ಬೇಳದಲ್ಲಿ 'ಗ್ರಾಮಲೋಕ' ವಿಭಿನ್ನ ಸಾಹಿತ್ಯ ಕಾರ್ಯಕ್ರಮ

Upayuktha
0

ಮಂಗಳೂರು: ಸಾಹಿತ್ಯ ಅಕಾಡೆಮಿ, ನವದೆಹಲಿ ಹಾಗೂ ಕೊಂಕಣಿ ಬರಹಗಾರ ಹಾಗೂ ಕಲಾವಿದರ ಒಕ್ಕೂಟ ಮಂಗಳೂರು ಇವರ ಜಂಟಿ ಆಶ್ರದಲ್ಲಿ ಬದಿಯಡ್ಕ ಪಂಚಾಯತಿನ ಬೇಳ ಗ್ರಾಮದಲ್ಲಿ 'ಗ್ರಾಮಲೋಕ’ ವಿಭಿನ್ನ ಸಾಹಿತ್ಯ ಕಾರ್ಯಕ್ರಮ ನಡೆಯಿತು.


ಯುವ ಬರಹಗಾರರು ಹಾಗೂ, ನಾಟಕ, ಟಿವಿ ಧಾರವಾಹಿ ನಿರ್ದೇಶಕರಾದ ಸ್ಟ್ಯಾನಿ ಬೇಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗದ ಸಂಯೋಜಕರಾದ ಮೆಲ್ವಿನ್ ರೊಡ್ರಿಗಸ್ ಸಾಹಿತ್ಯ ಅಕಾಡೆಮಿಯ ಇತಿಹಾಸ ಹಾಗೂ ಕಾರ್ಯಕ್ರಮಗಳ ವಿವರಣೆಯನ್ನು ನೀಡಿದರು.


ಯುವಸಾಹಿತಿಗಳಾದ ರಾಜು ಉಕ್ಕಿನಡ್ಕ, ರವಿ ಕುಮಾರ್ ಕ್ರಾಸ್ತ, ಪರಿಸರ ಹೋರಾಟಗಾರರಾದ ರಾಜು ಕಿದೂರು ಹಾಗೂ ವಾಣಿ ಕ್ರಾಸ್ತ ಸ್ವರಚಿತ ಕವನಗಳನ್ನು ವಾಚಿಸುವುದರೊಂದಿಗೆ ಪರಿಸರ, ಭಾಷೆ ಹಾಗೂ ಸಂಸ್ಕೃತಿಯ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು. ಕವಿತಾ ಟ್ರಸ್ಟ್ ಸದಸ್ಯರಾದ ವಿನ್ಸೆಂಟ್ ಪಿಂಟೊ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top