ಹೈನುಗಾರಿಕೆ ಸಾಲ ಯೋಜನೆ

Upayuktha
0


ಮಂಗಳೂರು: ಗೋದ್ರೇಜ್ ಉದ್ಯಮ ಸಮೂಹದ ಹಣಕಾಸು ಸೇವಾ ವಿಭಾಗವಾದ ಗೋದ್ರೇಜ್ ಕ್ಯಾಪಿಟಲ್, ಡೈರಿ ಫಾರ್ಮ್ (ಹೈನುಗಾರಿಕೆ) ಸಾಲಗಳನ್ನು ನೀಡಲು ಆರಂಭಿಸುವ ಮೂಲಕ ಕೃಷಿ ವಿಭಾಗಕ್ಕೆ ಪ್ರವೇಶಿಸಿದೆ.


ಕ್ರೀಮ್‍ಲೈನ್ ಡೈರಿ ಪ್ರಾಡಕ್ಟ್ಸ್ ಲಿಮಿಟೆಡ್ ಮತ್ತು ದ್ವಾರ ಇ-ಡೈರಿ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ಗೋದ್ರೇಜ್ ಕ್ಯಾಪಿಟಲ್ ಕರ್ನಾಟಕ ಮತ್ತು ಇತರ ಪ್ರದೇಶಗಳಲ್ಲಿ ಇರುವ ಸಣ್ಣ ಡೈರಿ ಫಾರ್ಮ್ ಮಾಲೀಕರಿಗೆ ಹಣಕಾಸಿನ ನೆರವು ನೀಡಲಿದೆ ಎಂದು ಗೋದ್ರೇಜ್ ಕ್ಯಾಪಿಟಲ್‍ನ ಎಂಡಿ ಮತ್ತು ಸಿಇಒ ಮನೀಶ್ ಶಾ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಡೈರಿ ಫಾರ್ಮ್ ಸಾಲಗಳನ್ನು ಒದಗಿಸುವುದರ ಜೊತೆ ಗೋದ್ರೇಜ್ ಕ್ಯಾಪಿಟಲ್ ಸಂಸ್ಥೆಯು ಜಿಎವಿಎಲ್ ನಲ್ಲಿ ಹೆಸರು ನೋಂದಾಯಿಸಿರುವ ರೈತರಿಗೆ ಜಾನುವಾರುಗಳ ಖರೀದಿ ಮತ್ತು ನಿರ್ವಹಣೆಗಾಗಿ ಜಾಮೀನು- ಮುಕ್ತ ಸಾಲವನ್ನು ಒದಗಿಸಲಿದೆ. ಈ ಸಾಲ ಸೌಲಭ್ಯದಿಂದಾಗಿ ಡೈರಿ ಫಾರ್ಮ್ ಮಾಲೀಕರು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ, ತ್ವರಿತ ಮಂಜೂರಾತಿ ಮತ್ತು ವಿತರಣೆ ಹಾಗೂ ಎರಡು ವರ್ಷಗಳವರೆಗಿನ ಹೊಂದಿಕೊಳ್ಳುವ ಮಾದರಿಯ ಮರುಪಾವತಿ ಆಯ್ಕೆಗಳನ್ನು ಪಡೆಯುತ್ತಾರೆ. ಈ ಎಲ್ಲಾ ಪ್ರಯೋಜನಗಳ ಜೊತೆಗೆ ಹಣಕಾಸಿನ ಸೌಲಭ್ಯವನ್ನು ಸುಲಭವಾಗಿ ಗಳಿಸುತ್ತಾರೆ ಎಂದು ವಿವರಿಸಿದ್ದಾರೆ.


ಗೋದ್ರೇಜ್ ಕ್ಯಾಪಿಟಲ್ ದಕ್ಷಿಣದ ರಾಜ್ಯಗಳಲ್ಲಿ ಎಂಎಸ್‍ಎಂಇ ಸಾಲ ಕ್ಷೇತ್ರದಲ್ಲಿ ಗಮನಾರ್ಹವಾದ ಮಾರುಕಟ್ಟೆ ಪಾಲನ್ನು ಹಿಡಿಯಲು ಎದುರು ನೋಡುತ್ತಿದೆ. ಹಿಂದಿನ ವರ್ಷದ ಪ್ರಗತಿಯ ಆವೇಗವನ್ನು ಕಾಪಾಡಿಕೊಳ್ಳುವ ಮೂಲಕ ಕಂಪನಿಯು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹೊಸ ಶಾಖೆಗಳನ್ನು ಸ್ಥಾಪಿಸಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದೆ ಎಂದು ಹೇಳಿದ್ದಾರೆ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top