ಗೌರಿ ಅಪ್ಪನ ಮುದ್ದಿನ ಮಗಳು. ಗೌರಿ ಸ್ವಂತ ಮಗಳು ಅಲ್ಲ. ಒಂದು ದಿನ ಗೌರಿ ಅಪ್ಪ ವೆಂಕಯ್ಯ ಸಂಜೆ ಕೆಲಸ ಮುಗಿಸಿ ಬರುತ್ತಿರುವಾಗ ಜೋರಾಗಿ ಮಳೆ ಬರಲು ಶುರುವಾಯಿತು. ಸುತ್ತಮುತ್ತ ಮೋಡ ಕವಿದ ವಾತಾವರಣ. ಇನ್ನು ನನಗೆ ಈ ಮಳೆಯಿಂದ ಮನೆಗೆ ಹೋಗಲು ಸಾಧ್ಯವಿಲ್ಲ ಎಂದು ಯೋಚಿಸಿಕೊಂಡು ಬರುತ್ತಿರುವಾಗ ಒಂದು ಮನೆ ಕಾಣಿಸಿತು. ಅಲ್ಲಿಂದ ಛತ್ರಿ ತೆಗೆದುಕೊಂಡು ಹೋಗುವ ನಾಳೆ ಬೆಳಗ್ಗೆ ಕೆಲಸಕ್ಕೆ ಬರುವಾಗ ಕೊಟ್ರೆ ಆಯಿತು ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಂಡು ಬಾಗಿಲಿಗೆ ಬಡಿದ. ಯಾರಾದರೂ ಇದ್ದೀರಾ? ಎಂದು ಜೋರಾಗಿ ಬೊಬ್ಬೆ ಹಾಕಿದ.
ಹೌದು ಇದ್ದೇವೆ. ಆಚೆಯಿಂದ ಹೆಣ್ಣು ಮಗಳು ಬಾಗಿಲು ತೆರೆದಳು.. ಯಾರು? ನೀವು? ಏನು ಬೇಕೆಂದು ಕೇಳದೆ? ಅಯ್ಯೋ! ಅಣ್ಣ ಒಳಗೆ ಬನ್ನಿ, ಮೊದಲು' ಎಂದಳು ಅವಳು. 'ಬೇಡಮ್ಮ ಒಂದು ಛತ್ರಿ ಕೊಡಿ ಎಂದು ಕೇಳೋಕೆ ಬಂದೆ ಅಷ್ಟೇ'. ಆಯ್ತು ಈಗ ಒಳಗೆ ಬನ್ನಿ ಎಂದು ಆ ಹೆಣ್ಣು ಮಗಳು ಹೇಳಿದಳು.
ಇವಳ ಮುಗ್ಧತೆ ನೋಡಿ ವೆಂಕಯ್ಯ ಕೇಳಿದ ನಿನ್ನ ಹೆಸರು ಏನಮ್ಮಾ? ಅದಕ್ಕೆ ಕಮಲ ಅಂತ ಹೇಳಿದಳು. ಕಮಲ ತುಂಬು ಗರ್ಭಿಣಿ ಆಗಿದ್ದಳು. ಕಮಲನಿಗೆ ಮೂರೂ ಹೆಣ್ಣು ಮಕ್ಕಳು. ಇವಳ ಗಂಡ ಲಾಯರ್. ಅವನು ಕೂಡ ಕೆಲಸ ಮುಗಿಸಿಬಂದಿದ್ದ ಅಷ್ಟೆ. ನೀವಿಬ್ಬರೂ ಮಾತಡಿಕೊಂಡು ಇರಿ. ನಾನು ಟೀ ಮಾಡಿಕೊಂಡು ಬರ್ತೀನಿ ಎಂದು ಹೇಳಿ ಅಡುಗೆಕೋಣೆಗೆ ಹೋದಳು.
ಇವರಿಬ್ಬರೂ ಮಾತಡ್ತ ಇದ್ದರು. ಅಡುಗೆ ಕೋಣೆಯಿಂದ ಕೂಗಿನ ಶಬ್ದ ರೀ ಬನ್ನಿ ಎಂದು ಆ ಹುಡುಗಿ ಜೋರಾಗಿ ಬೊಬ್ಬೆ ಹಾಕುತ್ತಿದ್ದಳು. ಅಡುಗೆ ಕೋಣೆಗೆ ಹೋಗಿ ನೋಡುವಾಗ ಅವಳಿಗೆ ಹೆರಿಗೆ ನೋವು ಕಾಣಿಸಿತ್ತು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರು. ವೆಂಕಯ್ಯ ತುಂಬಾ ಗಾಬರಿಯಾಗಿದ್ದ. ದೇವರೇ ಆ ಹೆಣ್ಣು ಮಗಳಿಗೆ ಹೆರಿಗೆ ಸರಾಗವಾಗಿ ಆಗ್ಲಪ್ಪ ಎಂದು ಬೇಡಿಕೊಳ್ಳುತ್ತಿದ್ದ. ಡಾಕ್ಟರ್ ಹೆರಿಗೆ ರೂಮ್ ಯಿಂದ ಹೊರಗೆ ಬಂದು ಕಂಗ್ರಾಟ್ಸ್ ಹೆಣ್ಣು ಮಗು ಆಯ್ತು ಅಂತ ಹೇಳಿದರು.
ಆದರೆ ಕಮಲನ ಗಂಡ ಛೇ! ಅನಿಷ್ಟ ಹುಟ್ಟಿತಾ...? ಆ ಮಗುವನ್ನು ನನ್ನ ಕಣ್ಣೆದುರು ತಂದರೆ ಕೊಂದು ಹಾಕುವೆ. ಇದಕ್ಕಿಂತ ಮುಂಚೆ ಹುಟ್ಟಿದ ಮೂರು ಅನಿಷ್ಟ ಇವೆ. ಈ ಮಗುವನ್ನು ಕೊಲ್ಲಿ ಅಥವಾ ನೀವೇ ಸಾಕಿ ಎಂದು ಕೋಪದಿಂದ ಹೇಳಿ ಹೆರಿಗೆ ರೂಮ್‌ಗೆ ಹೋದ. ಕಮಲನ್ನು ನೋಡಿ ಥೂ ಅನಿಷ್ಟ ಹುಟ್ಟಿಸಿದಿಯಾ? ಎಂದು ಬೊಬ್ಬೆ ಹಾಕುತ್ತಾ ಕಮಲನಿಗೆ ಬಯ್ಯುತ್ತಾ ಇದ್ದ. ರೀ ಬೊಬ್ಬೆ ಆಕಬೇಡಿ. ದಯವಿಟ್ಟು ಕ್ಷಮಿಸಿ ಅದು ದೇವರು ಕೊಟ್ಟ ವರ. ನಾನು ಏನು ಮಾಡಲಿ? ಎಂದು ಕಮಲ ಬೇಸರದಿಂದ ಹೇಳಿದಳು.
ಅವಾಗ ವೆಂಕಯ್ಯ ನೀನು ಅಳಬೇಡಮ್ಮ. ಈಗ ನೀನು ಮಗುವಿಗೆ ಹಾಲು ಕುಡಿಸು. ಇಲ್ಲಾ ನಾನು ಹಾಲು ಕುಡಿಸಲಾ? ಅಯ್ಯೋ! ನೀನು ಏನಮ್ಮಾ? ನಿನ್ನ ಗಂಡ ತರ ಮಾತಾಡ್ತಿ? ಸುಮ್ನೆ ಇರು ಇವಾಗ. ಮೊದಲು ಹಾಲು ಕುಡಿಸು ಮತ್ತೆ ಮಾತಾಡೋಣ ಎಂದು ಹೇಳಿ ವೆಂಕಯ್ಯ ಹೊರಗೆ ನಡೆದ.
ಕೆಲ ಸಮಯ ನಂತರ ಕಮಲ ವೆಂಕಯ್ಯನನ್ನು ಕರೆದು 'ಅಣ್ಣ, ಗಂಡ ಹೆಂಡತಿ ನಾವಿಬ್ಬರೂ ಒಂದು ನಿರ್ಧಾರಕ್ಕೆ ಬಂದಿದ್ದೇವೆ? ಅದು ಏನೆಂದರೆ ಈ ಮಗು ಇನ್ನು ಮುಂದೆ ನಿಮ್ಮ ಸ್ವಂತ. ಈ ಮಗು ನಿಮ್ಮ ಮಡಿಲಿಗೆ ಹಾಕುತ್ತಾ ಇದ್ದೇವೆ. ವೆಂಕಯ್ಯನಿಗೆ ಖುಷಿಯೂ ಆಯ್ತು, ಬೇಸರವೂ ಆಯ್ತು. ಯಾಕೆಂದರೆ ವೆಂಕಯ್ಯನೇ ಅನಾಥ. ಆದರೆ ವೆಂಕಯ್ಯ ಅದನ್ನು ಲೆಕ್ಕಿಸದೆ ಮಗುವನ್ನು ಎತ್ತಿಕೊಂಡು ಹೊರಟ ಮನೆಗೆ. ಆಗ ಕಮಲ ಮಗುವಿನ ಹಣೆಗೆ ಮುತ್ತಿಟ್ಟು ಬೇಸರದಿಂದ ಅಲ್ಲಿಂದ ಹೊಗುತ್ತಾಳೆ.
ಕೆಲ ವರ್ಷಗಳ ನಂತರ ವೆಂಕಯ್ಯ ತನ್ನ ಮಗಳನ್ನು ಐಪಿಎಸ್ ಅಧಿಕಾರಿ ಮಾಡಿಸುತ್ತಾನೆ. ಆ ಹೆಣ್ಣು ಮಗುವೇ ಈ ಗೌರಿ. ವೆಂಕಯ್ಯನ ಒಂದು ಕನಸು ಇತ್ತು. ನನ್ನ ಹಾಗೆ ನನ್ನ ಮಗಳು ಅನಾಥೆ ಆಗಬಾರದು ಅಂತ. ಹಾಗೆಯೇ ಅವಳಿಗೆ ಮದುವೆ ಮಾಡಿ ಇಹಲೋಕ ತ್ಯಜಿಸಿದ. ಗೌರಿ ತನ್ನ ಸಾಕುತಂದೆಯ ನೆನಪಿಗೋಸ್ಕರ ತನ್ನ ಊರಲ್ಲಿ ವೆಂಕಯ್ಯ ಅನಾಥಾಶ್ರಮ ಕಟ್ಟಿದಳು.
- ದೀಕ್ಷಿತ. ಜೆ
ದ್ವಿತೀಯ ವಾಣಿಜ್ಯ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ