ಮಂತ್ರಾಲಯ ಶ್ರೀಗಳ ಅಧ್ಯಕ್ಷತೆಯಲ್ಲಿ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ "ಶಾಸ್ತ್ರೀಯ ಪರೀಕ್ಷೆ"

Upayuktha
0




ಬೆಂಗಳೂರು: ನಗರದ ಪವಮಾನಪುರ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಘನ ಅಧ್ಯಕ್ಷತೆಯಲ್ಲಿ ವೇದ ಘೋಷ ದೀಪ ಪ್ರಜ್ವಲನೆ ಮೂಲಕ ವಿದ್ವತ್ ಸಭಾ ಮತ್ತು ಶಾಸ್ತ್ರೀಯ ಪರೀಕ್ಷೆ ಕಾರ್ಯಕ್ರಮದ "ಉದ್ಘಾಟನೆ" ನೆರವೇರಿತು.


ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶ್ರೀಗಳವರ ಸಮ್ಮುಖದಲ್ಲಿ ಪರೀಕ್ಷಾ ಕಾರ್ಯಕ್ರಮ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತ ಕೇಸರಿ ರಾಜಾ ಎಸ್. ಗಿರಿ ಆಚಾರ್ಯರು ಉಪಸ್ಥಿತರಿದ್ದರು. ಮಂತ್ರಾಲಯ ಮಠದ ವಿದ್ಯಾರ್ಥಿಗಳಿಂದ, ಶ್ರೇಷ್ಠ ಪಂಡಿತರಿಂದ ಇವತ್ತು ಮತ್ತು ನಾಳೆ ಪವಮಾನಪುರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯಲಿದೆ.


ಡಾ|| ಎನ್. ವಾದಿರಾಜ ಆಚಾರ್ಯ, ಸತ್ತಿಗೇರಿ ಧೀರೇಂದ್ರ ಆಚಾರ್ಯ, ತಿರುಮಲ ಕುಲಕರಣಿ ಆಚಾರ್ಯ, ಬಂಡಿ ಶಾಮಾಚಾರ್ಯ, ಡಿ. ಧನಂಜಯಾಚಾರ್ಯ, ವೇಣುಗೋಪಾಲಾಚಾರ್ಯ, ಪವನ್‌ ಆಚಾರ್ಯ ಮತ್ತು ಹಲವಾರು ಪಂಡಿತರು ಉಪಸ್ಥಿತಿ. ಮಠದ ವಿದ್ಯಾರ್ಥಿಗಳು ಸಹಿತ ವಿದ್ವಾನ್ ಬಂಡ್ಯಾಚಾರ್ಯ, ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್, ಗಿರಿರಾಜ ಆಚಾರ್ ಹಾಗೂ  ಕೃಷ್ಣಾಚಾರ್, ನಂದಕಿಶೋರ್ ಆಚಾರ್ ಇದ್ದರು.


ನಾಳೆ ದಿನ ಶ್ರೀಪಾದರ ಪಟ್ಟಾಭಿಷೇಕೋತ್ಸವದ ಅಂಗವಾಗಿ ಸಂಜೆ 4-30ಕ್ಕೆ ಶ್ರೀಪಾದರ ಮೆರವಣಿಗೆ ಕಾರ್ಯಕ್ರಮ. ಡಾ|| ಎನ್  ವಾದಿರಾಜ ಆಚಾರ್ಯ, ಮತ್ತು ಹಲವಾರು ಪಂಡಿತರ ಉಪಸ್ಥಿತಿ ಇರಲಿದೆ.


ಶ್ರೀ ಶ್ರೀನಿವಾಸ ದೇವರಿಗೆ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಮಹಾ ಅಭಿಷೇಕ ಮತ್ತು ಶ್ರೀ ರಾಮ ದೇವರ ಸಂಸ್ಥಾನ ಪೂಜೆ ಮಂತ್ರಾಲಯ ಶ್ರೀಗಳಿಂದ ನೆರವೇರಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top