ಉಡುಪಿ: ನೈಋತ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಬಿಜೆಪಿ ಕಾರ್ಯಕರ್ತರ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ಪರವಾಗಿ ಮತದಾರರ ಒಲವು ಎಲ್ಲೆಡೆ ಕಂಡು ಬರುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಉಡುಪಿಯಲ್ಲಿ ರಘುಪತಿ ಭಟ್ಟರ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರಾದ್ಯಂತ ಗುಪ್ತಗಾಮಿನಿಯಾಗಿ ರಘುಪತಿ ಭಟ್ ಪರವಾಗಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಕಾರ್ಯಕರ್ತರನ್ನು ಮತದಾರರನ್ನು ಸಂಪರ್ಕಿಸಿದಾಗ ಪ್ರತಿಯೊಬ್ಬರೂ 'ನೀವು ಹೇಳಬೇಕು ಅಂತ ಇಲ್ಲ, ನಮ್ಮ ವೋಟು ರಘುಪತಿ ಭಟ್ಟರಿಗೇ. ಈ ಬಾರಿ ಅವರು ಗೆಲ್ಲಲೇಬೇಕು' ಎಂದು ಸ್ವತಃ ಮತದಾರರೇ ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ನುಡಿದರು.
ರಘುಪತಿ ಬಟ್ ಅವರು ಬಿಜೆಪಿಗೆ ಅದೃಷ್ಟದ ಮನುಷ್ಯ. ಅವರು ಗೆದ್ದಾಗೆಲ್ಲ ಪಕ್ಷಕ್ಕೆ ಒಳಿತೇ ಆಗಿದೆ. ಭಟ್ಟರ ಗೆಲುವು ಭಟ್ಟಂಗಿಗಳ ಕೈಯಿಂದ ರಾಜ್ಯ ಬಿಜೆಪಿಯನ್ನು ರಕ್ಷಿಸಲು ನೆರವಾಗಲಿದೆ ಎಂದು ಈಶ್ವರಪ್ಪ ಪ್ರತಿಪಾದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ