಂಡದಲ್ಲಿ ತಿರುಗಾಟ ಮಾಡಿದ ಅನುಭವ.

ಯಕ್ಷಗಾನ ರಂಗದಲ್ಲಿ ಒಟ್ಟು 17 ವರ್ಷಗಳಿಂದ ಹಾಸ್ಯ ಪಾತ್ರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಮತ್ತು ಸಣ್ಣ ಪುಟ್ಟ ಪಾತ್ರಗಳಲ್ಲಿ ತೊಡಗಿಸಿಕೊಂಡಿರುತ್ತಾರೆ ರೇವತಿ ನವೀನ್.

ಮಹಿಳಾ ಮಂಡಲ ಕುಳಾಯಿ, ನಾರಾಯಣ ಗುರು ಮಹಿಳಾ ಮಂಡಳಿ, ಯುವ ವಾಹಿನಿ ಸುರತ್ಕಲ್, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಗೂ ಹಲವಾರು ಭಜನೆ ಮಂಡಳಿಗಳಲ್ಲಿ ಸದಸ್ಯೆಯಾಗಿರುತ್ತಾರೆ.


ಪೂರ್ಣಿಮಾ ಯತೀಶ್ ರೈ, ಸುಮಂಗಳ ರತ್ನಾಕರ್ ರಾವ್, ರಾಕೇಶ್ ರೈ, ರಾಮಚಂದ್ರ ಭಟ್ ಎಲ್ಲೂರು ಹಾಗೂ ಅನೇಕ ಕಲಾವಿದರು ಮತ್ತು ಗುರುಗಳು ತಮ್ಮ ಈ ಸಾಧನೆಗೆ ತುಂಬಾ ಸಹಕಾರವನ್ನು ನೀಡಿರುತ್ತಾರೆ ಎಂದು ಹೇಳುತ್ತಾರೆ ರೇವತಿ ನವೀನ್.


ಮುಂಬೈ, ದೆಹಲಿ ಕನ್ನಡ ಸಂಘ, ಚೆನ್ನೈ ಕನ್ನಡ ಸಂಘ, ಮೈಸೂರು ಅರಮನೆ, ಶಿರಸಿ ಸೋದೆ ಮಠ, ಶೃಂಗೇರಿ ಶಾರದಾಂಬ ದೇವಸ್ಥಾನ ಹಾಗೂ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಯಕ್ಷಗಾನ ವೇಷ ಮಾಡಿರುತ್ತಾರೆ ರೇವತಿ ನವೀನ್.

ಯಕ್ಷಗಾನ ವೀಕ್ಷಣೆ, ಭಜನೆ, ನಾಟಕ, ಜನಪದ ನೃತ್ಯ ಇವರ ಹವ್ಯಾಸಗಳು.


ರೇವತಿ ಅವರು ನವೀನ್ ಚಂದ್ರ ಅವರನ್ನು 26.05.1991ರಂದು ಮದುವೆಯಾಗಿ ಇಬ್ಬರು ಮಕ್ಕಳಾದ ಸುಹಾನ್ ಹಾಗೂ ಸಚಿನ್ (ಇಬ್ಬರು ಹವ್ಯಾಸಿ ಯಕ್ಷಗಾನ ಕಲಾವಿದರು) ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.


ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನ, ಪತಿಯ ಪ್ರೋತ್ಸಾಹದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ರೇವತಿ ನವೀನ್.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

-ಶ್ರವಣ್ ಕಾರಂತ್ ಕೆ



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top