ಬೆಂಗಳೂರು: ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು (ರಿ.) ಪುತ್ತೂರು, ರಕ್ತಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು, ಶ್ರೀ ಕೃಷ್ಣ ಯುವಕ ಮಂಡಲ (ರಿ.) ಸಿಟಿಗುಡ್ಡೆ ಪುತ್ತೂರು ಇದರ ವತಿಯಿಂದ ಕುಮಾರಿ ಹೃದ್ಯಾ ಭಟ್ ಕೆ. ಅವರ ಸಾಧನೆಯನ್ನು ಗುರುತಿಸಿ "ಬೆಂಗಳೂರಿನ ಹೆಮ್ಮೆಯ ಮನೆ ಮಗಳು" ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು.
ಕು|| ಹೃದ್ಯಾರವರ ಮನೆಯಲ್ಲಿ ನಡೆದ ಚೊಕ್ಕದಾದ ಕಾರ್ಯಕ್ರಮದಲ್ಲಿ ಬಿ. ರಾಜೀವಗೌಡ, ಮನೋಹರ್,ಕಲಾವಿದ ಕೃಷ್ಣಪ್ಪ ಶಿವನಗರ,ನವೀನ್ ಪುತ್ತೂರು ಇವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಅಮೃತ ಸ್ಕೂಲ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀಯುತ ರಾಜೇಶ್ ಕೋಟೆ ಅವರು ಕು|| ಹೃದ್ಯಾರನ್ನು ಪೇಟ, ಶಾಲು, ಹಾರ, ಸನ್ಮಾನ ಪತ್ರ, ಫಲಗುಚ್ಛದೊಂದಿಗೆ ಸನ್ಮಾನಿಸಿ ಇನ್ನಷ್ಟು ಕೀರ್ತಿ ಸಿಗಲಿ ಎಂದು ಹಾರೈಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ