ಹೂಡಿಕೆ ಬ್ಯಾಂಕಿಂಗ್: ಕಾರ್ಯ ಮತ್ತು ಅವಕಾಶಗಳು

Upayuktha
0

ತೆಂಕನಿಡಿಯೂರು: ಹೂಡಿಕೆ ಬ್ಯಾಂಕಿಂಗ್ ಸರಕಾರ ನಿಗಮ ಮತ್ತು ಸಂಸ್ಥೆಗಳಿಗೆ ಅಗತ್ಯವಿರುವ ಬಂಡವಾಳ ಸಂಗ್ರಹಣೆ ವಿಲೀನಗಳು ಮತ್ತು ಸ್ವಾಧೀನಗಳ ಸೇವೆಯನ್ನ ಒದಗಿಸುವ ಕಾರ್ಯವನ್ನು ವಹಿಸುತ್ತದೆ, ವಿದ್ಯಾರ್ಥಿಗಳು ಸದರಿಇನ್ವೆಸ್ಟ್ಮೆಂಟ್ ಬ್ಯಾಂಕಿನ ಪ್ರಕ್ರಿಯೆ ಮತ್ತು ಉದ್ಯೋಗಾವಕಾಶಗಳನ್ನು ಅರಿತು, ಪಡೆದುಕೊಳ್ಳುವ ಅಗತ್ಯತೆ ಇದೆ ಎಂದು ಶ್ರೀ ಮಾಧವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಅಂಡ್ ಮ್ಯಾನೇಜ್ಮೆಂಟ್ ಭಂಟಕಲ್ಲು ಉಡುಪಿಯ ಪ್ರೊಫೆಸರ್‌ಅಭಯ್ ಕುಮಾರ್ ನುಡಿದರು.


ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗ, ಐ.ಕ್ಯೂ.ಎ.ಸಿ., ಹಾಗೂ ಪ್ಲೇಸ್ಮೆಂಟ್ ಸಹಯೋಗದೊಂದಿಗೆ ಆಯೋಜಿದ ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ಮತ್ತು ಉದ್ಯೋಗಾವಕಾಶ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.


ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಸುರೇಶ್ ರೈ ಕೆ. ಅಧ್ಯಕ್ಷತೆ ವಹಿಸಿದ್ದರು. ಸದರಿ ಕಾರ್ಯಗಾರದಲ್ಲಿ ನಿರ್ದೇಶಕರಾದ ಸೂರಜ್ ವಿದ್ಯಾರ್ಥಿಗಳಿಗೆ ತರಬೇತಿಯೊಂದಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.


ವ್ಯವಹಾರ ಅಧ್ಯಯನ ವಿಭಾಗ ಮುಖ್ಯಸ್ಥ ಕ್ಫಿ. ರಘು ನಾಯ್ಕ, ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಮತ್ತು ಭರವಶ ಕೋಶ ಸಂಚಾಲಕಿ ಡಾ ಮೇವಿ ಮಿರಾಂದ, ಪ್ಲೇಸ್ಮೆಂಟ್ ಸಂಚಾಲಕರಾದ ದಿನೇಶ್ ಎಂ, ಮತ್ತು ಉಮೇಶ್ ಪೈ,  ಡಾ. ಗೀತಾ ಎನ್., ಉಪನ್ಯಾಸಕರಾದ ಸ್ಮಿತಾ ಹೆಗ್ಡೆ, ನಮಿತಾ ಹೆಗ್ಡೆ,  ಧನ್ಯ, ಆರತಿ, ಮುಂತಾದವರು ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top