ತೆಂಕನಿಡಿಯೂರು: ಕ್ಯಾಂಪಸ್ ಆಹಾರಮೇಳ ಆಯೋಜನೆಯಿಂದ ವಿದ್ಯಾರ್ಥಿಗಳಿಗೆ ವಾಣಿಜ್ಯ ಚಟುವಟಿಕೆಗಳ ಪೂರ್ವತಯಾರಿ, ಯೋಜನೆ, ಅನುಷ್ಠಾನ, ಹಣಕಾಸು, ಮಾರುಕಟ್ಟೆ, ಗ್ರಾಹಕರ ಸ್ಪಂದನೆಯ ವಿಧಗಳು ಇತ್ಯಾದಿ ಅರಿವಿನಲ್ಯಾಬ್ ದೊರಕಿದಂತಾಗುತ್ತದೆ. ಅಲ್ಲದೆ ಬಿಸಿನೆಸ್ ಇನ್ಕ್ಯುಬೇಷನ್ ಅನುಭವ ದೊರಕಿದಂತಾಗುತ್ತದೆ ಎಂದು ಪ್ರಾಂಶುಪಾಲ ಪ್ರೊ. ಸುರೇಶ್‌ರೈ ಕೆ. ನುಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗ ಹಾಗೂ ಐಕ್ಯೂಎಸಿ ಸಹಕಾರದಲ್ಲಿ ಆಯೋಜಿಸಿದ ಕ್ಯಾಂಪಸ್ ಆಹಾರಮೇಳ ಉದ್ಘಾಟಿಸಿ ಮಾತನಾಡಿದರು.
ಕ್ಯಾಂಪಸ್ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು 22 ಆಹಾರ ಮಳಿಗೆಗಳನ್ನು ತೆರೆದು, ಸಸ್ಯಹಾರಿ ತಿಂಡಿ ತಿನಿಸುಗಳು, ಮೆಹಂದಿ ಆರ್ಟ್ಸ್, ಗೇಮ್ಸ್, ತಂಪು ಪಾನೀಯ ಮಾರಾಟದಿಂದ ಅಂದಾಜು 75,000 ರೂಪಾಯಿ ವಹಿವಾಟು ನಡೆಸಿದರು. ಕಾರ್ಯಕ್ರಮದಲ್ಲಿ ಸಂಚಾಲಕಿ ಡಾ. ಮೇವಿ ಮಿರಾಂದ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಬಿಂದು ಟಿ., ವ್ಯವಹಾರ ಅಧ್ಯಯನ ವಿಭಾಗ ಮುಖ್ಯಸ್ಥ ಡಾ. ರಘು ನಾಯ್ಕ, ಗ್ರಂಥಪಾಲಕ ಕೃಷ್ಣ ಸಾಸ್ತಾನ, ಪ್ಲೇಸ್ಮೆಂಟ್ ಸಂಚಾಲಕರಾದ ದಿನೇಶ್ ಎಂ. ಮತ್ತು ಉಮೇಶ್ ಪೈ, ಡಾ. ಗೀತಾ ಎನ್., ಕನ್ನಡ ವಿಭಾಗದ ರತ್ನಮಾಲ, ಡಾ. ಆಶಾ ಸಿ. ಇಂಗಳಗಿ. ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಸುಪ್ರೀತಾ, ಉಪನ್ಯಾಸಕರಾದ ಸ್ಮಿತಾ ಹೆಗ್ಡೆ, ನಮಿತಾ ಹೆಗ್ಡೆ, ಧನ್ಯ, ವಿನಯಶ್ರೀ, ಆರತಿ, ಅರವಿಂದ ಭಟ್ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ