ಮಂಗಳಾದೇವಿಯಲ್ಲಿ 23ನೇ ವರ್ಷದ ವಸಂತ ವೇದ ಶಿಬಿರ
ಮಂಗಳೂರು: ಬ್ರಾಹ್ಮಣರಾದ ನಾವುಗಳು ಆಚಾರ ವಿಚಾರ ಸಂಧ್ಯಾವಂದನಾದಿ ಜಪ ತಪ ಅನುಷ್ಠಾನಗಳನ್ನು ಮಾಡಿಕೊಂಡು ಸಮಾಜದಲ್ಲಿ ಸುಸಂಸ್ಕೃತ ಮನುಷ್ಯರಾಗಿ ಬಾಳಬೇಕು. ಹುಟ್ಟಿನಿಂದ ಸಾವು ತನಕ ಶೋಡಶ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ಹಾಗಾದಾಗ ಮಾತ್ರ ಧಾರ್ಮಿಕ ಪ್ರಜ್ಞೆ ಜಾಗೃತವಾಗಲು ಸಾಧ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲೆ ಇದರ ಪ್ರಧಾನ ಸಂಚಾಲಕರಾದ ಶ್ರೀಧರ ಹೊಳ್ಳ ಅಭಿಪ್ರಾಯ ಪಟ್ಟರು.
ಅವರು ಕೂಟ ಮಹಾಜಗತ್ತು (ರಿ) ಮಂಗಳೂರು ಅಂಗಸಂಸ್ಥೆಯ ವತಿಯಿಂದ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿ ಹಮ್ಮಿಕೊಳ್ಳಲಾದ 23ನೇ ವರ್ಷದ 20 ದಿನಗಳ ವಸಂತ ವೇದ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಸಿಎ ಚಂದ್ರಮೋಹನ್, ಮಂತ್ರ ಪಠಣದಿಂದ ಆತ್ಮ ಶುದ್ಧಿಯಾಗಿ ಮನಸ್ಸು ಸದೃಢವಾಗುವುದು. ಶಾಲಾ ಚಟುವಟಿಕೆಯಲ್ಲಿ ಏಕಾಗ್ರತೆ ಲಭಿಸಲು ಸಾಧ್ಯ ಎಂದರು. ಶಿಬಿರದ ಗುರುಗಳಾದ ವಿದ್ವಾಂಸರಾದ ಶ್ರೀಕರ ಭಟ್, ರಾಮಚಂದ್ರ ಭಟ್, ಉಪಾಧ್ಯಕ್ಷರಾದ ರಘುರಾಮ್ ರಾವ್ ಶುಭ ಹಾರೈಸಿದರು.
ಮಂಗಳಾದೇವಿ ದೇವಳದ ಆಡಳಿತ ಮೊಕ್ತೇಸರ ಅರುಣ್ ಐತಾಳ್ ಪ್ರಧಾನ ಅರ್ಚಕ ವಾಸುದೇವ ಐತಾಳ್, ಚಕ್ರಪಾಣಿ ಗೋಪಾಲಣ್ಣ, ಕೃಷ್ಣ ಮಯ್ಯ, ಪದ್ಮನಾಭ ಮಯ್ಯ, ಶಿವರಾಂ ರಾವ್ ಅರಿಕೆರೆ, ಕೂಟವಾಣಿ ಸಂಪಾದಕ ಆಡೂರು ಕೃಷ್ಣ ರಾವ್, ಲಲಿತಾ ಉಪಾಧ್ಯಾಯ, ಮೊದಲಾದವರು ಉಪಸ್ಥಿತರಿದ್ದರು.
ಸುಮಾರು 35 ಜನ ತ್ರಿಮತಸ್ಥ ಬ್ರಾಹ್ಮಣ ವಟುಗಳು ಶಿಬಿರದ ಸದುಪಯೋಗ ಪಡೆದುಕೊಂಡರು. ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ಸ್ವಾಗತಿಸಿ ನಿರೂಪಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಕೊರ್ಯಾ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ