ಮಂಗಳೂರು: ಸಾಂಪ್ರದಾಯಿಕವಾಗಿ ಷೇರು, ಫ್ಯೂಚರ್ ಫಂಡ್ ಆಪ್ಷನ್ ಮತ್ತು ಮ್ಯೂಚುವಲ್ ಫಂಡ್ ವಹಿವಾಟಿನಲ್ಲಿ ಮುಂಚೂಣಿಯಲ್ಲಿರುವ ಅಪ್ ಸ್ಟಾಕ್ಸ್ ಇದೀಗ ವಿಮೆ ವಿತರಣಾ ವಹಿವಾಟಿಗೆ ಪ್ರವೇಶಿಸಿರುವುದಾಗಿ ಪ್ರಕಟಿಸಿದೆ.
ಈ ಹೊಸ ಸೇವೆ ಪರಿಚಯಿಸುವುದರ ಮೂಲಕ ಕಂಪನಿಯು ಈಗ ತನ್ನ ಬಳಕೆದಾರರಿಗೆ ಅವರ ಅಗತ್ಯಗಳಿಗೆ ಅನುಗುಣವಾಗಿ ವಿಮೆ ಖರೀದಿಸುವ ಸರಳೀಕೃತ, ಪಾರದರ್ಶಕ ಸೇವೆ ಒದಗಿಸುವ ಮೂಲಕ ಭಾರತದ ವಿಮೆ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರುವ ಗುರಿ ಹೊಂದಿದೆ. ಸದ್ಯಕ್ಕೆ ಅಪ್‍ಸ್ಟಾಕ್ಸ್ ಮರಣ ಪರಿಹಾರ ಖಾತರಿಯ ಟರ್ಮ್ ಲೈಫ್ ಇನ್ಶುರನ್ಸ್ ಸೇವೆ ನೀಡುತ್ತಿದೆ. ಶೀಘ್ರದಲ್ಲಿಯೇ ಆರೋಗ್ಯ, ವಾಹನ ಮತ್ತು ಪ್ರಯಾಣ ವಿಮೆ ಸೇವೆ ಆರಂಭಿಸಲು ಯೋಜಿಸುತ್ತಿದೆ. ಅಪ್‍ಸ್ಟಾಕ್ಸ್ ಜೊತೆಗೆ ಪಾಲುದಾರಿಕೆ ಹೊಂದಿರುವ ದೇಶದ ಮೊದಲ ವಿಮೆ ಕಂಪನಿಗಳಲ್ಲಿ ಎಚ್‍ಡಿಎಫ್‍ಸಿ ಲೈಫ್ ಒಂದಾಗಿದೆ. ಅಪ್‍ಸ್ಟಾಕ್ಸ್ ವೇದಿಕೆಯಲ್ಲಿ ತನ್ನ ಟರ್ಮ್ ಇನ್ಶುರನ್ಸ್ ಯೋಜನೆಗಳನ್ನು ಪರಿಚಯಿಸಿದೆ ಎಂದು ಅಪ್‍ಸ್ಟಾಕ್ಸ್‍ನ ಸಹ-ಸಂಸ್ಥಾಪಕಿ ಕವಿತಾ ಸುಬ್ರಮಣಿಯನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ವಿಮೆ ಉತ್ಪನ್ನಗಳ ದೋಷಪೂರಿತ ಮಾರಾಟವನ್ನು ಆಮೂಲಾಗ್ರವಾಗಿ ಪರಿಹರಿಸಲು ಅಪ್‍ಸ್ಟಾಕ್ಸ್ ಈಗ ಮುಂದಾಗಿದೆ. ತನ್ನ ಗ್ರಾಹಕರಿಗೆ ಜೀವನ, ಆರೋಗ್ಯ, ವಾಹನ, ಪ್ರಯಾಣ ವಿಮೆ ಸೌಲಭ್ಯವನ್ನು ಸುವ್ಯವಸ್ಥಿತಗೊಳಿಸುವ ಗುರುತರ ಕಾರ್ಯವನ್ನು ಪ್ರಾರಂಭಿಸಿದೆ. ಸುಧಾರಿತ ತಂತ್ರಜ್ಞಾನ ಮತ್ತು ಉದ್ಯಮದ ಪರಿಣತಿ ಬಳಸಿಕೊಳ್ಳುವ ಮೂಲಕ ಪ್ರತಿ ವಿಭಾಗದಲ್ಲಿನ ಉನ್ನತ ಯೋಜನೆಗಳನ್ನು ಗುರುತಿಸುವುದರಿಂದ ಹಿಡಿದು ವಿಮೆಯನ್ನು ಖರೀದಿಸುವವರೆಗೆ ಮತ್ತು ಅಂತಿಮವಾಗಿ ಪರಿಹಾರ ಧನ ಪಡೆಯುವವರೆಗಿನ ವಿಮೆ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ