ಅಂಗನವಾಡಿ ಪರಿವರ್ತನೆಗೆ ರಾಷ್ಟ್ರವ್ಯಾಪಿ ಆಂದೋಲನ

Upayuktha
0


ಮಂಗಳೂರು: ದೇಶಾದ್ಯಂತ 14 ಲಕ್ಷ ಅಂಗನವಾಡಿಗಳನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ 'ನಂದ್ ಘರ್', 'ಅಗರ್ ಬಚ್‍ಪನ್ ಸೆ ಪೂಚಾ ಖಾನಾ ಖಾಯಾ, ತೋ ದೇಶ್ ಕಾ ಕಲ್ ಬನಾಯಾ ಎಂಬ ರಾಷ್ಟ್ರೀಯ ಆಂದೋಲನವನ್ನು ಅನಾವರಣಗೊಳಿಸಿದೆ.


ಈ ಆಂದೋಲನವು ಸಮಗ್ರ ಆರೋಗ್ಯ ರಕ್ಷಣೆ, ಗುಣಮಟ್ಟದ ಪೌಷ್ಠಿಕಾಂಶ ಮತ್ತು ಮಕ್ಕಳಿಗೆ ಅತ್ಯುತ್ತಮ ದರ್ಜೆಯ ಶಾಲಾಪೂರ್ವ ಶಿಕ್ಷಣವನ್ನು ಖಾತ್ರಿಪಡಿಸುವ ಮೂಲಕ ಭಾರತದ ಭವಿಷ್ಯದ ಪೀಳಿಗೆಯನ್ನು ಪೆÇೀಷಿಸುವ ಗುರಿಯನ್ನು ಹೊಂದಿದೆ.


ಈ ಆಂದೋಲನಕ್ಕೆ ಸೇರಲು ಮನೋಜ್ ಬಾಜಪೇಯಿ ಅವರನ್ನು 'ವೇದಾಂತ'ದ ಅಧ್ಯಕ್ಷ ಅನಿಲ್ ಅಗರ್ವಾಲ್ ಸ್ವಾಗತಿಸಿದ್ದಾರೆ.


ಬಾಜಪೇಯಿ ಅವರು www.nandghar.org ವೆಬ್‍ತಾಣಕ್ಕೆ ಭೇಟಿ ನೀಡಿ ದೇಣಿಗೆಯನ್ನು ನೀಡುವ ಮೂಲಕ,ಸ್ವಯಂಸೇವಕರಾಗುವ ಮೂಲಕ ಅಥವಾ 'ನಂದ್ ಘರ್'ನೊಂದಿಗೆ ಪಾಲುದಾರರಾಗುವ ಮೂಲಕ ಜನರು ಬೆಂಬಲ ನೀಡಬೇಕು ಎಂದು ಬಾಜಪೇಯಿ ಕೋರಿದರು.


ಖಾನಾಕಾಯಾಕ್ಯಾ ಆಂದೋಲನವನ್ನು ವಿಶ್ವಾಸಾರ್ಹ ವ್ಯಕ್ತಿಗಳು ಬೆಂಬಲಿಸಿ ಈ ಪರಿವರ್ತನೆಯ ಪ್ರಯಾಣದಲ್ಲಿ ಭಾಗವಹಿಸಲು ನಾಗರಿಕರು ಮತ್ತು ಸಮಾನ ಮನಸ್ಕ ಸಂಸ್ಥೆಗಳನ್ನು 'ನಂದ್ ಘರ್' ಕೋರಿದೆ. ಇದು ನಮ್ಮ ರಾಷ್ಟ್ರಕ್ಕೆ ಉತ್ತಮ ನಾಳೆಯ ಕನಸನ್ನು ನನಸಾಗಿಸಲು ದಾರಿ ಮಾಡಿಕೊಡುತ್ತದೆ ಎಂದು ಪ್ರಕಟಣೆ ಬಣ್ಣಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top