ಪಣಜಿ: ಗೋವಾದಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡಿಗರ ಮಕ್ಕಳು ಉತ್ತಮ ಸಾಧನೆಗೈದು ಗೋವಾ ಮತ್ತು ಕರ್ನಾಟಕಕ್ಕೆ ಕೀರ್ತಿ ತಂದುಕೊಟ್ಟ ಅದೆಷ್ಟೋ ಉದಾಹರಣೆಗಳಿವೆ. ಇಂತಹದ್ದೇ ಸಾಲಿಗೆ ಮಂಗಳೇಶ ಬಸವರಾಜ್ ಬನ್ನಿಕೊಪ್ಪ ಈತನ ಸಾಧನೆ ಕೂಡ ಸೇರುತ್ತದೆ. ಈತನು ಯುನೈಟೆಡ್ ಸ್ಪೋರ್ಟ್ಶ್ ಕ್ಲಬ್ ವತಿಯಿಂದ ಸೆರಾವಲಿಮ್‍ನಲ್ಲಿ ಆಯೋಜಿಸಿದ್ದ ಅಂಡರ್-16 ಫುಟ್‍ಬಾಲ್ ಪಂದ್ಯಾವಳಿಯಲ್ಲಿ ಫೈನಲ್‍ಗೆ ತಲುಪಿದ್ದಾನೆ.
ಮಂಗಳೇಶ ಈತನ ತಂದೆ ಬಸವರಾಜ ಬನ್ನಿಕೊಪ್ಪ ಇವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೊನಸಾಗರ ಗ್ರಾಮದವರು. ಇವರು ಉದ್ಯೋಗದ ನಿಮಿತ್ತ ಗೋವಾಕ್ಕೆ ಬಂದು ಮಡಗಾಂವನಲ್ಲಿ ನೆಲೆಸಿದ್ದು, ಇವರ ಮಗ ಮಂಗಳೇಶ್ ಈತನು ಇನ್‍ಫಂಟ್ ಜೀಸಸ್ ಹೈಸ್ಕೂಲ್ ಕೋಲ್ವಾದಲ್ಲಿ 10 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈ ಹಿಂದಿನಿಂದಲೂ ಫುಟ್‍ಬಾಲ್ ಮತ್ತು ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ಈತನು ಅಂಡರ್-16 ಫುಟ್‍ಬಾಲ್ ಪಂದ್ಯಾವಳಿಯಲ್ಲಿ ಫೈನಲ್‍ಗೆ ತಲುಪಿದ್ದಾನೆ. ಈತನ ಸಾಧನೆಗೆ ಗೋವಾದ ವಿವಿಧ ಕನ್ನಡ ಸಂಘಟನೆಗಳು ಅಭಿನಂದಿಸಿವೆ. ಕರ್ನಾಟಕದಿಂದ ಹೊರನಾಡು ಗೋವಾಕ್ಕೆ ಬಂದು ಇಲ್ಲಿ ವ್ಯಾಸಂಗ ಮಾಡುತ್ತ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆಗೈಯ್ಯುತ್ತಿರುವುದು ಶ್ಲಾಘನೀಯ ಸಗತಿಯಾಗಿದೆ.
ಮಂಗಳೇಶನ ತಂದೆ ಬಸವರಾಜ್ ಬನ್ನಿಕೊಪ್ಪ ರವರು ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಗೋವಾದ ಸಾಲಸೇಟ್ ತಾಲೂಕಾ ಘಟಕದ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ