ಉಜಿರೆ: ಹೆಣ್ಣು ಮಕ್ಕಳನ್ನು ಪೋಷಕರು ಬೆಳೆಸುವಾಗ ಸಾಮಾನ್ಯವಾಗಿ ಮದುವೆಯ ಬಗ್ಗೆ ಯೋಚನೆ ಮಾಡುತ್ತಾರೆ ವಿದ್ಯಾಭ್ಯಾಸ ನೀಡುತ್ತಾರೆ, ಆದರೆ ಉದ್ಯೋಗದ ಬಗ್ಗೆ ಯೋಚಿಸುವುದು ಕಡಿಮೆ. ಇಂದಿನ ಹೆಣ್ಣು ಮಕ್ಕಳಿಗೆ ವಿದ್ಯೆಯ ಜೊತೆಗೆ ಉದ್ಯೋಗ ಬೇಕು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ‍್ಯ ಬಹು ಮುಖ್ಯವಾಗುತ್ತದೆ. ನಮ್ಮ ಕೈಯಲ್ಲಿ ನಮ್ಮ ದುಡ್ಡು ಇರಬೇಕು ನಮ್ಮ ಮತ್ತು ಮಕ್ಕಳ ಬೇಕು -ಬೇಡಗಳಿಗೆ, ಸ್ಪಂದಿಸಲು ಅನುಕೂಲವಾಗುತ್ತದೆ ಎಂದು ಬೆಂಗಳೂರು ಕ್ಷೇಮವನದ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಮತಿ ಶ್ರದ್ಧಾ ಅಮಿತ ಅಭಿಪ್ರಾಯಪಟ್ಟರು.
ಅವರು ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 6 ದಿನ ಗಳ ಕಾಲ ನಡೆದ ಮದುಮಗಳ ಶೃಂಗಾರ -ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಶುಭ ಹಾರೈಸಿದರು.
ಇನ್ನೂ ಮುಖ್ಯವಾಗಿ ನಮ್ಮ ಮನೋಬಲ ಏನು, ನಮ್ಮ ಒಳಗೆ ಏನು ಆಸೆ ಇದೆ. ನಮ್ಮಲ್ಲಿ ಏನು ಪ್ರತಿಭೆ ಇದೆ. ನಮ್ಮ ವ್ಯಕ್ತಿತ್ವ ಏನು ಎಂಬುದನ್ನು ತಿಳಿದಿರಬೇಕು. ಪದವಿ ಓದಿದ ನಂತರ ಕೂಡ ಮುಂದೆ ಏನು ಮಾಡಬೇಕು ಎಂಬುದನ್ನು ತಿಳಿದಿರಬೇಕು. ನಮ್ಮಲ್ಲಿ ಏನು ಕೌಶಲ್ಯ ಇದೆ ಎಂಬುದು ಗೊತ್ತಿರಬೇಕು. ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಕೌಶಲ್ಯಗಳನ್ನು ಇರುತ್ತದೆ. ಅದನ್ನು ಗುರುತಿಸಿ, ಪೋಷಿಸಿ ಬೆಳೆಸಬೇಕು ಇದು ಮುಖ್ಯ ಎಂದು ಅವರು ತಿಳಿಸಿದರು.
ಇಂದು ಬೇರೆ ಬೇರೆ ಸಾಮಾಜಿಕ ಜಾಲತಾಣ ಮೂಲಕ ವಿಷಯಗಳನ್ನು ಕಲಿತು ಜ್ಙಾನ ವೃದ್ಧಿ ಮಾಡಿಕೊಳ್ಳಬಹುದು, ರುಡ್ ಸೆಟ್ ಸಂಸ್ಥೆಯಲ್ಲಿ ಮಾತ್ರ ಕೌಶಲ್ಯದ ಜೊತೆಗೆ ವ್ಯಕ್ತಿತ್ವ ವಿಕಸನವನ್ನು ಕಲಿಸಿಕೊಡುತ್ತಾರೆ ಇದು ವ್ಯವಹಾರದಲ್ಲಿ ಬಹಳ ಮುಖ್ಯವಾಗಿರುತ್ತದೆ. ರುಡ್ ಸೆಟ್ ಸಂಸ್ಥೆಯಲ್ಲಿ ಎಲ್ಲಾ ವಿಷಯಗಳನ್ನು ಒಟ್ಟಿಗೆ ಸಿಗುವುದರಿಂದ ನಿಮಗೆ ಅನುಕೂಲವಾಗುತ್ತದೆ. ಮುಂದೆ ತರಬೇತಿಯಲ್ಲಿ ಕಲಿತ ವಿಷಯವನ್ನು ನೀವು ಗ್ರಾಹಕರಿಗೆ ಯಾವ ರೀತಿ ವಿಭಿನ್ನವಾಗಿ ನಿರೂಪಿಸುತ್ತೀರಿ ಅದರ ಮೂಲಕ ನಿಮ್ಮನ್ನು ನೀವು ತೋರಿಸಿಕೊಡಬೇಕು. ಅನ್ನುವುದನ್ನು ನೀವು ರೂಪಿಸಿಕೊಳ್ಳಲು ನಿಮ್ಮಲ್ಲಿ ಸಮಯ ನಿರ್ವಹಣೆ, ಹಣಕಾಸಿ ವ್ಯವಹಾರ, ಉತ್ತಮ ಮಾತುಗಾರಿಕೆ ಮುಖ್ಯವಾಗಿ ಇರಲಿ, ಗ್ರಾಹಕರ ನಂಬಿಕೆ ಉಳಿಸಿಕೊಂಡು ಉತ್ತಮವಾದ ಬಾಂಧವ್ಯವನ್ನು ಬೆಳೆಸಿಕೊಳ್ಳಿ, ನಿಮ್ಮ ವೃತ್ತಿ ಜೀವನದ ದಾರಿಯಲ್ಲಿ ನಿಮಗೆಲ್ಲ ಯಶಸ್ಸು ಸಿಗಲಿ ಎಂದು ಹಾರೈಸಿದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಎಂ. ಸುರೇಶ್ ರವರು ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿದರು. ಕಾರ್ಯಕ್ರಮದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿಯ ನಿಕಟಪೂರ್ವಕ ಪ್ರಾದೇಶಿಕ ನಿರ್ದೇಶಕರಾದ ಮಹಾವೀರ ಅಜ್ರಿ ಅವರು ಉಪಸ್ಥಿತರಿದ್ದರು.
ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ರವರು ಕಾರ್ಯಕ್ರಮ ನಿರೂಪಿಸಿದರು, ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಅವರು ವಂದಿಸಿದರು.
ತರಬೇತಿಯಲ್ಲಿ ಒಟ್ಟು 35 ಜನ ಅಭ್ಯರ್ಥಿಗಳನ್ನು ಭಾಗವಹಿಸಿದ್ದರು. ಕೆಲವು ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ