ಬೆಂಗಳೂರು: ‘ದತ್ತಾಂಶ ಅಂದರೆ ಡೇಟಾ ಆಧಾರಿತ ನಿರ್ಣಯಗಳನ್ನು ಮ್ಯಾನೇಜ್‌ಮೆಂಟ್ ವಲಯದಲ್ಲಿ ಅನೇಕ ಸಲ ಕೈಗೊಳ್ಳಬೇಕಾಗುತ್ತದೆ. ಏಕೆಂದರೆ ಡೇಟಾ ಅಥವ ಮಾಹಿತಿ ಹೇರಳವಾಗಿ ನಮಗೆ ಈಗ ಲಭ್ಯ. ಆದರೆ ನಮಗೆ ಸಿಗುತ್ತಿರುವ ಡೇಟಾ ಅಥವ ಮಾಹಿತಿ ಸರಿಯಾಗಿದೆಯೇ ಅಥವಾ ಕೊರತೆಗಳಿಂದ ಕೂಡಿರುವಂತದ್ದೇ ಅನ್ನುವುದರ ಬಗ್ಗೆ ಸೂಕ್ತ ಸಂಶೋಧನೆ ಅತ್ಯಗತ್ಯ. ಕೆಲವು ಸಂದರ್ಭಗಳಲ್ಲಿ ಸುಖಾಸುಮ್ಮನೆ ಡೇಟಾ ಚಾಲಿತ ನಿರ್ಣಯಗಳನ್ನು ಕೈಗೊಂಡರೆ ಅವು ವ್ಯತಿರಿಕ್ತವಾಗುವ ಸಾಧ್ಯತೆ ಇದೆ. ನಮ್ಮ ದೇಶದ ಇತಿಹಾಸದಲ್ಲಿ ಆಗಿಹೋದ ಪುರಾತನ ಕಾಲದ ವಿಜ್ಞಾನಿಗಳು ಸಂಶೋಧನೆಯನ್ನು ತಪಸ್ಸಿನ ರೀತಿ ಮಾಡುತ್ತಿದ್ದರು ಎಂಬುದನ್ನು ಮರೆಯಬಾರದು. ನಮ್ಮ ರ‍್ಯಭಟ, ಭಾಸ್ಕರ, ವರಾಹಮಿಹಿರ ಮೊದಲಾದ ವಿಜ್ಞಾನಿಗಳ ಪರಂಪರೆಗೆ ನಾವು ಸೇರಿದ್ದೇವೆ ಎಂಬ ಹೆಮ್ಮೆ ನಮ್ಮಲ್ಲಿ ಸದಾ ನೆಲೆಗೊಳ್ಳಬೇಕು’, ಎಂದು ಮಹಾರಾಣಿ ಕ್ಲಸ್ಟರ್ ವಿಶವಿದ್ಯಾಲಯದ ಕುಲಪತಿ ಡಾ. ಎಲ್. ಗೋಮತಿ ದೇವಿ ನುಡಿದರು. ಅವರು ಯಲಹಂಕದಲ್ಲಿರುವ ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಆಯೊಜಿತವಾಗಿದ್ದ ‘ಮಾಹಿತಿ ಆಧಾರಿತ ನಿರ್ಣಯ ಕೈಗೊಳ್ಳುವಿಕೆ ಹಾಗೂ ಬದಲಾಗುತ್ತಿರುವ ಮ್ಯಾನೇಜ್‌ಮೆಂಟ್ ಕಾರ್ಯ ವಿಧಾನಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರಿದು ಅವರು-
‘ಮ್ಯಾನೇಜ್‌ಮೆಂಟ್ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಪ್ರಶಂಸಾರ್ಹವಾಗಿ ನಿರ್ವಹಿಸಿದ ಕೀರ್ತಿ ನಮ್ಮ ದಕ್ಷಿಣ ಭಾರತದ ಚೋಳರ ರಾಜ ವಂಶಕ್ಕೆ ಸಲ್ಲುತ್ತದೆ. ಅವರ ಆಡಳಿತಾವಧಿಯಲ್ಲಿ ನಮ್ಮ ದಕ್ಷಿಣ ಭಾರತದಿಂದ ವಸ್ತ್ ಗಳು, ಮಸಾಲ ಪದಾರ್ಥಗಳು, ಔಷಧ, ಆಭರಣ ಇತ್ಯಾದಿಗಳನ್ನು ಪೌರಾತ್ಯ ದೇಶಗಳಿಗೆ ವ್ಯವಸ್ಥಿತವಾಗಿ ರಫ್ತು ಮಾಡಲಾಗುತ್ತಿತ್ತು. ಅವರು ಕಂಡುಕೊಂಡಿದ್ದ ವಾಣಿಜ್ಯ ವಹಿವಾಟುಗಳ ನಿರ್ವಹಣಾ ರೀತಿಯನ್ನು ಅಧ್ಯಯಿನಿಸಿದರೆ ಅನೇಕ ಮಹತ್ವದ ಅಂಶಗಳು ತಿಳಿಯುತ್ತವೆ. ಇವುಗಳನ್ನಾಧರಿಸಿ ಪ್ರಸ್ತುತ ಮ್ಯಾನೇಜ್‌ಮೆಂಟ್ ಕರ‍್ಯವಿಧಾನಗಳನ್ನು ಮತ್ತಷ್ಟು ಸುಧಾರಿಸಬಹುದು’, ಎಂದರು.
ರಾಷ್ಟ್ರದ 40ಕ್ಕೂ ಅಧಿಕ ವಿವಿಧ ವಿದ್ಯಾಸಂಸ್ಥೆಗಳಿಂದ 120ಕ್ಕೂ ಅಧಿಕ ಸಂಶೋಧಕರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ಕೃಷಿ ವಹಿವಾಟು, ಆರ್ಥಿಕ ನಿರ್ವಹಣೆ, ಮಾರುಕಟ್ಟೆಗಳ ಅನ್ವೇಷಣೆ ಹಾಗೂ ಸಿಬ್ಬಂದಿ ನಿರ್ವಹಣೆ ಕುರಿತಂತೆ ಅನೇಕ ವಿಷಯಗಳನ್ನು ಕುರಿತ ವಿದ್ವತ್ಪೂರ್ಣ ಸಂವಾದಗಳು ನಡೆದವು.
ಹೈಟೆಕ್ ಮತ್ತು ಐ.ಎಸ್.ವಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಮಧುಸೂದನ್ ಮೂರ್ತಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಸಿ.ಎಸ್. ಶೇಖ್ ಲತೀಫ್ ಪ್ರಮುಖ ಉಪನ್ಯಾಸಗಳನ್ನು ನೀಡಿದರು. ಗೌರವಾನ್ವಿತ ಅತಿಥಿಗಳಾಗಿ ಎನ್.ಐ.ಪಿ.ಎಂ ನ ವಿಶ್ರಾಂತ ಅಧ್ಯಕ್ಷ ಜಿ. ಗಿರಿನಾರಾಯಣ್ ಪಾಲ್ಗೊಂಡಿದ್ದರು. ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ. ಎಂ. ವೇಣುಗೋಪಾಲ್ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಅಧ್ಯಕ್ಷ ಭಾಷಣದಲ್ಲಿ ಶ್ರೀಯುತರು, ‘ಮಾಹಿತಿ ಆಧಾರಿತ ನಿರ್ಣಯಗಳನ್ನು ಕೈಗೊಳ್ಳುವಾಗ ಯಾವುದೇ ಕಾರಣಕ್ಕೂ ನೈತಿಕತೆಗೆ ಭಂಗ ಬರದಂತೆ ಗಮನ ಹರಿಸಬೇಕು. ಏಕೆಂದರೆ ಭಾರತ ದೇಶ ನಿರ್ಮಿತವಾಗಿರುವುದೇ ನೈತಿಕತೆಯ ತಳಹದಿಯಲ್ಲಿ’, ಎಂದರು.
ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕಿ ಹಾಗೂ ಸಂಶೊಧನಾ ಮುಖ್ಯಸ್ಥೆ ಡಾ. ಎಸ್. ಸಂಧ್ಯಾ ಪ್ರಾರಂಭದಲ್ಲಿ ಸರ್ವರನ್ನೂ ಸ್ವಾಗತಿಸಿ, ವಿಚಾರ ಸಂಕಿರಣದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಕೊನೆಯಲ್ಲಿ ಸಹಾಯಕ ಪ್ರಾಧ್ಯಾಪಕ ಡಾ. ಶರತ್ ವಂದನಾರ್ಪಣೆ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ