ಅನಗತ್ಯ "ಆಪರೇಷನ್", ತಪ್ಪುವ "ಲೊಕೇಶನ್"!

Upayuktha
0

1978 ರಲ್ಲಿ ಅಮೆರಿಕಾದ ತಂತ್ರಜ್ಞಾನದ ಮಾನದಂಡಗಳ ಕಛೇರಿಯ (OTA-office of technology assessment) ವರದಿ ನೀಡಿದ ಪ್ರಕಾರ "ವೈದ್ಯಕೀಯದಲ್ಲಿ ಬಳಸುವ ಎಲ್ಲಾ ವಿಧಾನಗಳಲ್ಲಿ ಕೇವಲ 10 ರಿಂದ 20% ದಷ್ಟು ಮಾತ್ರ ಪರಿಣಾಮಕಾರಿ ಆಗಿವೆಯೆಂದು ಸಮೀಕ್ಷಾ ವರದಿಗಳು ಹೇಳುತ್ತವೆ." 1995ರಲ್ಲಿ ಆ ಸಂಸ್ಥೆಯು ಆಸ್ಟೆಲಿಯಾ, ಕೆನಡಾ, ಫ್ರಾನ್ಸ್, ಜರ್ಮನಿ, ಅಮೆರಿಕಾ ಮುತಾಂದ 8 ರಾಷ್ಟ್ರಗಳಲ್ಲಿನ ವೈದ್ಯಕೀಯ ತಂತ್ರಜ್ಞಾನಗಳನ್ನು ಹೋಲಿಕೆ ಮಾಡಿ ಅಧ್ಯಯನ ನಡೆಸಿತು. ಆಗ, ಅಮೆರಿಕಾದಲ್ಲಿ, ಶಿಶುಮರಣ ಸಂಖ್ಯೆ ಅಧಿಕ; ನಿರೀಕ್ಷಿತ ಜೀವಿತಾವಧಿ ಕಡಿಮೆ ಹಾಗೂ ವೈದ್ಯಕೀಯ ವಿಧಾನಗಳನ್ನು ಪ್ರಯೋಗಗಳ ಭಾಗಗಳಾಗಿ ನಡೆಸಲಾಗುತ್ತವೆ ಎಂಬ ಅಂಶವನ್ನು ಬಯಲು ಮಾಡಿತು. ಕಾನೂನಾತ್ಮಕವಾಗಿ ಅದನ್ನು ಸೆನ್ಸಾರ್ ಮಾಡುವಂತಿಲ್ಲ! ಆದ ಕಾರಣ OTA ಕಛೇರಿಗೆ 1995 ಸೆಪ್ಟೆಂಬರ್ 29 ರಂದು ಬೀಗ ಜಡಿಯಲಾಯಿತು! 23 ವರ್ಷಗಳ ಕಾಲ ಸಮಾಜವನ್ನು ಬಾಧಿಸುವ ವಿಷಯಗಳ ವಿಶ್ಲೇಷಣೆ ಮಾಡುತ್ತಿದ್ದ ವೈಜ್ಞಾನಿಕ ಸಂಸ್ಥೆಯೊಂದನ್ನು ಈ ರೀತಿ ಬಗ್ಗುಬಡಿಯಲಾಯಿತು.


2009 ಜನವರಿ 30ರಂದು ಮತ್ತೊಂದು ವರದಿ ಪ್ರಕಟವಾಯಿತು. "ಗಂಭೀರವಾದ ತಪ್ಪು ಹಾಗೂ ಅಡ್ಡಪರಿಣಾಮಗಳನ್ನು ವರದಿ ಮಾಡುವಲ್ಲಿ ಆಸ್ಪತ್ರೆಗಳು ಅಸಡ್ಡೆ ತೋರುತ್ತಿವೆ." 2007 ರಲ್ಲಿ, ಪೆನ್ಸಿಲ್ವೇನಿಯಾದಲ್ಲಿ ಶಸ್ತ್ರಚಿಕಿತ್ಸೆಯ ಉಪಕರಣವೊಂದು ಉಳಿಯುವ ಪ್ರಕರಣ ಎರಡು ಪ್ರಕರಣಗಳಲ್ಲಿ ದಾಖಲಿತವಾಯಿತು. (Fox chase cancer centre ನಲ್ಲಿ). 2005ರಲ್ಲಿ Abington Memorial Hospital ನಲ್ಲಿ, ಸೊಂಟದ ಬೋಗುಣಿಯ ಶಸ್ತ್ರಚಿಕಿತ್ಸೆಯ (hip surgery) ನಂತರ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಹೆಚ್ಚು ಹೊತ್ತು Bed Panನಲ್ಲಿ ಕುಳಿತ ಕಾರಣದಿಂದ ಹಾಸಿಗೆ ಹುಣ್ಣು (Bed sore) ಆ ಮಹಿಳೆಯಲ್ಲಿ ಕಾಣಿಸಿಕೊಂಡಿತು. ಅಲ್ಲಿನ ಜವಾಬ್ದಾರಿಯುತವೆಂದು ಹೇಳಲಾದ ಆಸ್ಪತ್ರೆಗಳಿಂದ, ಇದ್ಯಾವ ಪ್ರಕರಣಗಳೂ ವರದಿಯಾಗಿಲ್ಲ! ಈ ರೀತಿಯ ವರದಿಯ ವೈಫಲ್ಯಗಳು ಅಲ್ಲಿನ ನ್ಯೂಜೆರ್ಸಿ ಪೆನ್ಸಿಲ್ವೇನಿಯಾದಲ್ಲಿ ಸರ್ವೇಸಾಮಾನ್ಯ. ಕೇಂಬ್ರಿಡ್ಜ್‍ನ ಆರೋಗ್ಯ ಕ್ಷೇಮಾಭಿವೃದ್ಧಿ ತಜ್ಞ, James convay ಹೇಳುವ ಪ್ರಕಾರ -"ಸರಾಸರಿ 100ಜನ ರೋಗಿಗಳ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದರೆ 40 ಜನರಲ್ಲಿ ಈರೀತಿ ತೊಂದರೆಗೊಳಗಾದ ಘಟನೆಗಳು ಆಗುತ್ತವೆ". ಅಲ್ಲಿ ಮಾತ್ರವಲ್ಲ, ಇಂತಹ ಅಸ್ಪತ್ರೆಗಳಲ್ಲಾಗುವ ಘಟನೆಗಳ ವರದಿಗಳ ಮರೆಮಾಚುವಿಕೆ ಬಹಳವಾಗಿವೆ ಮತ್ತು ಹಾಸುಹೊಕ್ಕಾಗಿವೆ!


2000ನೇ ಇಸವಿಯಲ್ಲಿ, ಅಮೆರಿಕಾದಲ್ಲಿ, 32000 ದಷ್ಟು ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಸಾವುಗಳು ಉಂಟಾಗಿವೆ! ಇದನ್ನು ಅಮೆರಿಕಾದ ಂgeಟಿಛಿಥಿ ಜಿoಡಿ heಚಿಟಣhಛಿಚಿಡಿe ಖeseಚಿಡಿಛಿh ಚಿಟಿಜ ಕಿuಚಿಟiಣಥಿ ದಾಖಲೆಗಳನ್ನು ಸಂಗ್ರಹಿಸಿ ಅಲ್ಲಿನ ಎಂಒಂ  2003 ರ ಒಕ್ಟೋಬರ್‍ನಲ್ಲಿ ವರದಿಮಾಡಿತು. ಅಲ್ಲಿನ 20%ದಷ್ಟು ಆಸ್ಪತ್ರೆಗಳನ್ನು, ಶಸ್ತ್ರಚಿಕಿತ್ಸಾ ನಂತರದ ಸೂಕ್ಷಾಣುಸೋಂಕು, ಗಾಯಗಳಲ್ಲಿ ಪರಕೀಯ ವಸ್ತುಗಳು, ಶಸ್ತ್ರಚಿಕಿತ್ಸಾ ಗಾಯ ಮತ್ತೆ ತೆರೆದುಕೊಳ್ಳುವುದು,ಹಾಗೂ ಶಸ್ತ್ರಚಿಕಿತ್ಸಾ ನಂತರ ರಕ್ತಸ್ರಾವ- ಇತ್ಯಾದಿಗಳು ಅವುಗಳಲ್ಲಿ ಸೇರಿದ್ದವು.


ಇದರ ಕುರಿತು ಅಮೆರಿಕಾದ AHRQ ನಿರ್ದೇಶಕ, Carolyn M.Dancy M.D, ಇವರು ಪತ್ರಿಕಾ ಸಂದರ್ಶನದಲ್ಲಿ- "ಈ ಅಧ್ಯಯನಗಳು ಅಮೆರಿಕಾದ ಜನತೆಯ ಮೇಲೆ, ವೈದ್ಯ ಹಾಗೂ ಆಸ್ಪತ್ರೆಗಳಿಂದ ಉಂಟಾದ ಹಾನಿಗಳು ಹಾಗೂ ಆರೋಗ್ಯವೆಚ್ಚಗಳ ಹೊರೆಯನ್ನು ದಾಖಲಿಸಿದ ನೇರಸಾಕ್ಷಿಗಳು. ಆದರೆ ಈ ಅಧ್ಯಯನಗಳು, ಅಂಕಿಅಂಶಗಳು, ಆಗುವ ಘಟನೆಗಳಗಿಂತ ಎಷ್ಟೋ ಕಡಿಮೆಯಾಗಿ ತೋರುತ್ತಿವೆ. ಏಕೆಂದರೆ ಇನ್ನೂ ಅನೇಕ ಹಾನಿಗಳನ್ನು ಆಸ್ಪತ್ರೆಯ ಆಡಳಿತ ಮಂಡಳಿಗಳಿ ದಾಖಲಿಸಿರುವುದಿಲ್ಲ. ಇವೆಲ್ಲದರ ಸಂದೇಶ ಇಷ್ಟೇ. ವೈದ್ಯಕೀಯ ಜಗತ್ತು ಉಂಟುಮಾಡುವಂತಹ ಇಂತಹ ಜಟಿಲತೆಗಳು, ಸಮಾಜದ ಸ್ವಾಸ್ಷ್ಯದ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ. ಇಂತಹ ಆ ವೈದ್ಯಕೀಯ ಜನ್ಯ ತೊಂದರೆಗಳು ಯಾಕೆ ಆಗುತ್ತವೆ ಎಂಬುದರ ಬಗ್ಗೆ ತೀವ್ರ ಸಂಶೋಧನೆ ಅಗತ್ಯವಿದೆ; ಅದನ್ನು ತಡೆಗಟ್ಟಲು ಮಾರ್ಗಗಳನ್ನು ಕಂಡುಕೊಳ್ಳ ಬೇಕಾಗಿದೆ."

 

ಕೈತೊಳೆಯುವುದರ ಬಗ್ಗೆ ವಿಶೇಷವಾಗಿ ಒತ್ತುಕೊಡುವಂತದ್ದು, ಮೊದಲಾದ ಅಭ್ಯಾಸಗಳನ್ನು ವೈದ್ಯಕೀಯ ಜಗತ್ತಿನಲ್ಲಿ ಅಳವಡಿಸುವಂತದ್ದು, ಮರಣಪ್ರಮಾಣ ಹಾಗೂ ರೋಗಿಗಳ ನರಳುವಿಕೆಯನ್ನು ಕಡಿಮೆಮಾಡಬಹುದು ಎಂಬುದು ಅವರ ಒಟ್ಟು ಅಭಿಪ್ರಾಯ. ಶಸ್ತ್ರಚಿಕಿತ್ಸೆಗೆ ಮೊದಲಿನ ಮತ್ತು ನಂತರದ ಪ್ರಮಾಣಗಳನ್ನು, ತಪ್ಪುಗಳನ್ನು ತಪ್ಪಿಸುವ ಮಾರ್ಗಗಳನ್ನು ಕೂಡ ಅವರು ಸೂಚಿಸಿದ್ದಾರೆ.


1974 ರಲ್ಲಿ 2.4 ಮಿಲಿಯ ಅನಗತ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಲ್ಲದೆ, ಅದರಲ್ಲಿ ಸತ್ತವರ ಸಂಖ್ಯೆ 11,900. 2001 ರಲ್ಲಿ, 7.5 ಮಿಲಿಯ ಅನಗತ್ಯ ಶಸ್ತ್ರಚಿಕಿತ್ಸೆಗಳಲ್ಲಿ ಸತ್ತವರ ಸಂಖ್ಯೆ 37,136. ಅಲ್ಲಿನ ತಜ್ಞರೇ ಹೇಳುವ ಪ್ರಕಾರ, ಅನಗತ್ಯ ಶಸ್ತ್ರಚಿಕಿತ್ಸೆಗಳ ಅಂಕಿಅಂಶಗಳನ್ನು ನಿಖರವಾಗಿ ಹೇಳುವುದು ಕಷ್ಟ. 1989 ರಲ್ಲಿ, Leape ಎಂಬವನ ಪ್ರಕಾರ, 30% ದಷ್ಟು ಅನಗತ್ಯ ಶಸ್ತ್ರಚಿಕಿತ್ಸೆಗಳಲ್ಲಿ ಸಿಸೇರಿಯನ್ ಹೆರಿಗೆ, ಟಾನ್ಸಿಲ್ ಶಸ್ತ್ರಕ್ರಿಯೆ, ಎಪೆಂಡಿಕ್ಸ್ ಶಸ್ತ್ರಕ್ರಿಯೆ, ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆ(ಹಿಸ್ಟರೆಕ್ಟಮಿ), ಬೊಜ್ಜಿಗೆ ನಡೆಸುವ ಗ್ಯಾಸ್ಟ್ರೆಕ್ಟಮಿ, ಸ್ತನಗಳ ಇಂಪ್ಲಾಂಟ್ ಒಳಗೊಡಿವೆ. 17.6% ದಷ್ಟು ಸೂಚಿಸಲಾದ ಶಸ್ತ್ರಚಿಕಿತ್ಸೆಗಳು ವೈದ್ಯಕೀಯದಲ್ಲಿ ಇನ್ನೊಬ್ಬ ವೈದ್ಯರಿಂದ ಎರಡನೆಯ ಅಭಿಪ್ರಾಯ (Second opition) ಕೇಳದೇ ಮಾಡಲಾದ ಶಸ್ತ್ರಚಿಕಿತ್ಸೆಗಳು. ಮತ್ತೆ ಮುಂದುವರೆದ ಅಧ್ಯಯನಗಳ ಪ್ರಕಾರ, ಅಧಿಕೃತವಾಗಿ, ವರ್ಷಕ್ಕೆ 2.4 ಮಿಲಿಯದಷ್ಟು ಅನಗತ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಮತ್ತು ಅನಗತ್ಯ 11,900 ಸಾವುಗಳು ಸಂಭವಿಸುತ್ತವೆ. 1995 ರಲ್ಲಿ, ಬೆನ್ನಿನ ಮೇಲೆ ನಡೆಸಲಾದ ಶಸ್ತ್ರಚಿಕಿತ್ಸೆಗಳ ಬಗ್ಗೆ ಇಂಥದ್ದೇ ಸಮಿಕ್ಷೆ ನಡೆಸಿದರು. ಅಮೆರಿಕಾದಲ್ಲಿ, ಅದರ ಪ್ರಕಾರ, ನಡೆಸಲಾದ 2,50,000 ಬೆನ್ನಿನ ಶಸ್ತ್ರಚಿಕಿತ್ಸೆಗಳಲ್ಲಿ 44,000 ಶಸ್ತ್ರಚಿಕಿತ್ಸೆಗಳು ಅನಗತ್ಯವಾಗಿದ್ದವು!

 

ಯಾವ ರಿತಿಯಲ್ಲಿ ವೈದ್ಯರ ಔಷದಗಳ ಬರೆಯುವಿಕೆ ಮತ್ತು ಬಳಕೆಯ ಮೇಲೆ ಟಿ.ವಿ ಜಾಹಿರಾತುಗಳ ಪ್ರಬಾವ ಇರುವುದೋ, ಅಂಥದ್ದೇ ಪ್ರಭಾವ ಅನಗತ್ಯವಾದ ಇಂತಹ ಶಸ್ತ್ರಚಿಕಿತ್ಸೆಗಳ ಮೇಲೂ ಇದೆ; ಜಾಹೀರಾತು ಪ್ರೇರಿತ ಸರ್ಜರಿ! ಬೊಜ್ಜಿಗೆ ಸಂಬಂಧಿಸಿದ ಹಾಗೂ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳು ಹಾಲಿವುಡ್ ರೂಪದರ್ಶಿಗಳ ಜಾಹೀರಾತುಗಳಿಂದ ಪ್ರಭಾವಿತವಾಗಿರುತ್ತವೆ. ಮಾದಕ ಹಾಗೂ ಮನಮೋಹಕವೆಂದು ಜನರ ಗಮನ ಸೆಳೆಯಲಾಗುತ್ತವೆ. ಅದಕ್ಕೊಂದು ಮಧುರ ಹಿನ್ನೆಲೆ ಸಂಗೀತವೂ ಇರುತ್ತದೆ! ಅಂತರ್ಜಾಲದ        ಮಾರುಕಟ್ಟೆ ಇದಕ್ಕೆ ಯಥೇಚ್ಛವಾಗಿದೆ!


ಸ್ಪೇಯಿನ್‍ನಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಅಲ್ಲಿ ನಡೆಸಲಾದ 20 ರಿಂದ 25% ಸರ್ಜರಿಗಳು ಅನಗತ್ಯವಾದದ್ದು. 1983ರಿಂದ 1994 ರ ಅವಧಿಯಲ್ಲಿ, ಸಾಮಾನ್ಯ ಶಸ್ತ್ರಚಿಕಿತ್ಸೆಗಳು 38% ದಷ್ಟು ಹೆಚ್ಚಾದವು. 1994 ರಲ್ಲಿ ಕಣ್ಣಿನ ಪೊರೆಯ (ಕ್ಯಾಟರಾಕ್ಟ್) ಶಸ್ತ್ರಚಿಕಿತ್ಸೆ ಸರ್ವೇಸಾಮಾನ್ಯವಾಯಿತು. 2 ಮಿಲಿಯದಷ್ಟು ಕ್ಯಟರಾಕ್ಟ್ ಸರ್ಜರಿ ನಡೆದು ಮೊದ¯ಸ್ಥಾನದಲ್ಲಿ ನಿಂತಿತು. ನಂತರ ಸಿಸೇರಿಯನ್ ಹೆರಿಗೆ, ಅನಂತರ ಹರ್ನಿಯಾ ಸರ್ಜರಿ ಹೆಚ್ಚಿನ ಸಂಖ್ಯೆಯಲ್ಲಿತ್ತು. ಮೊಣಗಂಟು ಸಮಸ್ಯೆಗೆ ನಡೆಸಲಾಗುವ ಶಸ್ತ್ರಚಿಕಿತ್ಸೆಗಳೂ ಅಧಿಕವಾದವು. ಆದರೆ ಅವುಗಳನ್ನು ನಡೆಸಿದ ನಂತರ ಉಂಟಾದ ಹಾನಿಗಳ ಬಗ್ಗೆ ಸರಿಯಾದ ದಾಖಲೆಗಳನ್ನು ಮಾಡಿಲ್ಲ ಎಂಬುದು ಆತಂಕದ ವಿಷಯ. ಸಿಸೇರಿಯನ್ ಹೆರಿಗೆ, ಹೊಟ್ಟೆಯ ಸರ್ಜರಿಗಳ ಸಂದರ್ಭದಲ್ಲಿ ಬೆನ್ನುಹುರಿಗೆ ಅನೆಸ್ತೇಸಿಯಾ ನೀಡಲು ಬಳಸಲಾದ ನಳಿಕೆಗಳು ಸರಿಯಾಗಿ (sterile)  ಸೂಕ್ಮಾಣುರಹಿತ ವಿಧಾನ ಅನುಸರಿಸದ ಕಾರಣದಿಂದ ಗಂಭೀರ ಸೋಂಕು ಉಂಟುಮಾಡಿ ಕಾಲುಗಳು ನಿಷ್ಕ್ರಿಯವಾಗುವುದಕ್ಕೆ ಕಾರಣವಾದವು. coronary Angiography, ಹೃದಯದ ರಕ್ತನಾಳ ಸರ್ಜರಿ, cardiac pacemaker ಅಳವಡಿಕೆ, ಜಠರದ ಎಂಡೋಸ್ಕೋಪಿ, ಬೆನ್ನುಹುರಿಯ ಶಸ್ತ್ರಚಿಕಿತ್ಸೆಗಳು (ಹೆಚ್ಚಾಗಿ ಬೆನ್ನುನೋವಿಗೆ ಮಾಡುವ) ಅನಗತ್ಯವಾಗಿ, ಅಧಿಕ ಪ್ರಮಾಣದಲ್ಲಿ ನಡೆಸಿರುವುದು ಅಲ್ಲಿ ಕಂಡುಬಂದಿತ್ತು.


ಹಾಗೆಯೇ ವೈದ್ಯಕೀಯ ಶಸ್ತ್ರಚಿಕಿತ್ಸೆ ವಿಧಾನಗಳಿಗೆ ಒಳಗಾಗುವಾಗ ಮರಣ ಪ್ರಮಾಣಗಳನ್ನು ಗಮನಿಸುವುದು ಪ್ರಾಮುಖ್ಯ. ಶಸ್ತ್ರಚಿಕಿತ್ಸೆಯ ಮೊದಲು ಒಳಗಾಗುವವರು ಅನುಮತಿ ನೀಡಿ ಸಹಿ ಹಾಕುತ್ತಾರಾದರೂ ಅವರಲ್ಲಿ ಬಹುಜನರಿಗೆ ಆ ಶಸ್ತ್ರಚಿಕಿತ್ಸೆಯಲ್ಲಿ ಆಗುವ ಅಪಾಯಗಳ ಮಾಹಿತಿ ಇರುವುದಿಲ್ಲ ಅಥವಾ ಮಾಹಿತಿ ನೀಡಬೇಕಾದವರು ನೀಡಿರುವುದಿಲ್ಲ. ದುರದೃಷ್ಟವೆಂದರೆ, ಎಷ್ಟೋ ಸಲ, ಅಲೋಪಥಿ ಔಷಧಗಳೇ ಮರಣದ ಪ್ರಮುಖ ಕಾರಣವಾಗಿರುತ್ತವೆ ಮತ್ತು ಸಾವಿಗೆ ದುಬಾರಿ ಬೆಲೆಯ ಪ್ರವೇಶದ್ವಾರವಾಗಿರುತ್ತದೆ. "Health care" ಅಥವಾ ಆರೋಗ್ಯ ರಕ್ಷಣೆಯೆಂಬ ಶಬ್ದವು, ಔಷಧಕ್ಷೇತ್ರ ಎಂಬುದು ಆರೋಗ್ಯಕ್ಕಾಗಿ ಇರುವುದೇ ಎಂಬ ಭ್ರಮೆಯನ್ನು ಮಾತ್ರ ಹುಟ್ಟಿಸಿದೆ. ಅದು “Disease care” ಅಂದರೆ "ಅನಾರೋಗ್ಯದ ರಕ್ಷಕ" ಆಗಿರುವುದೇ ಹೊರತು "ಆರೋಗ್ಯ ರಕ್ಷಕವಾಗಿ ಇಲ್ಲದ ಪರಿಸ್ಥಿತಿ ಬಹುತೇಕ ಸಂದರ್ಭಗಳಲ್ಲಿ ಸ್ಪಷ್ಟವಾಗುತ್ತದೆ ಎಂದು ಖ್ಯಾತ ವೈದ್ಯಚಿಂತಕನೊಬ್ಬ ಉಲ್ಲೇಖಿಸಿದ್ದಾನೆ. 1998ರ ಎಂಒಂ  ಅಧ್ಯಯನದ ಪ್ರಕಾರ, ಸರಾಸರಿ 1,06,000 ವೈದ್ಯರ ಪ್ರಿಸ್ಕ್ರಿಪ್ಶನ್‍ನ ಔಷಧಜನ್ಯ ಸಾವುಗಳು ಪ್ರತೀವರ್ಷ ಉಂಟಾಗುತ್ತದೆ. ಂಊಖಕಿ  ವರದಿಯ ಪ್ರಕಾರ ಅಲ್ಲಿ 1985ರಿಂದ 2004 ರ ಅವಧಿಯಲ್ಲಿ ನಡೆಸಲಾದ 3 ಮಿಲಿಯ ಶಸ್ತ್ರಚಿಕಿತ್ಸೆಗಳಲ್ಲಿ, 1,12,994 ಸರ್ಜರಿಗಳಲ್ಲಿ ಒಂದು ಸರ್ಜರಿಗಳನ್ನು ತಪ್ಪು ಜಾಗದಲ್ಲಿ ನಡೆಸಲಾಗಿದೆ (ಒಂದು ಅಂಗದ ಬದಲಿಗೆ ಮತ್ತೊಂದು ಅಂಗದಲ್ಲಿ).


2004 ರಲ್ಲಿ, ಅಲ್ಲಿನ ಸಮಿತಿಗೆ, ಇಂತಹ ತಪ್ಪು ಸರ್ಜರಿಗಳನ್ನು ತಡೆಗಟ್ಟುವ ಸಲುವಾಗಿ ಕ್ರಮಗಳನ್ನು ರಚಿಸಲು ಶಸ್ತ್ರಚಿಕಿತ್ಸಕರನ್ನು ಆಹ್ವಾನಿಸಲಾಯಿತು. ತಪ್ಪು ಜಾಗ, ತಪ್ಪು ವಿಧಾನ, ತಪ್ಪಾದ ವ್ಯಕ್ತಿಯ ಮೇಲೆ ಶಸ್ತ್ರಚಿಕಿತ್ಸೆ ತಡೆಯುವ ಬಗ್ಗೆ ಪ್ರಣಾಳಿಕೆ ತಯಾರಿಸಲು ಪ್ರಯತ್ನ ನಡೆಯಿತು. ಶಸ್ತ್ರಚಿಕಿತ್ಸೆಗೆ ಮೊದಲು ರೋಗಿಯ ದೇಹದಲ್ಲಿ ಶಸ್ತ್ರಚಿಕಿತ್ಸೆಯ ಭಾಗವನ್ನು ಸರಿಯಾಗಿ ಗುರುತುಹಾಕಬೇಕಾಗುತ್ತದೆ. ಇದರ ನ್ಯೂನತೆಯಿಂದ ಯಾವುದೋ ಅಂಗದ ಬದಲಿಗೆ, ಇನ್ಯಾವುದೋ ಅಂಗದ ಮೇಲೆ ಶಸ್ತ್ರಚಿಕಿತ್ಸೆ ನಡೆಸಿ, ರೋಗಿ ಜೀವನಪೂರ್ತಿ ನರಳುವಂತೆ ಆಗುತ್ತದೆ.ಪಿತ್ತಕೋಶದ ಕಲ್ಲಿಗೆ, ಹೆಲ್ತ್ ಇನ್ಸೂರೆನ್ಸ್ ಬಳಸಿ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಉಚಿತವಾಗಿ ಒಳಗಾದ ಸಾಫ್ಟ್‍ವೇರ್ ಉದ್ಯೋಗಿ ಯುವಕ, ಶಸ್ತ್ರಚಿಕಿತ್ಸಾ ನಂತರದ ಪಿತ್ತರಸದ ಸೋರುವಿಕೆ (bile Leakage) complication ಉಂಟಾಗಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ. ಮೂರು ಗಂಟೆಯ ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಬೆನ್ನುನೋವಿಗೆ ಶಾಶ್ವತ ಪರಿಹಾರ ಕಂಡುಕೋಳ್ಳುವುದಕ್ಕೆ ಹೋಗಿ, ಶಸ್ತ್ರವೈದ್ಯರು ಶಸ್ತ್ರಚಿಕಿತ್ಸೆಯ  ಸಂದರ್ಭದಲ್ಲಿ ರಕ್ತನಾಳವನ್ನು ಕತ್ತರಿಸಿದ್ದು ಗಮನಕ್ಕೆ ಬಾರದೇ ಆಂತರಿಕ ರಕ್ತಸ್ರಾವ ಉಂಟಾಗಿ ಶಾಶ್ವತವಾಗಿ ಇಹಲೋಕ ತ್ಯಜಿಸಿದಳು! 


ಇನ್ನೊಂದು ಘಟನೆ ಭಾರತದಲ್ಲಿ ನಡೆದದ್ದು ಅಲ್ಲ, ನ್ಯೂಯಾರ್ಕ್‍ನಲ್ಲಿ ನಡೆದದ್ದು. ವೈದ್ಯಜಗತ್ತು ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಯ ಕಡೆಯವರು ಗಮನಗಲ್ಲಿಡಬೇಕಾದ ವಿಚಾರ. 35 ವರ್ಷದ ಮಹಿಳೆ ಅಪೆಂಡಿಕ್ಸ್ ಆಪರೇಶನ್ ಮಾಡಿಸಿಕೊಳ್ಳಲು ಅಲ್ಲಿನ ಆಸ್ಪತ್ರೆಗೆ ದಾಖಲಾಗುತ್ತಾಳೆ. ಶಸ್ತ್ರಚಿಕಿತ್ಸೆಯ ನಂತರ, ಸುಗಮವಾಗಿ ಸುಧಾರಿಸುತ್ತಾಳೆ ಮತ್ತು ಆಸ್ಪತ್ರೆಯಿಂದ ವೈದ್ಯರು ಡಿಸ್‍ಚಾರ್ಚ್ ಮಾಡುತ್ತಾರೆ. ಶಸ್ತ್ರಚಿಕಿತ್ಸೆಯ ನಂತರದ 8 ನೇ ದಿನಕ್ಕೆ ಆಕೆ ಮನೆಗೆ ಹೋಗುತ್ತಾಳೆ. ಮರುದಿನವೇ ತನಗೆ ತೀವ್ರ ಹೊಟ್ಟೆನೋವು ಇದೆಯೆಂದು ತನ್ನ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಫೋನ್ ಮಾಡುತ್ತಾಳೆ. ವೈದ್ಯರು ಔಷಧಗಳನ್ನು ಸೂಚಿಸಿ, ಆತಂಕ ಬೇಡ ಎನ್ನುತ್ತಾರೆ. ಆದರೆ ನೋವು ಕಡಿಮೆ ಆಗದಿದ್ದಾಗ, ಇನ್ನೊಬ್ಬ ವೈದ್ಯರ ಬಳಿ ಹೋಗುತ್ತಾಳೆ. ಆ ವೈದ್ಯರು ತೀವ್ರವಾದ ಕರುಳಿನಡಚಣೆ ಆಗಿದೆಯೆಂದು, ಇನ್ನೊಂದು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿ, ತುರ್ತು ಸಂದರ್ಭವೆಂದು, ಶಸ್ತ್ರಚಿಕಿತ್ಸೆ ನಡೆಸುತ್ತಾರೆ. ಆಗ ಮೊದಲ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಆಕೆಯ ಹೊಟ್ಟೆಯಲ್ಲಿ ತೆಗೆಯದೇ ಬಾಕಿ ಉಳಿಸಿದ ಉಪಕರಣವೊಂದು (clamp) ಎರಡನೇ  ವೈದ್ಯರ ಗಮನಕ್ಕೆ ಬರುತ್ತದೆ.  ಕರುಳಿನ ಕೆಲವು ಭಾಗ ಆ ಉಪಕರಣದ ದೆಸೆಯಿಂದಾಗಿ ಸುರುಳಿಸುತ್ತಿಕೊಂಡಿದ್ದು, ಕರುಳಿನ ಆ ಭಾಗ ಕೊಳೆತುಹೋಗಿತ್ತು (ಗ್ಯಾಂಗ್ರೀನ್). ಈ ವೈದ್ಯರು ಆ ಕೊಳೆತಭಾಗವನ್ನು ಉಪಕರಣ ಸಮೇತ ತೆಗೆದು, ಆರೋಗ್ಯವಂತ ಕರುಳಿನ 2 ಭಾಗಗಳನ್ನು ಹೊಲಿಯುತ್ತಾರೆ. ಹೊಟ್ಟೆಯ ತೆರೆದ ಗಾಯಕ್ಕೂ ಹೊಲಿಗೆ ಹಾಕಿ ಶಸ್ತ್ರಚಿಕಿತ್ಸೆ ಮುಗಿಸುತ್ತಾರೆ. ಆದರೆ, ಶಸ್ತ್ರಚಿಕಿತ್ಸೆಯ ನಂತರ ಆ ಗಾಯ ಗುಣವಾಗುವುದೇ, ಇಲ್ಲ ಜ್ವರ ಕೂಡ ಬರುತ್ತದೆ. ವೈದ್ಯರು ಇದನ್ನು ಹೊಟ್ಟೆ ಒಳಪೊರೆಯ ಉರಿಯೂತ (peritonitis) ಎಂದು ಗುರುತಿಸಿ, ಚಿಕಿತ್ಸೆ ನೀಡುತ್ತಾರೆ. ಆದರೆ ಪವಾಡ ಉಂಟುಮಾಡಬಹುದಾದ ಯಾವ ಔಷಧಗಳೂ ಕೂಡ ಪ್ರಯೋಜನಕ್ಕೆ ಬರಲೇ ಇಲ್ಲ! ಎರಡನೇ ದಿನದಲ್ಲಿ ಆಕೆ ಸತ್ತು ಯಮಲೋಕ ಸೇರುತ್ತಾಳೆ. ಶವದ ಮರಣೋತ್ತರ ಪರೀಕ್ಷೆ ನಡೆಯುತ್ತದೆ. ವೈದ್ಯಕೀಯ ಅಧೀಕ್ಷಕರು ಅದನ್ನು "ಉದರಪೊರೆಯ ಉರಿಯೂತ (septic peritonitis) ಪರಕೀಯ ವಸ್ತುವಿನ ಕಾರಣದಿಂದ" ಎಂದು ದಾಖಲಿಸುತ್ತಾರೆ. ಎರಡನೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ಎರಡನೇಯ ವೈದ್ಯರು ಆಕೆಯ ಹೊಟ್ಟೆಯಲ್ಲಿ ಸರ್ಜಿಕಲ್ Gauge ಪ್ಯಾಡ್ ಒಂದನ್ನು ಉಳಿಸಿದ್ದರು! ಮೊದಲ ವೈದ್ಯರು ಬಿಟ್ಟ ಕ್ಲಾಂಪ್ ತೆಗೆಯುವ ಎರಡನೇಯ ವ್ಯದ್ಯರು ಇದೊಂದು ಎಡವಟ್ಟು ಮಾಡಿದ್ದರು, ತಮಗೆ ಅರಿವಿಲ್ಲದೆಯೇ!ಸರ್ಜರಿಯ ನಂತರ ಈ ರೀತಿ ದೆಹದ ಒಳಗೆ ಬಾಕಿಯಾದ ವಸ್ತುಗಳನ್ನು ಹೊತ್ತುಕೊಂಡು ವೈದ್ಯರ ಬಳಿಗೆ ಆ ರೋಗಿ ಮರಳಿಬರಲು ಕೆಲವು ಸಲ ಕೆಲವು ತಿಂಗಳುಗಳೇ ಹಿಡಿಯಬಹುದು. ಆ ವಸ್ತು ಸೂಕ್ಷ್ಮಾಣುಸೋಂಕಿಗೆ ತುತ್ತಾಗುವಂತೆ ಮಾಡಿ, ದೇಹದ ಯಾವುದಾದರೂ ಕಾರ್ಯಕ್ಕೆ ತೊ0ದರೆಯಾಗಿ ನೋವು ಕಾಣಿಸಿಕೊಂಡಾಗ ಮಾತ್ರ ರೋಗಿ ಜಾಗೃತನಾಗುತ್ತಾನೆ. ಹೆಚ್ಚಾಗಿ X-Ray ಮಾಡಿದಾಗ ಏನೋ ಇದೆಯೆಂದು ಗಮನಕ್ಕೆ ಬರುತ್ತದೆ. ಸರ್ಜನ್ ಬಳಿ ಬಂದರೆ ಅವರು ಆಸ್ಪತ್ರೆಯ ಸಹಾಯಕ ದಾದಿಯರನ್ನು ದೂರುತ್ತಾರೆ. ಶಸ್ತ್ರಚಿಕಿತ್ಸೆಯ ನಂತರ ದಾದಿಯರು ಉಪಕರಣ ಮತ್ತು ಪ್ಯಾಡ್‍ಗಳ ಸಂಖ್ಯೆಯನ್ನು ಎಣಿಸುವಲ್ಲಿ ತಪ್ಪೆಸಗಿದ್ದಾರೆಂದು ನುಣುಚಿಕೊಳ್ಳುತ್ತಾರೆ. ದಾದಿಯರು ತಂಡದ ಮುಖ್ಯಸ್ಥರಾದ ವೈದ್ಯರು ಸರಿಯಾಗಿ ನಿರ್ದೇಶನ ನೀಡಿಲ್ಲ ಎಂದು ಆರೊಪಿಸುತ್ತಾರೆ! ಆಸ್ಪತ್ರೆಗಳು, ಗಾಯದ ಮೇಲೆ ಉಪ್ಪು ಹಾಕಿದಂತೆ, ರೋಗಿಯ ನೋವಿಗೆ ಮತ್ತೊಂದು ಸೇರ್ಪಡೆಯೆಂಬಂತೆ ರೋಗಿಯೇ ಏನಾದರೂ ತಪ್ಪೆಸಗಿದಂತೆ ಆಡುತ್ತಾರೆ!


ಇನ್ನೊಂದು ಘಟನೆ ಸ್ವಾರಸ್ಯಕರವಾಗಿದೆ. 2002ರಲ್ಲಿ, ವಿಮಾನ ನಿಲ್ದಾಣದಲ್ಲಿ ಲೋಹಪತ್ತೆ ಉಪಕರಣವೊಂದು ಮಹಿಳೆಯೊಬ್ಬಳನ್ನು ವಿಮಾನದ ಪ್ರವೇಶಕ್ಕೆ ತಡೆಯೊಡ್ಡುತ್ತದೆ. ಆಕೆಯ ದೇಹದಲ್ಲಿ ಲೊಹ ಇದೆಯೆಂಬ ಸೂಚನೆಯನ್ನು ಉಪಕರಣ ನೀಡುತ್ತದೆ. ಲೋಹದ ಉದ್ದನೆಯ ವಸ್ತುವೊಂದು ಆಕೆಯ ಹೊಟ್ಟೆಯೊಳಗೆ ಇದೆಯೆಂದು ಪತ್ತೆಯಾಗುತ್ತದೆ. ಅದು ಶಸ್ತ್ರಚಿಕಿತ್ಸೆಯ ಸಂದರ್ಭ ಬಾಕಿಯಾದದ್ದು! 


ಫಿಲಿಡೆಲ್ಫಿಯಾದ Paul Lauricella ಎಂಬ ಲಾಯರ್, ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ಮೂರುವಾರ ಉಳಿದುಕೊಡ, 15 ಇಂಚು ಗಾತ್ರದ ಸರ್ಜಿಕಲ್ ಟವೆಲ್ ಕೇಸ್‍ನಲ್ಲಿ, ಫ್ರಾಂಕ್‍ಫರ್ಡ್ ಹಾಸ್ಪಿಟಲ್ ವಿರುದ್ದ ದಾವೆ ಹೂಡಿ 2.5 ಮಿಲಿಯ ಡಾಲರ್ ಪರಿಹಾರ ತೆಗೆಸಿಕೊಡುತ್ತಾರೆ.


Gauze ಪ್ಯಾಡ್‍ಗಳು ಸಾಮಾನ್ಯವಾಗಿ ಉಳಿದುಕೊಳ್ಳುವ ಸಾಧ್ಯತೆಯಿದ್ದು, ಅವುಗಳಿಗೆ ಘಿ-ಖಚಿಥಿ ನಲ್ಲಿ ಗುರುತುಹಿಡಿಯಲು ಸಾಧ್ಯವಾಗುವ ವಿಶೇಷ ಪಟ್ಟಿಗಳನ್ನು ಅಳವಡಿಸುವ ಸೂಚನೆಯನ್ನು 1950 ರ ನಂತರ ಆಸ್ಪತ್ರೆಗಳಿಗೆ ತರಲಾಗುತ್ತದೆ. ಪ್ಯಾಡ್‍ಗಳ ಸಂಖ್ಯೆಯಲ್ಲಿ ಶಸ್ತ್ರಕ್ರಿಯೆ ನಂತರ ಹೊಂದಾಣಿಕೆ ಬಾರದಿದ್ದಾಗ ಸರ್ಜನ್ ವೈದ್ಯರು ಇಂತಹ X-Ray ಗಳ ಸಹಾಯದಿಂದ ಇದನ್ನು ಮರುಪರಿಶೀಲನೆಗೆ ಅವಕಾಶವಾಗುತ್ತದೆ. ಹೀಗಿದ್ದರೂ ಅಲ್ಲಿ ವೈದ್ಯ ಸಂಶೋಧಕ ಚಾನ್ಲಿಯು ಯೂನ್ ಪ್ರಕಾರ, ವರ್ಷಕ್ಕೆ 2700 ಇಂತಹ ಪ್ರಕರಣಗಳು ಪತ್ತೆಯಾಗುತ್ತವೆ. ತಜ್ಞರು ಇಂತಹ ಪ್ರಕರಣಗಳನ್ನು ದಶಕಗಳಿಂದ ದೂರವಿಡಲು ಪ್ರಯತ್ನಿಸುತ್ತಿದ್ದರೂ, ನಿಯಂತ್ರಕರು ಮಾತ್ರ ಇವುಗಳನ್ನು ಗುರುತಿಸಲು ನಿಧಾನಗತಿಯಲ್ಲಿದ್ದಾರೆ.


ಸ್ಪಾಂಜ್ ನಂತಹ ಉಪಕರಣಗಳು ಬಾಕಿಯಾಗಿ ಉಂಟಾದಂತಹ ಸಾವುಗಳನ್ನು ಬೆನ್ನುಹತ್ತುವುದು ಕೂಡಾ ಕಷ್ಟವಾದ ಸಂಗತಿಯೇ. ಒಂದು ವೇಳೆ ಶಸ್ತ್ರಕ್ರಿಯೆಗೆ ಒಳಗಾದ ರೋಗಿ ಸತ್ತರೆ, ಅದೂ ಕೂಡಾ ಮನೆಯಲ್ಲೇ ಸತ್ತರೆ, ಆಗ ಮರಣೋತ್ತರ ಶವಪರೀಕ್ಷೆಯ ಸಂದರ್ಭ ಬರುವುದಿಲ್ಲ. ಏಕೆಂದರೆ, ಸಾವಿಗೆ ರೋಗದ ಗಂಭೀರತೆಯನ್ನೇ ಕಾರಣವನ್ನಾಗಿ ಕಾಣಿಸಲಾಗುತ್ತದೆ.

       

ಅಲ್ಲಿನ ರೋಗಿಸುರಕ್ಷತೆಯ ರಾಷ್ಟ್ರೀಯ ಕೇಂದ್ರದ ಮುಖ್ಯಸ್ಥರಾದ James Bagian ಎಂಬುವರು-"ಯಾರಾದರೂ ಯಾರನ್ನಾದರೂ ಕೊಲ್ಲುವವರೆಗೆ ನಿಯಂತ್ರಕರು ಕಾಯುತ್ತಿದ್ದಾರೆ" ಎಂದಿದ್ದಾರೆ. ಎರಡು ರೀತಿಯಲ್ಲಿ, ಅಂದರೆ ಶಸ್ತ್ರಚಿಕಿತ್ಸಾ ಪೂರ್ವ ಮತ್ತು ಶಸ್ತ್ರಚಿಕಿತ್ಸಾ ನಂತರದ ಚೆಕ್‍ಲಿಸ್ಟ್ ವಿಧಾನಗಳನ್ನು ಅನುಸರಿಸುವುದರ ಮೂಲಕ ಇಂತಹ ದುರ್ಘಟನೆಗಳನ್ನು ತಪ್ಪಿಸಬಹುದು ಎಂಬುದನ್ನು ಸೂಚಿಸಲಾಗಿದೆ. 2008 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ, ಶಸ್ತ್ರಚಿಕಿತ್ಸಾ ಸುರಕ್ಷತೆಗೆ ಈ 19 ಅಂಶಗಳ ಚೆಕ್‍ಲಿಸ್ಟನ್ನು ಜಾಗತಿಕವಾಗಿ ಮಾನ್ಯ ಮಾಡಿದೆ. 2009, ಜನವರಿ 14 ರ ನ್ಯೂಯಾರ್ಕ್ ಟೈಮ್ಸ್ ವರದಿಯು ಇದರ ಪ್ರಾಮುಖ್ಯತೆಯನ್ನು ವರದಿ ಮಾಡಿದೆ. ಎರಿಕ್ ನಾಗೋರ್ನಿ ಬರೆದ ಲೇಖನದಲ್ಲಿ "8 ಆಸ್ಪತ್ರೆಗಳ ಶಸ್ತ್ರಚಿಕಿತ್ಸಾ ತಂಡಗಳು ಈ ಚೆಕ್‍ಲಿಸ್ಟ್ ಅಳವಡಿಸಿಕೊಂಡ ನಂತರ, ಶಸ್ತ್ರಚಿಕಿತ್ಸಾ ನಂತರದ ಸಾವುಗಳು 40% ಕಡಿಮೆ ಆಗಿವೆ ಹಾಗೂ ಶಸ್ತ್ರಚಿಕಿತ್ಸಾ ನಂತರದ ಹಾನಿಗಳು 1/3 ರಷ್ಟು ಕಡಿಮೆ ಆಗಿವೆ". ಆ ಚೆಕ್‍ಲಿಸ್ಟ್, ನರ್ಸಿಂಗ್ ಸಿಬ್ಬಂದಿ ಅಗತ್ಯ ಉಪಕರಣಗಳನ್ನು ಸಜ್ಜುಗೊಳಿಸುವುದರಿಂದ ತೊಡಗಿ, ಅವುಗಳನ್ನು ಸೂಕ್ಷ್ಮಾಣುರಹಿತ ಮಾಡುವುದನ್ನು ಒಳಗೊಂಡಿದೆ. ರೋಗಿಗೆ ಆ್ಯಂಟಿಬಯೋಟಿಕ್ ನೀಡುವುದು, ರಕ್ತಸ್ರಾವ ಆದಾಗ ಬೇಕಾದ ರಕ್ತದ ಅವಶ್ಯಕತೆ, ರೋಗಿಯ ಬಿ.ಪಿ, ಆಮ್ಲಜನಕ ಪರೀಕ್ಷಕ ಉಪಕರಣಗಳು, ಮೆಡಿಕಲ್ ಇಮೇಜಿಂಗ್, X-Ray ಇತ್ಯಾದಿಗಳ ಲಭ್ಯತೆಯ ದೃಢೀಕರಣ ಸೇರಿದೆ. ರೋಗಿಯನ್ನು ಗುರುತಿಸಿ ಖಚಿತಪಡಿಸಿಕೊಳ್ಳುವ ತಂಡದ ಜವಾಬ್ದಾರಿ ಕೂಡ ಸೇರಿದೆ. ನಂತರ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ವಿಧಾನದ ಕುರಿತು ಚರ್ಚಿಸಿ, ಕೊನೆಗೆ ಉಪಕರಣ ಒಳಗೆ ಬಾಕಿಯಿಲ್ಲವೆಂದು ಖಚಿತಪಡಿಸಿಕೊಳ್ಳುವ ಪ್ರಕಿಯೆ ಕೂಡ ಇದರ ಭಾಗವಾಗಿದೆ. ಆದರೆ, ಇದನ್ನು ಅಳವಡಿಸಿಕೊಳ್ಳುವಲ್ಲಿ ಕೂಡಾ ಎಡವಟ್ಟು ಮಾಡಿದರೆ ಏನೂ ಮಾಡುವಂತಿಲ್ಲ. ಅಳವಡಿಸಿದ ನಂತರವೂ, ಶಸ್ತ್ರಚಿಕಿತ್ಸಾ ನಂತರದ ದುರ್ಘಟನೆಗಳು ಕಡಿಮೆಯಾಗಿವೆಯೆಂದು ವರದಿಗಳು ಹೇಳುತ್ತವೆಯೇ ಹೊರತು, ಸೊನ್ನೆಯಾಗಿಲ್ಲ.


ಅಮೆರಿಕದಂತಹ ಅಮೆರಿಕದಲ್ಲಿ ಪರಿಸ್ಥಿತಿ ಹೀಗಿರಬೇಕಾದರೆ, ಇಂತಹ ಜಟಿಲತೆಗಳು ಇರಬೇಕಾದರೆ ಇತರ ಕಡೆಗಳಲ್ಲಿ ಇದರ ಬಗ್ಗೆ ಹೇಳುವುದೇನಿದೆ? ಮತ್ತೂ ಹೆಚ್ಚಿರಬಹುದು! ಕಡಿಮೆ ಇರಬಹುದು! ಬೂದಿಮುಚ್ಚಿದ ಕೆಂಡದಂತೆ ಕಾಣದೇ ಇರಬಹುದು! ಹೊಗೆಯಾಡುತ್ತಿರಬಹುದು...... ಸತ್ತವ ಮಸಣ ಸೇರಿದ. ಉಳಿದವರು ತಿಥಿ ಊಟ ಉಂಡರು!


ಶಸ್ತ್ರವೈದ್ಯರು ಆಪ್ತರೆಂದೋ, ಪರಿಚಿತರೆಂದೋ, ಪರಿಚಯದವರು ಸೂಚಿಸಿದರೆಂದೋ, ಯಾವುದೋ ಒಂದು ಸಂದರ್ಭದಲ್ಲಿ ಅವರಿಂದ ನಾವು ಉಪಕೃತರೆಂದೋ, ಶಸ್ತ್ರವೈದ್ಯರನ್ನು ಆಯ್ಕೆಮಾಡಬೇಡಿ. ಅವರ ಅನುಭವ, ಪ್ರಾವೀಣ್ಯತೆ, ನಿಮಗೆ ಮಾಡಬೇಕಾದ  ಶಸ್ತ್ರಚಿಕಿತ್ಸೆಗಳನ್ನು ಅವರು ಎಷ್ಟು ಮಂದಿಗೆ ಯಶಸ್ವಿಯಾಗಿ ಮಾಡಿದ್ದಾರೆ ಎಂಬುದರ ಮೇಲಿಂದ ಶಸ್ತ್ರವೈದ್ಯರನ್ನು ನಿರ್ಧರಿಸಿ. ನುರಿತ ನರ್ಸಿಂಗ್ ಸಿಬ್ಬಂದಿ, ಸುಸಜ್ಜಿತ ಆಪರೇಷನ್ ಥಿಯೇಟರ್, ಅನೆಸ್ತೇಸಿಯಾ ವೈದ್ಯರ ನಿರಂತರ ಉಪಸ್ಥಿತಿ ಇರುವ ತುರ್ತು ಚಿಕಿತ್ಸಾ ಘಟಕ ಎಲ್ಲವೂ ಪ್ರಾಮುಖ್ಯ. ಶಸ್ತ್ರಚಿಕಿತ್ಸೆಯ ಅಗತ್ಯತೆಯ ಬಗ್ಗೆ ಅದೇ ಮಟ್ಟದ ಶಿಕ್ಷಣಪಡೆದ ಎರಡನೆಯ ಹಾಗೂ ಮೂರನೆಯ ವೈದ್ಯರ ಸಲಹೆ,ಅಭಿಪ್ರಾಯ ಕೂಡಾ ಪಡೆಯಿರಿ. ಒಮ್ಮೆ ವೈದ್ಯಪದವಿ ಮುಗಿಸಿದ ನಂತರ "ಡಿಗ್ರಿ" ಮತ್ತು "ಬೋರ್ಡು"ಗಳು ಆತ "ಜಸ್ಟ್‌ ಪಾಸ್" ಡಾಕ್ಟರ್, "ಡಿಸ್ಟಿಂಕ್ಷನ್" ಪಡೆದ ಡಾಕ್ಟರ್ ಎಂಬುದರ ಬಗ್ಗೆ ಮಾತನಾಡಲಾರವು. ಶಸ್ತ್ರವೈದ್ಯನ ಕೌಶಲ್ಯದ ಬಗೆಗೂ ಏನೂ ಹೇಳಲಾರವು!


- ಡಾ|| ರಾಘವೇಂದ್ರ ಪ್ರಸಾದ್ ಬಂಗಾರಡ್ಕ

ಬಿ.ಎ.ಎಂ.ಎಸ್. ಎಂ.ಎಸ್. (ಆಯು)

ಆಯುರ್ವೇದ ತಜ್ಞವೈದ್ಯ ಹಾಗೂ ಆಡಳಿತ ನಿರ್ದೇಶಕ,

ಪ್ರಸಾದಿನೀ ಆಯುರ್ನೀಕೇತನ ಆಯುರ್ವೇದ ಆಸ್ಪತ್ರೆ, 

ಪಾದೆ, ನರಿಮೊಗರು, ಪುತ್ತೂರು.ದ.ಕ.

mob: 9740545979


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top