- ಡಾ. ಈಶ್ವರ ದೈತೋಟ ಎಂ.ಎ. ಡಿ.ಲಿಟ್
ಮೂರು ದಶಕಗಳ ಹಿಂದೆ ನಾನು ಮಂಡ್ಯದಲ್ಲಿ ಕನ್ನಾಡ ಸಮಾವೇಶವೊಂದರ ಪುಸ್ತಕ ಪ್ರದರ್ಶನಕ್ಕೆ ಹೋಗಿದ್ದೆನು. ಅಲ್ಲಿ 15 ರೂ ಕೊಟ್ಟು "ಕನ್ನಡಿಗರು ಆಳಿದ ಅಮೆರಿಕ" ಎಂಬ ಸಂಶೋಧನಾತ್ಮಕ ಕೃತಿಯೊಂದನ್ನು 15 ರೂಪಾಯಿ ಕೊಟ್ಟು ಕೊಂಡಿದ್ದೆನು. ಅದರಲ್ಲಿ 71-ರಿಂದ 74ನೇ ಪುಟಗಳವರೆಗೆ ದಕ್ಷಿಣ ಅಮ್ರಿಕಾದ ಕೋಪಕಬಾನದ ಹೆಸರೂ ಕಂಡಿತ್ತು. ಕೋಪ ಕಬಾನಾಕ್ಕೆ ತಾಪಸ ವನ ಎಂದು ವಿವರಣೆ ಇತ್ತು. ಪುಸ್ತಕದಲ್ಲಿ ಪ್ರಾಚೀನ ಅಮ್ರಿಕಾ "ಹಿಂದೂ ರಾಜರುಗಳು ಬಳಸುತ್ತಿದ್ದ ಸಂಸ್ಕೃತ ಮಿಶ್ರಿತ" ಒಂದು ನೂರರಷ್ಟು ಕನ್ನಡ ಪದಗಳ ಪಟ್ಟಿಯೂ ಇತ್ತು. ಋಷಿಮುನಿಗಳು ತಪಸ್ಸು ಗೈಯುತ್ತಿದ್ದ ವನ ಎಂದು ವಿವರಣೆ ಇತ್ತು.
ನಾನು ಕೆಲವು ದಶಕಗಳ ಹಿಂದೆ ಕೋಪಾಕಬಾನಾಕ್ಕೆ ಕೆಲವು ವಾರಗಳಿಗೆ ಕರ್ತವ್ಯ ನಿರ್ವಹಣೆಗಾಗಿ ಹೋಗಿದ್ದೆನು. ಅಲ್ಲಿ ನಾರುಡೆಯುಟ್ಟ ಋಷಿ ಕನ್ನಿಕೆಯರಾರೂ ಕಾಣಿಸಿರಲಿಲ್ಲ. ಆದರೆ, ನೀರುಡೆಯುಟ್ಟ -ಉಡದೇ ಇದ್ದ ಜವ್ವಂತಿಯರು ಸಮುದ್ರ ತೀರದುದ್ದಕ್ಕೂ ಕುಶಿಕುಶಿಯಿಂದ ನಲಿದಾಡುತ್ತಾ, ಕಣ್ಣು ಲಕಲಕಿಸುತ್ತಾ ಓಡಾಡುತ್ತಲಿದ್ದರು. ಅವರಿಗೆ ಇಂಗ್ಲೀಷ್, ಕನ್ನಡ, ಸಂಸ್ಕೃತ ಭಾಷೆಗಳಾವುವೂ ಬರುತ್ತಿರಲಿಲ್ಲ.
ನಾನು ಅವರನ್ನು ಕನ್ನಡದಲ್ಲಿ ಮಾತನಾಡಿಸಿದಾಗ ತಲೆಯಾಡಿಸುತ್ತಿದ್ದರು. ಅವರು ಆಡುತ್ತಲಿದ್ದ, ಹಾಡುತ್ತಲಿದ್ದ ಭಾಷೆಯಲ್ಲಿ ಕೆಲವು ತುಳು-ಕನ್ನಡ ಪದಗಳಿವೇನೋ ಎಂಬ ಅನುಮಾನ ಮೂಡುತ್ತಲಿತ್ತು. ಮಾತನಾಡಿಸಲು ಹೋದರೆ ಅವರಾರೆಲ್ಲರೂ "ಟೇಕ್‌ಮಿ ಟೇಕ್‌ಮೀ ಎಂದು ಹತ್ತಿರವೇ ಬಂದು ಹಲ್ಲು ಕಿಸಿಯುತ್ತಿದ್ದರು. ಆದರೆ, ನನಗೆ ಮಂಡ್ಯದಲ್ಲಿ ದೊರಕಿದ ಅಶೋಕ ನಗರದ ಲೇಖಕ ಪ್ರಕಾಶಕ ಡಾ. ವೇಣುಗೋಪಾಲಾಚಾರ್ಯರ ಬರವಣಿಗೆಯಲ್ಲಿ ಕನ್ನಡ ಮತ್ತು ದಕ್ಷಿಣ ಅಮ್ರಿಕಾದ ಬ್ರೆಝಿಲ್ ದೇಶದ ಹಲವಾರು ಪದ ಮತ್ತು ವಾಕ್ಯಗಳನ್ನು ಕೊಟ್ಟು ಅಲ್ಲಿದ್ದ ಋಷಿಮುನಿಗಳು, ಋಷಿ ಕನ್ನಿಕೆಯರು ಎಲ್ಲಾ ಮಹಾಭಾರತದ ನಾಡಾದ ಹಿಂದೂ ದೇಶದ ಅನೇಕ ಸಂಸ್ಕೃತಿಗಳ ಸಂಕೇತಗಳಲ್ಲಿವೆಯೆಂದು ತಮ್ಮ ಪುಸ್ತಕದಲ್ಲಿ ವರ್ಣಿಸಿದ್ದುದನ್ನು ಓದಿದ್ದು ನನಗಿವತ್ತೂ ನೆನಪಿದೆ.
ಕೆಲವು ಉದಾಹರಣೆಗಳು ಹೀಗಿವೆ. ನಾನದನ್ನು ಇಲ್ಲಿ "ಕನ್ನಡದ ಸ್ವರೂಪದಲ್ಲೇ ಬಳಸಿಕೊಂಡಿದ್ದೇನೆ" ಇಲ್ಲು, ಅನಂತೋತ್ಸವ, ಅರ್ಯಮಾರ್ಗ, ಗುಡಿಕಾಂಚನ, ಗೌತಮಾಲಯ, ಪಾಪಕಟ ಪಾತಾಳ, ಪ್ರಾಕಾರ, ದೇವಶಾಲೈ, ಚತುರ್ತಳ, ಚಪಾತಿ, ರಾಮನವಮಿ, ವೀರಸಖ, ಪತ್ರಾವಳಿ, ವಕ್ಷಸ್ಥಾನ ಎಂದು ಪಟ್ಟಿ ಮಾಡುತ್ತಾ ಹೋಗಬಹುದು.
ಮತ್ತಷ್ಟು ವಿವರಗಳನ್ನು ತಮ್ಮ ಬರವಣಿಗೆಯಲ್ಲಿ ಅಮೆರಿಕಾದ ಪ್ರಾಚೀನ ಹಿಂದೂ ಸಾಮ್ರಾಜ್ಯಗಳಲ್ಲಿ ವೈಷ್ಣವ ಭಕ್ತಿ ಮತ್ತು ಕನ್ನಡದ ಬಗ್ಗೆ ಹೇಳುತ್ತಾ ಆಚಾರ್ಯರು "ಮೆಕ್ಸಿಕನ್ ನ್ಯಾಶನಲ್ ಮ್ಯೂಸಿಯಂನಲ್ಲಿರುವ ವಾಮನ್ ಇನ್ ಮ್ಯಾಕ್ಸಿಕೋ ಎಂಬ ಶಿಲಾಕೃತಿಯ ಕೆಳಗೆ ಕನ್ನಡ ಲಿಪಿಯಲ್ಲಿ ಸ್ಷಷ್ಟವಾಗಿ ದೊಡ್ಢ ಅಕ್ಷರಗಳಲ್ಲಿ ಕೆತ್ತಿರುವ ಬಲೀಂದ್ರ (ತುಳುವೇ ಇರಬೇಕು) ಮತ್ತು ಪೆರುವಿನ ಮೊದಲನೆಯ ಚಕ್ರವರ್ತಿ ಆರ್ಯ ಮಾನಸ ತಪನ ರಾಜ್ಯ ಸಭೆಯ ಶಿಲ್ಪದಲ್ಲಿ ಮೆಕ್ಸಿಕನ್ ಹಾಗೂ ಕನ್ನಡದ ಒಕ್ಕಣೆಗಳಿಂದ ಈ ಮೇಲಿನ ಗುಡಿಗೋಪುರಗಳೂ ವಿಗ್ರಹಗಳೂ ಪ್ರಾಚೀನ ಅಮ್ರಿಕಾ ಹಿಂದೂ ಸಾಮ್ರಾಟರಿಂದ ನಿರ್ಮಿಸಲ್ಪಟ್ಟ ಕೃತಿಗಳೇ ಎಂಬುದು ನಿರ್ವಿವಾದ ಎಂದಿದ್ದಾರೆ. (ಪುಟ ೫೨)
ಪ್ರಾಚೀನ ಅಮೆರಿಕದ ಹಿಂದೂ ವಂಶಸ್ತರ ಹಾಗೂ ಕನ್ನಡ-ತೆಲುಗು ಭಾಷಾ ಹಿಂದೂಗಳ ಎಲ್ಲ ಆಚಾರ- ವ್ಯವಹಾರಗಳಲ್ಲಿಯೂ ಏಕರೂಪತೆಯು ಕಂಡು ಬರುವುದು. ಇದನ್ನು ಮರ್ಲಿನ್ ಕೆ. ಮೇಯರ್ ಅವರು ರಚಿಸಿರುವ "ಲಾಂಗ್ವೆಜಸ್ ಆಫ್ ಗ್ವಾಟೆಮಾಲ" ಎಂಬ ಪುಸ್ತಕದಲ್ಲಿ ಈ ದೇಶೀಯರ ದೈನಂದಿನ ಜೀವನವನ್ನು ವಿವರಿಸುವ ಮೂಲ ವಾಕ್ಯಗಳು" ಕಂಡು ಬರುತ್ತವೆ ಎಂದು ಗುರುತಿಸಿದ್ದಾರಂತೆ. ಜಪಾನ್, ಚೀನಾ, ರೋಮ್, ಕೊರಿಯಾ, ಅರಬ್ ದೇಶಗಳಲ್ಲಿ ಹಿಂದೂ ಸಂಸ್ಕೃತಿಯ ಪ್ರಭಾವ ಇದೆಯೆಂದು ಸಾಧಿಸುವ ಈ ಪುಸ್ತಕದಲ್ಲಿ ಅಲ್ಲಲ್ಲಿ ಕೆಲವೆಡೆ ಈ ರೀತಿಯಲ್ಲಿ ಕನ್ನಡದ ಪ್ರಭಾವವೂ ಇದೆಯೆಂದು ಅವರು ತಿಳಿವಳಿಕೆ ಕೊಟ್ಟಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ