ಬ್ಯಾಡ್ಮಿಂಟನ್: ಸತತ 18ನೇ ಬಾರಿ ಆಳ್ವಾಸ್ ಚಾಂಪಿಯನ್

Chandrashekhara Kulamarva
0


ಮೂಡುಬಿದಿರೆ: ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಫ್‌ನಲ್ಲಿ ಆಳ್ವಾಸ್ ಕಾಲೇಜು ಪ್ರಶಸ್ತಿ ಜಯಭೇರಿಯಾಗಿದೆ. ಸತತ 18ನೇ ಬಾರಿ ದಿ. ಫ್ಯಾಬಿಯನ್ ಕುಲಾಸೊ ಸ್ಮಾರಕ ಪರ್ಯಾಯ ಫಲಕವನ್ನು ಮುಡಿಗೇರಿಸಿಕೊಂಡಿದೆ. 


ಫೈನಲ್‌ನಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ತಂಡವನ್ನು 35-05, 35-11 ನೇರ ಸೆಟ್‌ಗಳಿಂದ ಸೋಲಿಸಿದ ಆಳ್ವಾಸ್ ಕಾಲೇಜು ತಂಡವು ಚಾಂಪಿಯನ್ ಆಯಿತು.  


ಸೆಮಿಫೈನಲ್‌ನಲ್ಲಿ ಕಾರ್ಕಳದ ಎಸ್‌ವಿಟಿ ಕಾಲೇಜು ತಂಡವನ್ನು 35-7, 35-11 ನೇರ ಸೆಟ್‌ಗಳಿಂದ ಸೋಲಿಸಿತ್ತು. ವಿಜೇತ ತಂಡವನ್ನು  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ. 



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top