ದ್ವಿತೀಯ ಪಿಯುಸಿ : ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

Chandrashekhara Kulamarva
0

ವಿಜ್ಞಾನ ವಿಭಾಗದ ತನುಷ್ ಗೆ 600 ಕ್ಕೆ 597, ಗಮನ ಗೌರಿ ಎಸ್. ಎಮ್ ಗೆ 595



ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಳೆದ ಏಪ್ರಿಲ್‌ನಲ್ಲಿ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -2 ರಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. 

        

ವಿಜ್ಞಾನ ವಿಭಾಗದ ತನುಷ್( ಪುತ್ತೂರಿನ ಹರೀಶ್ ನಾಯ್ಕ್ ಹಾಗೂ ಅನಿತಾ ಇವರ ಪುತ್ರ) 597 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಗಮನ ಗೌರಿ ಎಸ್. ಎಮ್ ( ಬೆಳ್ತಂಗಡಿಯ ಮಹೇಶ್ ಎಸ್ ಹಾಗೂ ದೀಪಾ ಇವರ ಪುತ್ರಿ) 595 ಅಂಕಗಳೊಂದಿಗೆ ಕಾಲೇಜಿಗೆ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. 

          

ವಿಜ್ಞಾನ ವಿಭಾಗದಲ್ಲಿ ಅದಿತಿ .ಕೆ ( ಪುತ್ತೂರಿನ ದರ್ಬೆಯ ಕೆ.ಶಂಕರ್ ಹಾಗೂ ವಂದನಾ ಶಂಕರ್ ಇವರ ಪುತ್ರಿ ) 594 ಅಂಕಗಳೊAದಿಗೆ ಕಾಲೇಜಿಗೆ ತೃತೀಯ ಸ್ಥಾನಿಯಾಗಿದ್ದಾರೆ. ಅಚಿಂತ್ಯ ಶಾಸ್ತ್ರಿ ( ಮಂಜೇಶ್ವರ ತಾಲೂಕಿನ ವಿಶ್ವೇಶ್ವರ ಶಾಸ್ತ್ರಿ  ಹಾಗೂ ಶ್ರೀದೇವಿ ದಂಪತಿಗಳ ಪುತ್ರ) 593, ಸೌಮ್ಯ ಕೆ ( ಪುತ್ತೂರು, ಬನ್ನೂರಿನ ಸುರೇಶ್.ಕೆ ಹಾಗೂ ಗಾಯತ್ರಿ ಇವರ ಪುತ್ರಿ ) 592 , ರಶ್ಮಿ ಆರ್ ನಾಯ್ಕ್ (ಪುತ್ತೂರು, ಬನ್ನೂರಿನ  ರಿತೇಶ್ ಆರ್ ನಾಯ್ಕ್ ಹಾಗೂ ಲಾವಣ್ಯ ಬಿ ಇವರ ಪುತ್ರಿ ) 591 ಅಂಕಗಳನ್ನು ಗಳಿಸಿರುತ್ತಾರೆ. 

        

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಶಿಕ್ಷಕ ರಕ್ಷಕ ಸಂಘ ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top