ಶ್ರೀನಿವಾಸ ಫಾರ್ಮಸಿ ಕಾಲೇಜಿನಲ್ಲಿ ಇನ್ನೋವೇಟಿವ್ ಪ್ರಾಕ್ಟೀಸಸ್ ಮತ್ತು ಪೇಶೆಂಟ್ ಸೇಪ್ಟಿ- ರಾಷ್ಟ್ರೀಯ ವಿಚಾರಸಂಕಿರಣ

Upayuktha
0

 



ಮಂಗಳೂರು: ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್, ದ.ಕ ಸ್ಥಳೀಯ ಶಾಖೆ, ಮಂಗಳೂರು ಇದರ ಸಹಯೋಗದೊಂದಿಗೆ ಮಂಗಳೂರಿನ ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ  ಫಾರ್ಮಸಿ ಕಾಲೇಜ್‌ನಲ್ಲಿ 17 ಮತ್ತು 18 ಮೇ 2024ರಂದು "ಇನ್ನೋವೇಟಿವ್ ಪ್ರಾಕ್ಟೀಸಸ್ ಮತ್ತು ಪೇಶೆಂಟ್ ಸೇಪ್ಟಿ"  ಎಂಬ ವಿಷಯದಲ್ಲಿ 6ನೇ ರಾಷ್ಟ್ರೀಯ ವಿಚಾರಸಂಕಿರಣವು ನಡೆಯಿತು.


ಈ ವಿಚಾರಸಂಕಿರಣವನ್ನು ಡಾ. ಸಿಎ .ಎ ರಾಘವೇಂದ್ರರಾವ್ ಚಾನ್ಸೆಲರ್, ಶ್ರೀನಿವಾಸ್ ಯುನಿವರ್ಸಿಟಿ ಮತ್ತು ಅಧ್ಯಕ್ಷರು, ಎ.ಶಾಮರಾವ್ ಪ್ರತಿಷ್ಠಾನ, ಮಂಗಳೂರು ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ರೋಗಿಗಳ ಸುರಕ್ಷತೆಯು ಸುರಕ್ಷಿತ ಔಷಧಗಳು ಮತ್ತು ಅವುಗಳ ಮುನ್ನಚ್ಚರಿಕೆಯ ಬಳಕೆಯಿಂದ ಪ್ರಾರಂಭವಾಗುತ್ತದೆ, ಈ ಗುರಿಯನ್ನು ಸಾಧಿಸಲು ಫಾರ್ಮಸಿ ವೃತ್ತಿಪರರಲ್ಲದೆ ಇತರ ಆರೋಗ್ಯ ವೃತ್ತಿಪರ ಸಹಭಾಗಿತ್ವದಿಂದ ಸುರಕ್ಷಿತ ಔಷಧ ಬಳಕೆಯು ಸಾಧ್ಯ ಎಂದು ತಿಳಿಸಿದರು.


ಮುಖ್ಯ ಅತಿಥಿಗಳಾದ ಮಂಗಳೂರಿನ ಡೆಪ್ಯುಟಿ ಡ್ರಗ್ಸ್ ಕಂಟ್ರೋಲರ್, ಟಿ.ಪಿ. ಸುಜಿತ್, ಇವರು ಫಾರ್ಮಾಸಿಸ್ಟ್ಗಳು, ಔಷಧ ತಜ್ಞರು ಮತ್ತು ಔಷಧಿಗಳ ಸುರಕ್ಷಿತ ಮತ್ತು ಪರಿಣಾಮಕಾರಿ ಬಳಕೆಯ ರಕ್ಷಕರು, ಅಡ್ಡ ಪರಿಣಾಮಗಳನ್ನು ಪತ್ತೆ ಹಚ್ಚಲು, ವರದಿ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲು ಮಾತ್ರವಲ್ಲದೆ ಅಡ್ಡ ಪರಿಣಾಮಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ಈ ಸಂದರ್ಭದಲ್ಲಿ ವಿಚಾರ ಸಂಕಿರಣದ ಪ್ರಮುಖ ಟಿಪ್ಪಣಿಯನ್ನು ಮತ್ತು ರಾಷ್ಟ್ರೀಯ ವಿಚಾರಸಂಕಿರಣದ ಸಂಚಿಕೆಯನ್ನು ಬಿಡುಗಡೆ ಮಾಡಿದರು.


ಗೌರವಾನ್ವಿತ ಅತಿಥಿಗಳಾಗಿ ಡಾ.ಅಜಿತ್ ಸಿಂಗ್, ಫೌಂಡರ್ ಆಂಡ್ ಸಿ.ಇ.ಒ, ಕುರಿಯೊ ಆಂಡ್ ಕ್ಲಿಮೆಡ್ ರಿಸರ್ಚ್ ಸೊಲ್ಯೂಶನ್ಸ್, ಐಸಿಎಮ್.ಆರ್ ರಿಸರ್ಚ್ ಸೈಂಟಿಸ್ಟ್, ಕಸೂರ್ಬಾ ಮೆಡಿಕಲ್ ಕಾಲೇಜು, ಮಾಹೆ, ಮಣಿಪಾಲ ಇವರು ವಿಶ್ವಾದ್ಯಂತ ತೀವ್ರವಾದ, ತಪ್ಪಿಸಬಹುದಾದ ಔಷಧಿ ಸಂಬಂಧಿತ ಪ್ರತಿಕೂಲ ಪರಿಣಾಮಗಳು ದೊಡ್ಡ ಸವಾಲಿನ ಗುರಿಯಾಗಿದೆ. ಔಷಧ ತಜ್ಞರು ಪ್ರತಿಕೂಲ ಔಷಧ ಪ್ರತಿಕ್ರಿಯೆಗಳನ್ನು ಗುರುತಿಸುವ ಮತ್ತು ವಿಶ್ಲೇಷಿಸುವ ಮೂಲಕ, ಸುರಕ್ಷಿತ ಔಷಧಗಳನ್ನು ಅಭಿವೃದ್ಧಿಪಡಿಸಬಹುದು.


ಡಾ.ಎ.ಆರ್. ಶಬರಾಯ, ಪ್ರಾಂಶುಪಾಲರು, ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿ, ಮತ್ತು ಅಧ್ಯಕ್ಷರು, ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್, ದ.ಕ ಸ್ಥಳೀಯ ಶಾಖೆ, ಮಂಗಳೂರು ಇವರು ಅತಿಥಿಗಳನ್ನು ಸ್ವಾಗತಿಸಿದರು. ಆರೋಗ್ಯ ಕೇಂದ್ರಗಳ ವ್ಯವಸ್ಥೆಯಲ್ಲಿ ಒದಗಿಸಲಾದ ಔಷಧಿಗಳ ಬಳಕೆಗೆ ಸಂಬಂಧಿಸಿದ ಅಪಾಯಗಳನ್ನು ಗುರುತಿಸಲು ಮತ್ತು ಪ್ರಮಾಣೀಕರಿಸಲು ಆಸ್ಪತ್ರೆ ಆಧಾರಿತ ಉಸ್ತುವಾರಿ ಮೇಲ್ವಿಚಾರಣೆ ಮತ್ತು ವರದಿ ಮಾಡುವ ಕಾರ್ಯಕ್ರಮಗಳು ಅತ್ಯಗತ್ಯ ಎಂದು ತಿಳಿಸಿದರು.


ಗೌರವಾನ್ವಿತ ಅತಿಥಿಗಳಾಗಿ  ಉದಯ್ ಕಿಶೋರ್ ಪಿ, ಮತ್ತು  ಬಿ.ಎನ್. ಬಾಬು, ಅಸಿಸ್ಟೆಂಟ್ ಡ್ರಗ್ಸ್ ಕಂಟ್ರೋಲರ್, ಮಂಗಳೂರು ಮತ್ತು ಡಾ. ಗ್ರೇಸ್ ಮೇರಿ ಜಾನ್, ಇನ್ಫೆಕ್ಸಿಯಸ್ ಡಿಸೀಸಸ್ ಕ್ಲಿನಿಕಲ್ ಸ್ಪೆಷಲಿಸ್ಟ್ ಆಂಡ್ ಚೀಪ್ ಕ್ಲಿನಿಕಲ್ ಫಾರ್ಮಾಸಿಸ್ಟ್, ಬಿಲಿವರ್ಸ್  ಚರ್ಚ್ ಮೆಡಿಕಲ್ ಕಾಲೇಜ್ ಹಾಸ್ಪಿಟಲ್, ತಿರುವೆಲ್ಲ, ಕೇರಳ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಡಾ.ಪದ್ಮಾವತಿ ಪಿ ಪ್ರಭು, ಮತ್ತು ಫ್ಮಿತ್ ಸೆಲ್ವಿಯ ಮಿರಾಂಡ ಇವರು ಕಾರ್ಯಕ್ರಮ ನಿರ್ವಹಿಸಿದರು. ಡಾ. ಇ.ವಿ.ಎಸ್. ಸುಬ್ರಹ್ಮಣ್ಯಂ, ಪ್ರೊಫೆಸರ್, ಶ್ರೀನಿವಾಸ ಫಾರ್ಮಸಿ ಕಾಲೇಜ್ ಮತ್ತು ಉಪಾಧ್ಯಕ್ಷರು, ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್, ದ.ಕ ಸ್ಥಳೀಯ ಶಾಖೆ, ಮಂಗಳೂರು ಇವರು ವಂದನಾರ್ಪಣೆಗೈದರು. ಈ ವಿಚಾರ ಸಂಕಿರಣದಲ್ಲಿ ಫಾರ್ಮಸಿ ವಿಭಾಗದ ಆಭ್ಯರ್ಥಿಗಳು ಭಾಗವಹಿಸಿ ಸಂಶೋಧನಾ ಪತ್ರಗಳನ್ನು ಮಂಡಿಸಿದರು. ಸುಮಾರು 550ಕ್ಕೂ ಹೆಚ್ಚು ಪ್ರತಿನಿಧಿಗಳು ವಿಚಾರಸಂಕಿರಣದಲ್ಲಿ ಭಾಗವಹಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top