ಮಂಗಳೂರು: ''ವಿಶ್ವದ ರಂಗಭೂಮಿ ಅದ್ಭುತವಾಗಿ ಬೆಳೆದಿದೆ. ಅಂತೆಯೇ ಯಕ್ಷಗಾನ ರಂಗಭೂಮಿಯೂ ತನ್ನನ್ನು ತಾನು ತೆರೆದುಕೊಂಡು ವಿಶಾಲ ಭಾವದಿಂದ ವಿಕಾಸಗೊಳ್ಳಬೇಕಾಗಿದೆ. ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ ಹೀಗೆಲ್ಲಾ ಎಗ್ಗೆಗಳು ಆರಂಭವಾಗಿದೆ. ಆ ದೃಷ್ಟಿಯಲ್ಲಿ ರಜತ ವರ್ಷದ ಹೊಸ್ತಿಲಲ್ಲಿರುವ ಸರಯೂ ಮಕ್ಕಳ ಮೇಳವೂ ಯೋಚಿಸಬೇಕು. ಪ್ರಬುದ್ಧ ಕಾರ್ಯಕ್ರಮಗಳ ಮೂಲಕ ಬೆಳೆಯಬೇಕು. ಹಿರಿಯರ ಮಾರ್ಗದರ್ಶನ, ಕಿರಿಯರ ಬಾಗೀದಾರಿಕೆಯಿಂದ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತಲುಪಿ ಸರಯೂ ಮನೆ ಮಾತಾಗಲಿ" ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವಿಮರ್ಶಕ ಡಾ|| ಎಂ.ಪ್ರಭಾಕರ ಜೋಷಿ ಹೇಳಿದರು. ಅವರು ಸರಯೂ ಸಪ್ತಾಹದ ನಾಲ್ಕನೇ ದಿನದ ಸನ್ಮಾನದ ಕದ್ರಿಯ ಸಭಾವೇದಿಕೆಯಲ್ಲಿ ಮಾತನಾಡಿದರು.
ಹಿರಿಯ ಯಕ್ಷಗಾನ ಪ್ರೋತ್ಸಾಹಕ ಹಾಗೂ ತೆಂಕು-ಬಡಗಿನ ಸಮನ್ವಯಕಾರ ಕೆರೆಮನೆ ಶಿವಾನಂದ ಹೆಗಡೆ, ಹಾಗೂ ಯಕ್ಷಸಂಘಟಕ ಪಣಂಬೂರು ಮಧುಕರ ಭಾಗವತರನ್ನು ಸನ್ಮಾನಿಸಲಾಯಿತು.
ಹಿರಿಯ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್, ಆಕಾಶವಾಣಿಯ ಕಾರ್ಯನಿರ್ವಾಹಕ ಸೂರ್ಯನಾರಾಯಣ ಭಟ್,ಹಾಸ್ಯಗಾರ ಸೀತಾರಾಂ ಕಟೀಲು, ವಸಂತ ಪಂಜ, ಪ್ರದೀಪಕುಮಾರ್ ಗಟ್ಟಿ, ವೃಷಭ ಶೆಟ್ಟಿ, ನಿಹಾಲ್, ಅದ್ವಿತ್, ದೃಶಾಲ್, ಸಂಸ್ಥೆಯ ಅಧ್ಯಕ್ಷ ಮಧುಸೂದನ ಅಲೆವೂರಾಯ ಉಪಸ್ಥಿತರಿದ್ದರು. ಸುಧಾಕರ ರಾವ್ ಪೇಜಾವರರು ನಿರ್ವಹಿಸಿ, ಅಲೆವೂರಾಯರು ಧನ್ಯವಾದವಿತ್ತರು. ಬಳಿಕ ರತಿ ಕಲ್ಯಾಣ ಬಯಲಾಟ ಜರಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ